Advertisement

ಜಿಂದಾಲ್‌ ನೌಕರರು ಪಟ್ಟಣಕ್ಕೆ ಬಾರದಂತೆ ನಿರ್ಬಂಧ

08:53 AM Jun 15, 2020 | Suhan S |

ಕುರುಗೋಡು: ಕುಡುತಿನಿ ಸುತ್ತಮುತ್ತಲಿನ ಜಿಂದಾಲ್‌ ಕಾರ್ಖಾನೆಗಳಲ್ಲಿ ಸೋಂಕು ಬಾಧಿತರ ಸಂಖ್ಯೆ ದಿನ ದಿನಕ್ಕೆ ಹೆಚ್ಚಾಗುತ್ತಿದ್ದು, ಪಟ್ಟಣದ ಜನರು ತುಂಬ ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಜಿಂದಾಲ್‌ನಲ್ಲಿ ಕೆಲಸ ಮಾಡುವ ನೌಕರರು ಪಟ್ಟಣದ ಒಳಗಡೆಯಿಂದ ಪ್ರವೇಶ ಮಾಡಬಾರದೆಂದು ಎಂದು ಪಟ್ಟಣದ ಮುಖಂಡರು ಹಾಗೂ ಸಂಘ ಸಂಸ್ಥೆಯ ಪದಾಧಿಕಾರಿಗಳು ಭಾನುವಾರ ಪಟ್ಟಣವನ್ನು ಲಾಕ್‌ ಡೌನ್‌ ಮಾಡಿ ಎಲ್ಲ ರಸ್ತೆಗಳನ್ನು ನಿರ್ಬಂಧಿಸಿದರು.

Advertisement

ಇದೇ ವೇಳೆ ಪಟ್ಟಣದ ಮುಖಂಡರು ಸುದ್ದಿಗಾರರೊಂದಿಗೆ ಮಾತನಾಡಿ, ಜಿಂದಾಲ್‌ ನಲ್ಲಿ ಹೊರ ರಾಜ್ಯದ ಜನರು ಕಾರ್ಯ ನಿರ್ವಹಿಸುತ್ತಿದ್ದು, ಇದರ ನಂಜು ಈಗಾಗಲೇ ತಿಮ್ಮಲಾಪುರ, ಸಿದ್ದಮ್ಮನಹಳ್ಳಿ, ವಡ್ಡು, ವಿದ್ಯಾನಗರದ ಜನರಿಗೆ ಹರಡಿದ್ದು, ಜನರನ್ನು ಇನ್ನಸ್ಟು ಭಯಭೀತರನ್ನಾಗಿಸಿದೆ.

ಈ ನಿಟ್ಟಿನಲ್ಲಿ ಕೋವಿಡ್ ವೈರಸ್‌ ತಡೆಯುವ ಸಲುವಾಗಿ ಪಟ್ಟಣದ ಎಲ್ಲ ತರದ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಲಾಗಿದೆ. ಬೆಳಗ್ಗೆ 6ರಿಂದ 11 ಗಂಟೆವರೆಗೆ ಮಾತ್ರ ಕಿರಾಡಿ ಅಂಗಡಿಗಳು ತರೆಯಲು ಅವಕಾಶ ನೀಡಲಾಗಿದೆ. ಇನ್ನೂ ವೈನ್‌ ಶಾಫ್‌ಗಳು ಸಂಜೆ 4 ರಿಂದ 7 ರವರೆಗೆ ಒಪನ್‌ ಮಾಡಲಾಗುವುದು. ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳು ಎಂದಿನಂತೆ ಇರಲಾಗಿದ್ದು ಕೆವಲ ಪಾರ್ಸಲ್‌ ಮಾತ್ರ ಇರುತ್ತದೆ. ಆದ್ದರಿಂದ ಪಟ್ಟಣದ ಜನರು ಕೋವಿಡ್ ವೈರಸ್‌ ತಡೆಯಲು ಪ್ರತಿಯೊಬ್ಬರು ಸಹಕರಿಸಬೇಕು. ಕಂಡಯವಾಗಿ ಮಾಸ್ಕ್ , ಸಾಮಾಜಿಕ ಅಂತರ ಕಾಪಾಡಬೇಕು. ಅಧಿಕಾರಿಗಳು ತಾತ್ಕಾಲಿಕವಾಗಿ ಜಿಂದಾಲ್‌ನ್ನು ಬಂದ್‌ ಮಾಡಿ ಬಳ್ಳಾರಿಯನ್ನು ಕೋವಿಡ್ ಮುಕ್ತವನ್ನಾಗಿಸಲು ಮುಂದಾಗಬೇಕು. ಒಂದು ವೇಳೆ ಜಿಂದಾಲ್‌ನ್ನು ಬಂದ್‌ ಮಾಡದಿದ್ದಾರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ದೊಡ್ಡಬಸಪ್ಪ, ರಾಮು, ಶಿವಕುಮಾರ್‌, ಜಂಗ್ಲಿಸಾಬ್‌, ರಾಜಶೇಖರ್‌, ಪಂಪಾಪತಿ, ತಿಮ್ಮಪ್ಪ, ಗುರುಮೂರ್ತಿ, ರಾಜಪ್ಪ, ಪ್ರಕಾಶ್‌ ಬಾಬು, ರವಿ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next