Advertisement

ಬಿಳಗುಂಬ ಗ್ರಾಮದಲ್ಲಿ ಪರಿಸರ ಜಾಗೃತಿ

07:48 PM Jul 03, 2021 | Team Udayavani |

ರಾಮನಗರ: ಮಾನವ ಇಂದು ಕೇವಲ ತಂತ್ರಜ್ಞಾನ ಮತ್ತುಅಧುನಿಕ ಜೀವನ ಶೈಲಿಗೆ ವಾಲಿದ್ದು, ನಮ್ಮ ಸುತ್ತಲೇ ಇರುವಪರಿಸರದ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ, ಪರಿಸರ ನಾಶವಾದರೆ ಮಾನವನ ಬದುಕು ನಾಶವಾಗುತ್ತದೆ ಎಂಬುದನ್ನುಎಲ್ಲರೂ ಅರಿಯಬೇಕು ಎಂದು ಬಿಳಗುಂಬ ಗ್ರಾಪಂ ಉಪಾಧ್ಯಕ್ಷ ಚಂದ್ರಶೇಖರ್‌ ಎಚ್ಚರಿಸಿದರು.

Advertisement

ತಾಲೂಕಿನ ಬಿಳಗುಂಬ ಗ್ರಾಮದ ಸರ್ಕಾರಿ ಪ್ರೌಢಶಾಲೆಯಆವರಣದಲ್ಲಿ ಏರ್ಪಡಿಸಿದ್ದ ಪರಿಸರ ಜಾಗೃತಿ ಮತ್ತು ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಗಿಡ-ಮರಗಳ ಬಗ್ಗೆ ಇಂದಿನ ಯುವ ಸಮುದಾಯ ಒಲವುಬೆಳೆಸಿಕೊಳ್ಳಬೇಕು. ಅವುಗಳು ನಮ್ಮಂತೆ ಜೀವಿಸಬೇಕು. ಪ್ರಕೃತಿಯನ್ನು ಕಡೆಗಣಿಸಿದ್ದರಿಂದಲೇ ಇಂದು ಪ್ರಕೃತಿ ವಿಕೋಪಗಳುಘಟಿಸುತ್ತಿವೆ ಎಂದರು.

ಮುಖ್ಯಶಿಕ್ಷಕ ನಾಗಬೈರಪ್ಪಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆತಾಲೂಕು ಯೋಜನಾಧಿಕಾರಿ ಸೂರ್ಯನಾರಾಯಣ್‌,ಗ್ರಾಪಂ ಸದಸ್ಯೆ ಭಾಗ್ಯಮ್ಮ, ಕೃಷಿ ಮೇಲ್ವಿàಚಾರಕ ಟಿ.ಆರ್‌.ಕುಮಾರ್‌, ಮೇಲ್ವಿàಚಾರಕಿ ನಿಶ್ಮಿತಾಶೆಟ್ಟಿ, ಒಕ್ಕೂಟ ಅಧ್ಯಕ್ಷೆಮಮತಾರಾಣಿ, ಸೇವಾಪ್ರತಿನಿಧಿ ಸೌಮ್ಯ ಇತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next