ಬ್ರಹ್ಮಾವರ: ಪ್ರಕೃತಿಯಲ್ಲಿ ಆಗುವ ಅಸಮತೋಲನಕ್ಕೆ ಪರಿಸರ ನಾಶವೇ ಕಾರಣ ಎಂದು ಹೆಬ್ರಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಹೇಳಿದರು.
ಅವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೊಕ್ಕರ್ಣೆ ಪ್ರಾಥಮಿಕ ವಿಭಾಗದಲ್ಲಿ ಹೆಬ್ರಿ ವಲಯ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವನಮಹೋತ್ಸ ವದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಗಿಡ ಮರಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕು. ಗಿಡಗಳನ್ನು ಗೆಳೆಯರಂತೆ ಪ್ರೀತಿಸಬೇಕು. ನೆಟ್ಟ ಗಿಡಗಳನ್ನು ಪೋಷಣೆ ಮಾಡುವುದರ ಮೂಲಕ ಪರಿಸರ ಪ್ರಜ್ಞೆಯನ್ನು ಬೆಳೆಸಿ ಕೊಳ್ಳಬೇಕು ಎಂದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೆಂಕಟೇಶ ಸುವರ್ಣ ಅವರು ಗಿಡಕ್ಕೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿದರು.ಮುಖ್ಯೋಪಾಧ್ಯಾಯ ಭಾಸ್ಕರ್ ಪೂಜಾರಿ ಅವರು ವನಮಹೋತ್ಸವದ ಮಾಹಿತಿ ನೀಡಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷೆ ಯಶೋದಾ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯ ವಸಂತ ಸೇರ್ವೆಗಾರ್, ಫಾರೆಸ್ಟರ್ ಮಂಜು ಗಾಣಿಗ, ಸಿಬಂದಿ ಉಪಸ್ಥಿತರಿದ್ದರು. ಹಿರಿಯ ಸಹ ಶಿಕ್ಷಕಿ ಗುಲಾಬಿ ಸ್ವಾಗತಿಸಿ, ಸಹ ಶಿಕ್ಷಕಿ ಆಶಾಕಿರಣ ನಿರೂಪಿಸಿದರು.ಗೌರವ ಶಿಕ್ಷಕಿ ಯಶೋದಾ ವಂದಿಸಿ, ಗೌರವ ಶಿಕ್ಷಕಿಯರಾದ ಪ್ರೀತಿ, ರೇಷ್ಮಾ, ಸವಿತಾ ಸಹಕರಿಸಿದರು.