Advertisement

ಜೀವನ ಕಾಯಕದ ಮಧ್ಯೆ ಹಸಿರೀಕರಣಕ್ಕೆ ಸಂಕಲ್ಪ

01:49 PM Mar 22, 2021 | Team Udayavani |

ಶ್ರೀರಂಗಪಟ್ಟಣ: ಆತನಿಗೆ ಪರಿಸರ ಬಗ್ಗೆ ಎಲ್ಲಿಲ್ಲದ ಕಾಳಜಿ, ಪರಿಸರದ ಸಂರಕ್ಷಣೆಗಾಗಿ ಸದಾ ಹಗಲಿರುಳು ಚಿಂತಿಸುವ ಯುವಕ. ತನ್ನ ಬಿಡುವಿಲ್ಲದ ಕೆಲಸ ನಡುವೆಯೂ ಆತ ಪರಿಸರದ ಕೆಲಸಕ್ಕೆ ತನ್ನನ್ನು ತಾನುತೊಡಗಿಸಿಕೊಂಡಿರುವ ಪರಿಸರ ಪ್ರೇಮಿ ಶ್ರೀರಂಗಪಟ್ಟಣದಲ್ಲಿದ್ದಾನೆ.

Advertisement

ಪಟ್ಟಣದಿಂದ ಐದು ಕಿ.ಮೀ, ದೂರದಲ್ಲಿಯ ಕರೀಘಟ್ಟ ಬೆಟ್ಟ ಹಸಿರೀಕರಣಕ್ಕೆ ಶ್ರಮಿಸುತ್ತಿದ್ದಾರೆ. ಇದೇ ಬೆಟ್ಟದ ಮೇಲೆ ಚಿಕ್ಕತಿರುಪತಿ ಖ್ಯಾತಿಯ ಶ್ರೀನಿವಾಸ ಸ್ವಾಮಿದೇವಾಲಯವಿದ್ದು, ಸಹಸ್ರಾರು ಭಕ್ತರು,ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ.

ವಾಟರ್‌ ಕ್ಯಾನ್‌ ಮಾರಾಟ: ಪಟ್ಟಣದ ನಿವಾಸಿ ರಮೇಶ್‌ ಪರಿಸರ ಪ್ರೇಮಿಯಾದ ಕಥೆ ಎಲ್ಲೆಡೆ ಕೇಳಿ ಬರುತ್ತಿದೆ. ಈತ ಒಂದು ಗೂಡ್ಸ್‌ ಆಟೋಇಟ್ಟು ಕೊಂಡು ಮನೆ ಮನೆಗೆ ಕ್ಯಾನ್‌ನಲ್ಲಿ ಶುದ್ಧಕುಡಿಯುವ ನೀರು (ಬಿಸ್ಲರಿ) ತಂದು ಮಾರಾಟಮಾಡುತ್ತಿದ್ದಾನೆ. ಇದು ಈತನ ಜೀವನ ವೃತ್ತಿಯೂ ಹೌದು. ಜೊತೆಗೆ ಪರಿಸರದ ಸಂರಕ್ಷಣೆ ಕಾರ್ಯಕ್ಕೆ ಪೇರೇಪಿಸಿಕರೀಘಟ್ಟ ಬೆಟ್ಟದ ಹಸಿರೀಕರಣಕ್ಕೆ ಶ್ರಮಿಸುತ್ತಿದ್ದಾನೆ.

ಪಕ್ಷಿಗಳಿಗಾಗಿ ಬಾಟಲ್‌ನಲ್ಲಿ ನೀರು: ವಾಟರ್‌ ಕ್ಯಾನ್‌ ಬಳಸಿಕೊಂಡು ನದಿ, ಕಾಲುವೆಯಿಂದ ನೀರು ತುಂಬಿ ಕೊಂಡು ಕರೀಘಟ್ಟದ ತಪ್ಪಲಿನಲ್ಲಿರುವ ವಿವಿಧಗಿಡಗಳಿಗೆ ಪ್ರತಿನಿತ್ಯ ನೀರುಣಿಸುವ ಕಾಯಕಮಾಡಿಕೊಂಡು ಬಾಟಲ್‌ನಲ್ಲಿ ನೀರು ತುಂಬಿ ಗಿಡಗಳಿಗೆ ಕಟ್ಟಿ ಪಕ್ಷಿಗಳಿಗೂಬಾಯಾರಿಕೆ ತಣಿಸುತ್ತಿದ್ದಾರೆ. ತನ್ನಜೀವನ ಶ್ರಮದ ಕೆಲಸದ ನಡುವೆ ಕೂಡ ಇವರು ಪರಿಸರದ ಸಂರಕ್ಷಣೆಗಾಗಿ ಸಮಯ ಮೀಸಲಿಟ್ಟು, ಪ್ರತಿ ಫ‌ಲಾಪೇಕ್ಷೆ ಇಲ್ಲದೆ ಪರಿಸರದ ಸೇವೆ ಮಾಡುತ್ತಾ ಬರುತ್ತಿದ್ದಾನೆ. ಸಾವಿರಾರು ಗಿಡ ನೆಟ್ಟು ಪೋಷಣೆ: ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟದ ಬೆಟ್ಟದ ತಪ್ಪಲಿನಲ್ಲಿಇದುವರೆಗೂ ಸಾವಿರಾರು ಗಿಡನೆಟ್ಟು ಪೋಷಣೆ ಮಾಡುತ್ತಾ ಬರುತ್ತಿದ್ದು, ಪ್ರತಿದಿನ ಆ ಗಿಡಗಳಿಗೆ ನೀರುಣಿಸಿ ಪೋಷಣೆ ಮಾಡ್ತಿದ್ದಾರೆ. ಇವ್ರ ಈ ಪರಿಸರದ ಕಳಕಳಿಯಿಂದ ಮಳೆಗಾಲದಲ್ಲಿ ಈ ಬೆಟ್ಟವು ಹಸಿರಿನಿಂದ ನಳನಳಿಸುತ್ತದೆ.

Advertisement

ಬೇಸಿಗೆಯಲ್ಲಿ ಬೆಟ್ಟಕ್ಕೆ ಬೆಂಕಿ: ಬೇಸಿಗೆಯಲ್ಲಿ ಪ್ರತಿ ವರ್ಷ ಈ ಬೆಟ್ಟಕ್ಕೆ ಬೆಂಕಿ ಬಿದ್ದು ಇಲ್ಲಿನ ಪರಿಸರ ಹಾಳಾಗುತ್ತಿದೆ. ಇಷ್ಟಾದರೂ ಕೂಡ ಇವ್ರು ತಮ್ಮ ಪರಿಸರ ಕಳಕಳಿ ಬಿಡದೆ ಬೆಂಕಿ ಬಿದ್ದಾಗಲೂ ಬೆಂಕಿ ಆರಿಸುವ ಕೆಲಸ ಸೇರಿದಂತೆ ಬೆಂಕಿ ಬಿದ್ದ ಬಳಿಕ ಕೂಡ ಇಲ್ಲಿನ ಬೆಟ್ಟದ ಪರಿಸರದ ಹಸಿರೀಕರಣಕ್ಕೆ ಶ್ರಮಿಸುತ್ತಿದ್ದಾರೆ. ಇವರಿಗೆ ಅರಣ್ಯ ಇಲಾಖೆಯವರ ಸಹಕಾರ ಇದ್ದು, ವಿವಿಧ ರೀತಿಯ ಸಸಿಗಳನ್ನು ನೀಡುತ್ತಿದ್ದಾರೆ.

ಅರಣ್ಯ ಇಲಾಖೆ ಸಹಕಾರ :

ಕರೀಘಟ್ಟ ಬೆಟ್ಟದ ಹಸಿರೀಕರಣಕ್ಕಾಗಿ ಆಟೋಮೂಲಕ ಬೆಟ್ಟದ ಬುಡದಲ್ಲಿರುವ ಕಾಲುವೆಯಿಂದ ವಾಟರ್‌ ಕ್ಯಾನ್‌ನ ಮೂಲಕ ನೀರು ತಂದು ಈ ಗಿಡಗಳಿಗೆ ನೀರುಣಿಸುವ ಕೆಲಸಮಾಡುತ್ತಾರೆ. ಒಮ್ಮೊಮ್ಮೆ ಕಿಡಿಗೇಡಿಗಳುಹರಿಕೆ ಮಾಡಿ ಬೆಟ್ಟದಲ್ಲಿಯ ಒಣ ಹುಲ್ಲಿಗೆಬೆಂಕಿ ಹಚ್ಚುವುದರಿಂದ ಹಸೀರಿಕರಣಭಸ್ಮವಾಗುತ್ತಿದೆ. ಬೆಂಕಿ ಅವಘಡ ಸಂಭವಿಸಿದ ವೇಳೆ ನಂದಿಸಲು ಸ್ಥಳೀಯರು, ಅರಣ್ಯ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ ಜೊತೆ ಬೆಂಕಿನಂದಿಸಲು ಶ್ರಮಿಸುತ್ತಾರೆ. ಇದರ ಮಧ್ಯೆ ಪರಿಸರ ಸಂರಕ್ಷಿಸುವ ಇವರ ಈ ಪರಿಸರದ ಕೆಲಸ ಗಳನ್ನು ನೋಡಿ ವಿವಿಧ ಸಂಘ ಸಂಸ್ಥೆ ಹಾಗೂ ಶಾಲಾ ಕಾಲೇಜಿನ ಕೆಲ ಯುವಕರ ತಂಡವು ಕೂಡ ಇವರ ಪರಿಸರ ಕಳಕಳಿಗೆ ಕೈಜೋಡಿಸಿದೆ. ಭಾನುವಾರ ರಜಾ ದಿನಗಳ ಬಿಡುವಿನ ವೇಳೆಯಲ್ಲಿ ಇವರ ಜೊತೆ ಗಿಡಗಳಿಗೆ ನೀರುಣಿಸುವ ಕೆಲಸ ಮಾಡ್ತದ್ದಾರೆ.

ಕಳೆದ 5-6 ವರ್ಷಗಳಿಂದ ಸಾಲು ಮರದ ತಿಮ್ಮಕ್ಕ ಅವರ ಮಾರ್ಗ ಅನುಸರಿಸಿ, ಕರೀಘಟ್ಟ ಬೆಟ್ಟದ ತಪ್ಪಲಿನಲ್ಲಿ ನೆರಳು ಮಾಡುವ ಕಾರ್ಯಕ್ಕೆ ತೊಡಗಿಕೊಂಡೆ. ಪ್ರತಿ ದಿನದ ನನ್ನ ವೃತ್ತಿ ಜೊತೆಗೆಕಾಯಕವಾಗಿ ಇಲ್ಲಿನ ಅರಣ್ಯ ಇಲಾಖೆ ಹಾಗೂವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಮೈಗೂಡಿಸಿಕೊಂಡಿದ್ದೇನೆ. ಪ್ರಾಣಿ ಪಕ್ಷಿಗಳ ಹಾಗೂ ಪರಿಸರ ಸಂರಕ್ಷಣೆಗೆ ನನ್ನ ಕೈಲಾದ ಈ ಸೇವೆ ಇದಾಗಿದೆ. ರಮೇಶ್‌, ಪರಿಸರ ಪ್ರೇಮಿ

ರಮೇಶ್‌ ಅವರು ಈ ಭಾಗದಲ್ಲಿರುವುದು ಅರಣ್ಯ ಸಂರಕ್ಷಣೆಗೆಅನುಕೂಲವಾಗಿದೆ ಅರಣ್ಯ ಇಲಾಖೆಯ ವಿವಿಧ ಮರಗಿಡ ರಕ್ಷಣೆ, ಪರಿಸರ, ಪ್ರಚಾರಕಾರ್ಯಕ್ರಮದಲ್ಲಿ ನಮ್ಮೊಂದಿಗೆ ವಿವಿಧಸಂಘ ಸಂಸ್ಥೆಗಳ ಹಾಗೂ ಶಾಲಾ ಕಾಲೇಜಿನವಿದ್ಯಾರ್ಥಿಗಳೊಂದಿಗೆ ಆಗಮಿಸಿ ಅರಣ್ಯ ಸಂರಕ್ಷಣೆಗೆ ಕೈಜೊಡಿಸುತ್ತಾರೆ. ಸುನೀತಾ, ಆರ್‌ಎಫ್ಒ

 

ಗಂಜಾಂ ಮಂಜು

Advertisement

Udayavani is now on Telegram. Click here to join our channel and stay updated with the latest news.

Next