Advertisement
ಉತ್ತಮ ಪರಿಸರವಿಲ್ಲದೇ ಮನುಷ್ಯ ಬದುಕಲು ಸಾಧ್ಯವಿಲ್ಲ. ಪರಿಸರ ಉಳಿಸಿ-ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ 5ನೇ ತರಗತಿ ವಿದ್ಯಾರ್ಥಿ ಸುಜಿತ್ ಶ್ರೀಶೈಲ ಮಣ್ಣೂರ ಗಮನಸೆಳೆಯುವಂತಹ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ.ವಿದ್ಯಾಗಮ ಯೋಜನೆ ಆರಂಭಗೊಂಡ ಬಳಿಕ ಸುಜಿತ್ ಪಠ್ಯದ ಜತೆಗೆ ಪರಿಸರ ಕಾಳಜಿ ಬೆಳೆಸಿಕೊಂಡು ಶಾಲಾ ಆವರಣದಲ್ಲಿ ಅಶೋಕ, ಬಾದಾಮ, ದಾಸವಾಳ, ಪೇಪರ್ ಪ್ಲಾವರ್, ಕಣಗಲಿ, ಮಲ್ಲಿಗೆ ಕಂಟಿ ಸೇರಿದಂತೆ 50 ಗಿಡಗಳ ಪಾಲನೆ ಮಾಡುತ್ತಿದ್ದಾನೆ. ಅನಗತ್ಯ ಕಾಲಹರಣ ಮಾಡುತ್ತಿರುವ ಇತರೆ ವಿದ್ಯಾರ್ಥಿಗಳಿಗೆ ಸುಜಿತ್‌ನ ಪರಿಸರ ಕಾಳಜಿ ಮಾದರಿಯಾಗಿದೆ. ಕಳೆದ ಒಂದು ವಾರದಿಂದ ಸುಜಿತ್ ಕಟ್ಟಿಗೆಯ ಎಳೆಯುವ ಗಾಡಿಯನ್ನು ತಯಾರಿಸಿ ಅದರಲ್ಲಿ ಮಣ್ಣಿನ ಚೀಲಗಳನ್ನು ಇಟ್ಟುಕೊಂಡು ಶಾಲೆ ಆವರಣದಲ್ಲಿರುವ ಸಸಿಗಳಿಗೆ ಮಣ್ಣು ಮತ್ತು ನೀರು ಹಾಕಿ ಸಸಿಗಳ ಪಾಲನೆ -ಪೋಷಣೆ ಮಾಡುತ್ತಿರುವುದು ವಿಶೇಷತೆಯಾಗಿದೆ.
ಮಾಡುವುದರಲ್ಲಿ ಶಿಕ್ಷಕರ ಮೆಚ್ಚುಗೆ ಪಡೆದು ಸೈ ಎನಿಸಿಕೊಂಡಿದ್ದಾನೆ. ಶಾಲೆಯ ಸುತ್ತಲು ಉತ್ತಮ ಪರಿಸರ ನಿರ್ಮಾಣ ಮಾಡಲು ಪಣ ತೊಟ್ಟಿರುವ ಸುಜಿತ್‌ನ ಜಾಣತನದ ದಿಟ್ಟ ಹೆಜ್ಜೆಯ ಕೆಲಸ ಕಾರ್ಯಗಳಿಗೆ ಶಿಕ್ಷಕ ಬಿ.ಜಿ. ಜೋಶಿ, ವೆಂಕಟೇಶ ನಗರದ ನಿವಾಸಿಗಳು ಹಾಗೂ ಶಿಕ್ಷಕವೃಂದ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. – ಸಲೀಮ ಐ. ಕೊಪ್ಪದ