ಶಿರಸಿ: ಕರ್ನಾಟಕದ ಪ್ರಸಿದ್ದ ಪ್ರವಾಸಿ ಹಾಗೂ ಪುಣ್ಯಕ್ಷೇತ್ರ ಸಹಸ್ರಲಿಂಗಕ್ಕೆ ಮಕರ ಸಂಕ್ರಾಂತಿಗೆ ಸ್ಥಳೀಯ ಗ್ರಾಮ ಪಂಚಾಯ್ತಿ ಭಕ್ತಾದಿಗಳ, ಪ್ರವಾಸಿಗಳ ಪ್ರವೇಶ ನಿರ್ಬಂಧಿಸಿದೆ.
Advertisement
ಜನವರಿ 14 ಹಾಗೂ 15ರಂದು ಪ್ರತೀ ವರ್ಷ ಹತ್ತು ಸಹಸ್ರಕ್ಕೂ ಅಧಿಕ ಭಕ್ತಾದಿಗಳು ನಾಡಿನ ಹಲವಡೆಯಿಂದ ಆಗಮಿಸುತ್ತಿದ್ದರು. ಆದರೆ, ಈಗ ಕೋವಿಡ್ ಸೋಂಕು ಹೆಚ್ಚಳ ಆಗುತ್ತಿರುವ ಕಾರಣದಿಂದ ಶಾಲ್ಮಲಾ ನದಿಯೊಳಗಿನ ಸಹಸ್ರಲಿಂಗಕ್ಕೆ ಭಕ್ತಾದಿಗಳ ಪ್ರವೇಶವನ್ನು ಎರಡು ದಿನಗಳ ಕಾಲ ನಿರ್ಬಂಧಿಸಲಾಗಿದೆ ಎಂದು ಭೈರುಂಬೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಘು ನಾಯ್ಕ ಬೆಳಲೆ ತಿಳಿಸಿದ್ದಾರೆ.