Advertisement

ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ ಬಿತ್ತುವ ಪ್ರಾಧ್ಯಾಪಕ

11:59 AM Jun 06, 2019 | Suhan S |

ಹುಣಸೂರು: ಪ್ರಾಧ್ಯಾಪಕರೊಬ್ಬರ ಸತತ ಪ್ರಯತ್ನದಿಂದಾಗಿ ಕಾಲೇಜಿನ ಆವರಣದಲ್ಲಿಂದು ಕಾಲೇಜು ವನ ನಿರ್ಮಾಣವಾಗಿದೆ.

Advertisement

ಹುಣಸೂರು ಡಿ.ದೇವರಾಜರಸು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ, ಕಾಲೇಜಿನ ಎಕೋ ಕ್ಲಬ್‌ ಸಂಚಾಲಕ ಸಿ.ರವಿ ಅವರೇ ತಮ್ಮೊಂದಿಗೆ ವಿದ್ಯಾರ್ಥಿ, ಯುವ ಜನರಲ್ಲಿ ಪರಿಸರ ಪ್ರೀತಿ ಬಿತ್ತುತ್ತಿರುವ ನಿಸರ್ಗ ಪ್ರೇಮಿಯಿಂದಾಗಿ ಕ್ಯಾಂಪಸ್‌ ಹಸಿರಿನಿಂದ ನಳನಳಿಸುತ್ತಿದೆ.

ಆವರಣದಲ್ಲಿ ಏನೇನಿದೆ: ಕಳೆದ 6 ವರ್ಷಗಳಿಂದ ಕ್ಯಾಂಪಸ್‌ನಲ್ಲಿ ಹೊಂಗೆ, ಬೇವು, ಹಲಸು, ತೇಗ, ತೆಂಗು, ಸಪೋಟ, ದಾಳಿಂಬೆ ಸೇರಿದಂತೆ ತರಾವರಿ ಹೂವಿನ ಗಿಡಗಳನ್ನು ಬೆಳೆಸಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

ಮಕ್ಕಳಿಗೆ ಮನವರಿಕೆ: ಕಾಲೇಜಿನ ಎಕೋ ಕ್ಲಬ್‌ನ ಸಂಚಾಲಕರಾಗಿರುವ ರವಿ ಅವರು ಸದಾ ಪರಿಸರದ ಬಗ್ಗೆ ವಿದ್ಯಾರ್ಥಿಗಳನ್ನು ಸೆಳೆದಿಡುವ ಮಾತುಗಳನ್ನಾಡುತ್ತಾರೆ. ಪಾಠದ ನಡುವೆಯೂ ಪರಿಸರ, ಭೂಮಿಯ ತಾಪಮಾನದಿಂದಾಗುವ ಅವಾಂತರಗಳ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡುತ್ತಾರೆ.

ಸಸಿಗಳ ಹಾರೈಕೆ: ಇವರಿಗೆ ಸಸಿ ನೆಡುವುದೆಂದರೆ ಅದಮ್ಯ ಪ್ರೀತಿ, ನೆಟ್ಟ ಗಿಡಗಳಿಗೆ ನಿತ್ಯ ನೀರೆರೆಯು ವುದರಲ್ಲೂ ಮತ್ತಷ್ಟು ಪರಿಸರ ಪ್ರೀತಿ ಮೆರೆಯು ತ್ತಾರೆ. ಎಕೋ ಕ್ಲಬ್‌ನ ಮೂಲಕ ವಿದ್ಯಾರ್ಥಿಗಳಿಂದ ಗಿಡ ನೆಡಿಸಿದ್ದರೂ, ನಿತ್ಯ ಕಾಲೇಜಿಗೆ ಬಂದು ಮೊದಲು ತಾವೇ ಸಸಿಗಳಿಗೆ ನೀರುಣಿಸಿದ ನಂತರವೇ ಪಾಠ-ಪ್ರವಚನ ಇವರ ದಿನಚರಿ.

Advertisement

ಇವರ ಪರಿಸರದ ಮೇಲಿನ ಕಾಳಜಿ ಹಲವಾರು ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಸೆಳೆದು ಅವ ರಲ್ಲಿ ಗಿಡ, ಮರ-ಪ್ರಾಣಿ, ಪಕ್ಷಿಗಳ ಬಗ್ಗೆ ಅಪಾರ ಪ್ರೀತಿ ಬೆಳೆಯುವಂತೆ ಮಾಡುವಲ್ಲಿ ಸಫಲರಾಗಿ ದ್ದಾರೆ. ಅಲ್ಲದೆ ಸಹೋದ್ಯೋಗಿ ಪ್ರಾಧ್ಯಾಪಕರು ಸಹ ಇವರ ಪರಿಸರ ಕಾಳಜಿಗೆ ಕೈಜೋಡಿಸಿದ್ದಾರೆ.

● ಸಂಪತ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next