Advertisement
ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್‌ಇಸಿಎಫ್) ವತಿಯಿಂದ ಪರಿಸರಾಸಕ್ತರು ಸೇರಿಕೊಂಡು ನಗರದ ತಣ್ಣೀರುಬಾವಿ ಟ್ರೀಪಾರ್ಕ್‌ನ ಪ್ರಕೃತಿಯ ಮಡಿಲಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಎರಡನೇ ಪರಿಸರ ಸಮ್ಮೇಳನ ಉದ್ಘಾಟನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
ಎತ್ತಿನಹೊಳೆ ಸಹಿತ ವಿವಿಧ ಪರಿಸರ ಸಂಬಂಧಿಸಿದ ವಿಚಾರದಲ್ಲಿ ನ್ಯಾಯಾ ಲಯದಲ್ಲಿ ಹೋರಾಟ ನಡೆಸುತ್ತಿರುವ ಡಾ| ರವೀಂದ್ರನಾಥ ಶಾನುಭಾಗ್ ಅವರಿಗೆ “ನ್ಯಾಯಶ್ರೀ’, ಸುಕ್ರಿ ಬೊಮ್ಮಗೌಡ ಮತ್ತು ಕುತ್ತಾರು ತಿಮ್ಮಕ್ಕ ಅವರಿಗೆ “ಜನಪದ ಶ್ರೀ’, ತುಳಸಿಗೌಡ ಮತ್ತು ಡಿಯಾಗೋ ಬಸಾöವ್ ಸಿದ್ಧಿ ಅವರಿಗೆ “ವನಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Advertisement
ಸಮ್ಮೇಳನ ವೇದಿಕೆಯಿಂದ ಮಾವಿನ ಗಿಡವನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗಿ ಟ್ರೀಪಾರ್ಕ್‌ನ ಒಂದು ಭಾಗದಲ್ಲಿ ನೆಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಎನ್‌ಇಸಿಎಫ್ ರಾಜ್ಯಾಧ್ಯಕ್ಷ ಸ್ವರ್ಣ ಸುಂದರ್ ಸ್ವಾಗತಿಸಿ, ನಯನಾ ಶೆಟ್ಟಿ ನಿರೂಪಿಸಿದರು. ಎನ್‌ಇಸಿಎಫ್ ಸಂಚಾಲಕ ಶಶಿಧರ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.
ಕರಾವಳಿಯಲ್ಲಿ ಕಡಲಾಮೆಗಳೇ ಇಲ್ಲ!
ಸಂಶೋಧನ ವಿದ್ಯಾರ್ಥಿ ಮಮತಾ ಕೆ.ಎಸ್. ಮಾತನಾಡಿ, ಲಕ್ಷಾಂತರ ಸಂಖ್ಯೆಯಲ್ಲಿ ಸಮುದ್ರ ತೀರಕ್ಕೆ ಬಂದು ಮೊಟ್ಟೆ ಇಡುತ್ತಿದ್ದ ಕಡಲಾಮೆ ಗಳು ಕಳೆದ ಏಳು ವರ್ಷಗಳಿಂದ ದಡಕ್ಕೆ ಬಂದಿಲ್ಲ. ಮಂಗಳೂರಿನಿಂದ ಕಾರವಾರದ ವರೆಗೆ ಕಡಲು ತೀವ್ರವಾಗಿ ಕಲುಷಿತಗೊಂಡಿರುವುದರಿಂದ ಈ ಪರಿಸ್ಥಿತಿ ಉದ್ಭವಿಸಿದೆ. ಹಡಗುಗಳ ತ್ಯಾಜ್ಯ ತೈಲವನ್ನು ಸಮುದ್ರಕ್ಕೆ ಸುರಿಯುತ್ತಿರುವುದರಿಂದಲೂ ಜಲ ಮಾಲಿನ್ಯ ಉಂಟಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸರಕಾರ ಯೋಜನೆ ರೂಪಿಸಬೇಕು ಎಂದರು. ಗಮನ ಸೆಳೆದ “ಕೋರ್ಟ್ ಕಲಾಪ’!
ಪರಿಸರ ಸಮ್ಮೇಳನದ ಹಿನ್ನೆಲೆಯಲ್ಲಿ ವಿಭಿನ್ನವಾಗಿ “ಕೋರ್ಟ್ ಕಲಾಪ’ ನಡೆಯಿತು. ನ್ಯಾಯಾಧೀಶರ ಸ್ಥಾನದಲ್ಲಿ ಸಾಮಾಜಿಕ ಹೋರಾಟಗಾರ ರವೀಂದ್ರನಾಥ್ ಶಾನುಭಾಗ್ ಭಾಗವಹಿಸಿದ್ದರು. ಸುಕ್ರಿ ಬೊಮ್ಮಗೌಡ, ತುಳಸೀ ಗೌಡ ವಾದ ಮಂಡಿಸಿ, ಒಂದು ಕಡೆ ಮರಗಳನ್ನು ಬೆಳೆಸುತ್ತಿದ್ದರೆ, ಮತ್ತೂಂದೆಡೆ ವಿವಿಧ ಯೋಜನೆಗಳಿಗೆ ಅವ್ಯಾಹತವಾಗಿ ಮರ ಹನನ ಮಾಡಲಾಗುತ್ತಿದೆ. ಹಾಗಾಗಿ ಸರಕಾರದ ಜವಾಬ್ದಾರಿಯನ್ನು ಎಚ್ಚರಿಸುವ ಕೆಲಸವೂ ಆಗಬೇಕು ಎಂದರು. ಶಿವಮೊಗ್ಗದ ಪರಿಸರ ಹೋರಾಟಗಾರ ಅಖೀಲೇಶ್ ಚಿಪ್ಪಳಿ ಮಾತನಾಡಿ, ಪರಿಸರ ರಕ್ಷಣೆಗೆ ಮಾಧವ ಗಾಡ್ಗಿàಳ್ ವರದಿ ಜಾರಿಯಾಗಬೇಕು ಎಂದರು. ವಕೀಲರಾದ ಸುಮಾ ಆರ್. ನಾಯಕ್, ಎಸ್.ಬಿ. ಪಾಟೀಲ್ ರಾಯಚೂರು, ಅಭಿಜಿತ್, ನಟರಾಜ್, ಜೀವನ್‌ದಾಸ್ ಶೆಟ್ಟಿ, ಜಿನೇಂದ್ರ ಬಿ., ರಮೇಶ ನಾಡಗೌಡ ಅಭಿಪ್ರಾಯ ಮಂಡಿಸಿದರು. ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌ಇಸಿಎಫ್ ಸಂಚಾಲಕ ಶಶಿಧರ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.