Advertisement

Video ಪ್ರಸಾರ ವೇಳೆ ದಿನಾಂಕ ಸಮೂದಿಸಿ: ಚಾನೆಲ್‌ಗ‌ಳಿಗೆ ಸೂಚನೆ

12:58 AM Aug 13, 2024 | Team Udayavani |

ಹೊಸದಿಲ್ಲಿ: ಪ್ರಾಕೃತಿಕ ವಿಕೋಪ ಮತ್ತು ಅಪಘಾತಗಳ ವೀಡಿಯೋಗಳನ್ನು ಪ್ರಸಾರ ಮಾಡುವ ಸಮಯದಲ್ಲಿ ಖಾಸಗಿ ಸುದ್ದಿ ವಾಹಿನಿಗಳು, ವೀಡಿಯೋ ತೆಗೆದ ದಿನಾಂಕ ಮತ್ತು ಸಮಯವನ್ನು ನಮೂದು ಮಾಡಬೇಕು ಎಂದು ಕೇಂದ್ರ ಸರಕಾರ‌ ಸೋಮವಾರ ಸೂಚನೆ ನೀಡಿದೆ.

Advertisement

ವೀಕ್ಷಕರಲ್ಲಿ ಉಂಟಾಗುವ ಗೊಂದಲವನ್ನು ನಿವಾರಿಸುವುದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ. ಟಿವಿ ಚಾನೆಲ್‌ಗ‌ಳು ಎಡೆಬಿಡದೇ ಇಂತಹ ಘಟನೆಗಳನ್ನು ಪ್ರಸಾರ ಮಾಡುತ್ತವೆ. ಇವು ಜನ ರಲ್ಲಿ ಗೊಂದಲ ಉಂಟು ಮಾಡಬಹುದು ಎಂದು ಸಚಿವಾಲಯ ಹೇಳಿದೆ.

ವಯನಾಡ್‌ ಮತ್ತು ಉತ್ತರಾ ಖಂಡದಲ್ಲಿ ಉಂಟಾದ ಭೂಕುಸಿತಕ್ಕೆ ಸಂಬಂಧಿಸಿದಂತೆ ಸುದ್ದಿವಾಹಿನಿಗಳು ನಿರಂತರ ಸುದ್ದಿ ಪ್ರಕಟಿಸಿದ ಬೆನ್ನಲ್ಲೇ ಈ ಮಾರ್ಗಸೂಚಿ ಹೊರಡಿಸಲಾಗಿದೆ.

ವಯನಾಡ್‌ ಸಂತ್ರಸ್ತರ ಸಾಲ ಮನ್ನಾ: ಕೇರಳ ಬ್ಯಾಂಕ್
ವಯನಾಡ್‌:
ವಯನಾಡಿನ ಭೂಕುಸಿತದ ಸಂತ್ರಸ್ತರ ಮೇಲಿನ ಸಾಲದ ಹೊರೆ ಕಡಿಮೆ ಮಾಡಲು ಜಿಲ್ಲಾ ಸಹಕಾರ ಬ್ಯಾಂಕ್‌ಗಳ ಒಕ್ಕೂಟವಾದ ಕೇರಳ ಬ್ಯಾಂಕ್‌ ನಿರ್ಧರಿಸಿದೆ. ಚೂರಲ್‌ವುಲಾ ಶಾಖೆಯಿಂದ ಸಾಲ ಪಡೆದಿದ್ದವರ ಪೈಕಿ ಯಾರಾದರೂ ಭೂಕುಸಿತದಲ್ಲಿ ಮೃತಪಟ್ಟಿದ್ದರೆ ಅಥವಾ ಮನೆ, ಆಸ್ತಿ ಕಳೆದುಕೊಂಡಿದ್ದರೆ ಅಂಥವರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next