Advertisement

ಶ್ರೀರಾಮೇಶ್ವರ ದೇವಾಲಯದ ಪ್ರವೇಶೋತ್ಸವ-ಪ್ರತಿಷ್ಠಾಪನೆ

11:16 AM Feb 08, 2019 | Team Udayavani |

ಆಲ್ದೂರು: ಹಾಂದಿ ಗ್ರಾಮದಲ್ಲಿ ಶ್ರಿ ರಾಮೇಶ್ವರ ನೂತನ ದೇವಾಲಯ ಪ್ರವೇಶೋತ್ಸವ ಹಾಗೂ ಪ್ರತಿಷ್ಠಾಪನೆ ಕಾರ್ಯಕ್ರಮ ಗುರುವಾರ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ ಬ್ರಾಹ್ಮಿ ಮಹೂರ್ತದಲ್ಲಿ ಶ್ರೀ ರಾಮೇಶ್ವರಸ್ವಾಮಿ ಪ್ರತಿಷ್ಠಾಪನೆ ಹಾಗೂ ಪರಿವಾರ ದೇವತೆಗಳ ಸ್ಥಾಪನೆ, ಪ್ರಾಣ ಪ್ರತಿಷ್ಠಾಪನೆ, ಮಹಾ ರುದಾಭಿಷೇಕ ನಂತರ ಸ್ವಾಮಿಯ ನೇತ್ರೋನ್ಮಿಲನ, ಕಲಾಹೋಮ ನಡೆಯಿತು .ಮಧ್ಯಾಹ್ನ ಸಹ‌ಸ್ರ ಬಿಲ್ವಾರ್ಚನೆ, ಸಂಜೆ ಗೋದೂಳಿ ಲಗ್ನದಲ್ಲಿ ರುದ್ರಹೋಮ, ನವಗ್ರಹ ಹೋಮ, ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

Advertisement

ಸುಂದರ ಕಾಫಿ ತೋಟದ ನಡುವೆ ಪ್ರಕೃತಿಯ ಮಡಿಲಲ್ಲಿ ರಾಮೇಶ್ವರ ದೇವಾಲಯ ನಿರ್ಮಾಣ ಮಾಡಿದ್ದು, ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿರುವ ರಾಮೇಶ್ವರ ಶಿವಲಿಂಗವು ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಶಿವಲಿಂಗದ ಕೆಳ ಭಾಗದಲ್ಲಿ ಗಣಪತಿ ವಿಗ್ರಹ ಪ್ರತಿಷ್ಠಾಪಿಸಿದ್ದು ಗರ್ಭಗುಡಿಯ ಎದುರಿಗೆ ಬಸವಣ್ಣ, ಬಲ ಭಾಗದಲ್ಲಿ ಸರಸ್ವತಿಯಮ್ಮ ಹಾಗೂ ಎಡ ಭಾಗದಲ್ಲಿ ಕಾಲಭೈರವೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದೆ.

ದೇವಾಲಯದ ಹೊರಭಾಗದಲ್ಲಿ ಕಳಸಗಳನ್ನು ಪ್ರತಿಷ್ಠಾಪಿಸಿದ್ದು ವಿಶೇಷವಾಗಿ ಅಲಂಕರಿಸಿ ಪೂಜಿಸಲಾಗಿದೆ. ಪೂಜಾ ವಿಧಿ ವಿಧಾನಗಳನ್ನು ಪ್ರಸನ್ನ ಶಾಸ್ತ್ರಿಗಳು ಹೊಸಮಠ ಚನ್ನಗೊಂಡನಹಳ್ಳಿ ನಡೆಸಿಕೊಟ್ಟರು.

ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ನಿವೇಶನ ದಾನಿಗಳಾದ ವೇದಾವತಿ ಬೊಮ್ಮೇಗೌಡ, ಧರ್ಮದರ್ಶಿಗಳಾದ ಭಗತ್‌, ದಾನಿಗಳಾದ ನಂದಿನಿ ವಿರಾಜೇಗೌಡ, ಬಿ.ಬಿ. ರೇಣುಕಾರ್ಯ, ನಿಶ್ಚಲ್‌, ತೀರ್ಥಪ್ಪ ಹಾಗೂ ಸುತ್ತಮುತ್ತಲಿನ ಅಪಾರ ಭಕ್ತರು ಪಾಲ್ಗೊಂಡಿದ್ದರು.

Advertisement

ಇಂದು ಕಳಸಾರೋಹಣ-ಧರ್ಮಸಭೆ
ಶುಕ್ರವಾರ ಬೆಳಗ್ಗೆ ರಾಮೇಶ್ವರ ಸ್ವಾಮಿಗೆ ರುದ್ರಾಭಿಷೇಕ ಹಾಗೂ ಕುಂಬಾಭಿಷೇಕ ನಡೆಯಲ್ಲಿದ್ದು, ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳಿಂದ ದೇವಾಲಯಕ್ಕೆ ಕಳಸಾರೋಹಣ ನಡೆಯಲಿದೆ. ಈ ಧರ್ಮಸಭೆಯಲ್ಲಿ ವಾರಣಾಸಿ ಜಂಗಮವಾಡಿ ಮಠದ ಕಾಶೀ ಜ್ಞಾನ ಸಿಂಹಾಸನಾದೀಶ್ವರ ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸಾನ್ನಿಧ್ಯ ವಹಿಸಿ ಆಶೀರ್ವಚನ ನಿಡುವರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಹಾಗೂ ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಸ್ವಾಮೀಜಿ ಉಪಸ್ಥಿತರಿರುವರು. ದಾನಿಗಳಾದ ದಿವ್ಯಪ್ರಸಾದ್‌ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಎಂ.ಪಿ ಕುಮಾರಸ್ವಾಮಿ ಸೇರಿದಂತೆ ಜನ ಪ್ರತಿನಿಧಿಗಳು ಮುಖಂಡರು ಭಾಗವಹಿಸುವರು.

Advertisement

Udayavani is now on Telegram. Click here to join our channel and stay updated with the latest news.

Next