ಮುಖ್ಯಶಿಕ್ಷಕಿ ಗಂಗಮ್ಮ ಆರ್. ನಾಲವಾರ ಹೇಳಿದರು. ತಾಲೂಕಿನ ತೆಂಗಳಿ ಗ್ರಾಮದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Advertisement
ಪಾಲಕರು ಖಾಸಗಿ ಶಾಲೆಗಳ ಅಬ್ಬರದ ಪ್ರಚಾರಕ್ಕೆ ಮಾರು ಹೋಗಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲಿಸುತ್ತಿದ್ದಾರೆ. ಸರ್ಕಾರ ಗ್ರಾಮೀಣ ಮಕ್ಕಳಿಗಾಗಿ ಉಚಿತ ಪಠ್ಯ ಪುಸ್ತಕ, ಉಚಿತ ಬಟ್ಟೆ, ಉಚಿತ ಬೂಟ್ ಮತ್ತು ಸಾಕ್ಸ್, ಮಧ್ಯಾಹ್ನದ ಬಿಸಿಯೂಟ ನೀಡುತ್ತಿದೆ. ಅಲ್ಲದೇ ಉತ್ತಮ ಶಿಕ್ಷಕರನ್ನು ನೇಮಿಸಿದೆ. ಇದೆಲ್ಲದರ ಉಪಯೋಗ ಪಡೆಯುವುದನ್ನು ಬಿಟ್ಟು ಖಾಸಾಗಿ ಶಾಲೆಗೆ ಮಕ್ಕಳನ್ನು ದಾಖಲಿಸಿದರೆ ಹೇಗೆ ಎಂದು ಪ್ರಶ್ನಿಸಿದರು.
ಜಾಥಾ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿತು. ಸರಸ್ವತಿ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಡಾವಳಗಿ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾದಲ್ಲಿ ಎತ್ತಿನ ಗಾಡಿಗೆ ಸರ್ಕಾರಿ ಯೋಜನೆಗಳ ಪ್ಲೆಕ್ಸ್‌ಗಳನ್ನು ಕಟ್ಟಿ, ಡೊಳ್ಳು, ಡ್ರಂ, ಲೇಜೀಂಗಳ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಾಲಕರಲ್ಲಿ ಜಾಗೃತಿ ಮೂಡಿಸಲಾಯಿತು. ಜಾಥಾದಲ್ಲಿ ಸಿಆರ್‌ಸಿ ಕರಣಪ್ಪ ಕಟ್ಟಿಮನಿ, ಶಿಕ್ಷಕರಾದ ಮಲ್ಲಣ್ಣ ಹರಸೂರ್, ಹಣಮಂತ ಗೀರಿಗೌಡರ್, ಮಲ್ಲಿಕಾರ್ಜುನ ಭಜಂತ್ರಿ, ಗಿರಿಜಾ ಹಾಗೂ ಗ್ರಾಮಸ್ಥರು ಇದ್ದರು.