ಪಣಜಿ: ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಸಂದರ್ಭದಲ್ಲಿ ಪರಿಸರಕ್ಕೆ ಯಾವುದೇ ಧಕ್ಕೆ ಮಾಡಲಾಗುವುದಿಲ್ಲ. ರಾಜ್ಯದಲ್ಲಿ ಯಾವುದೇ ಮಾಲಿನ್ಯಕಾರಕ ಯೋಜನೆಗಳು ಅಥವಾ ಕೈಗಾರಿಕೆಗಳು ಬರದಂತೆ ಖಚಿತಪಡಿಸಿಕೊಳ್ಳಲು ಎಲ್ಲ ಪ್ರಯತ್ನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದರು.
ಪಣಜಿಯಲ್ಲಿ ಆಯೋಜಿಸಿದ್ದ ಬ್ರಾಂಡ್ಸ್ ಆಫ್ ಗೋವಾ ವಿಚಾರ ಸಂಕೀರ್ಣದಲ್ಲಿ ಮಾತನಾಡಿ, ಸಲಹೆ ನೀಡುವುದರ ಜೊತೆಗೆ ಟೀಕೆ ಮಾಡುವುದು ಸುಲಭ. ರಾಜ್ಯದ ಅಭಿವೃದ್ಧಿಕಾಗಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಆದರೆ ಕೆಲವು ವಿರೋಧಿಗಳಿಂದಾಗಿ ಈ ಯೋಜನೆಗಳಿಗೆ ಅಡ್ಡಿಯಾಗುತ್ತಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದರು.
ಮಾಜಿ ಮುಖ್ಯಮಂತ್ರಿ ಪ್ರತಾಪಸಿಂಗ್ ರಾಣೆ, ಶಾಸಕ ದಿಗಂಬರ್ ಕಾಮತ್, ಕೃಷಿ ಸಚಿವ ರವಿ ನಾಯ್ಕ, ಮಾಜಿ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪಾರ್ಸೇಕರ್, ರಾಜ್ಯಸಭಾ ಸದಸ್ಯ ಲೂಯಿಜಿನ್ ಫಾಲೆರೊ ಮತ್ತಿತರರು ಉಪಸ್ಥಿತರಿದ್ದರು.