Advertisement

ಮದ್ಯ ಖರೀದಿಗೆ ಬರುವವರನ್ನು ಕೀಳಾಗಿ ಕಾಣದಿರಿ: ಹೈಕೋರ್ಟ್‌

12:22 AM Sep 17, 2021 | Team Udayavani |

ಕೊಚ್ಚಿ: ಮದ್ಯದಂಗಡಿಗಳ ಮುಂದೆ ಖರೀದಿದಾಗಿ ಸಾಲು ನಿಂತವರನ್ನು ಕೀಳಾಗಿ ಕಾಣಬಾರದು. ಜತೆಗೆ ಅವರಿಗೆ ಮುಜುಗರವಾಗುವಂಥ ಪರಿಸ್ಥಿತಿ ಇರಬಾರದು ಎಂದು ಕೇರಳ ಹೈಕೋರ್ಟ್‌ ಗುರುವಾರ ಅಭಿಪ್ರಾಯಪಟ್ಟಿದೆ.

Advertisement

ಕೇರಳದ ಪಾನೀಯ ನಿಗಮ ನಿಯಮಿತದ ವ್ಯಾಪ್ತಿಯಲ್ಲಿರುವ ಮದ್ಯದಂಗಡಿ ಮತ್ತು ಖಾಸಗಿ ವ್ಯಾಪ್ತಿಯಲ್ಲಿರುವ ಅಂಗಡಿಗಳಲ್ಲಿ ಅಬಕಾರಿ ಇಲಾಖೆ ಮದ್ಯ ಖರೀದಿಗೆ ಬರುವವರನ್ನು ಗೌರವದಿಂದ ಕಾಣುವಂತೆ ಮಾಡಬೇಕು ಎಂದು ನ್ಯಾ| ದೇವನ್‌ ರಾಮಚಂದ್ರನ್‌ ನೇತೃತ್ವದ ನ್ಯಾಯಪೀಠ ಆದೇಶ ನೀಡಿದೆ.

ಬ್ಯಾಂಕ್‌ ಶಾಖೆ ಸಮೀಪಕ್ಕೆ ಮದ್ಯದಂಗಡಿ ಸ್ಥಳಾಂತರಿಸುವುದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್‌ಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.

“ಮದ್ಯದಂಗಡಿಗಳ ಮುಂದೆ ಖರೀದಿಗಾಗಿ ಜನರು ಶಿಸ್ತಿನಿಂದ ಸಾಲಿನಲ್ಲಿ ನಿಲ್ಲುವವರನ್ನು ನೋಡಿ ನಾನೇ ಮುಜುಗರಕ್ಕೆ ಒಳಗಾಗಿದ್ದೇನೆ’ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ಹೀಗಾಗಿ, ಮದ್ಯಂಗಡಿಗೆ ಬರುವವರವನ್ನು ಗೌರವದಿಂದ ಕಾಣುವಂತೆ ಮಾಡಲಾಗಿರುವ ಕ್ರಮಗಳ ಬಗ್ಗೆ ಒಂದು ತಿಂಗಳ ಒಳಗಾಗಿ  ವರದಿ ಸಲ್ಲಿಸುವಂತೆ ಕೇರಳ ಅಬಕಾರಿ ಇಲಾಖೆಗೆ ನ್ಯಾಯಪೀಠ ಆದೇಶಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next