Advertisement
ಬದಿಯಡ್ಕ ಗ್ರಾಮ ಪಂಚಾಯತ್ ಮತ್ತು ಕುಟುಂಬಶ್ರೀ ಸಿಡಿಎಸ್ ಸಂಯುಕ್ತ ಆಶ್ರಯದಲ್ಲಿ ಕುಟುಂಬಶ್ರೀಯ ಭತ್ತ ಬೆಳೆ, ಜಲಸಂರಕ್ಷಣಾ ಯಜ್ಞ 2019ರ ಅಂಗವಾಗಿ ನೀರ್ಚಾಲು ಸಮೀಪದ ಮಾನ್ಯ ದೇವರಕೆರೆ ಕೃಷಿ ಕೂಟ ಸಮಿತಿಯ ಸಹಕಾರದೊಂದಿಗೆ ಆಯೋಜಿಸಲಾದ ‘ಮಳೆ-ಬೆಳೆ ಮಹೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಕಾರ್ಯಕ್ರಮ ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಬದಿಯಡ್ಕ ಗ್ರಾ.ಪಂ. ಆರೋಗ್ಯ- ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ್ ಮಾನ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಸುಧಾ ಜಯರಾಂ ವಂದಿಸಿದರು. ಗ್ರಾ.ಪಂ. ಕಿರಿಯ ಗುಮಾಸ್ತ ಬಾಬು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ವಿವಿಧ ಗ್ರಾಮೀಣ ಸ್ಪರ್ಧೆಗಳನ್ನು ಆಯೋಜಿಸ ಲಾಗಿತ್ತು. ಮಹಿಳೆಯರಿಗೆ ಕಾಲ್ಚೆಂಡು, ಕಬ್ಬಡಿ, ಹಗ್ಗಜಗ್ಗಾಟ, ಜಾನಪದ ಹಾಡು, ನೇಜಿ ನೆಡುವುದು ಮತ್ತು ಮಕ್ಕಳಿಗಾಗಿ ಕಬಡ್ಡಿ, ಹಗ್ಗಜಗ್ಗಾಟ, 100 ಮೀಟರ್ ರಿಲೇ ಓಟದ ಸ್ಪರ್ಧೆಗಳು ಕೆಸರು ತುಂಬಿದ ಗದ್ದೆ ಬಯಲಲ್ಲಿ ಉತ್ಸಾಹದಿಂದ ನಡೆಯಿತು.
ನೂರಾರು ಮಂದಿ ಸ್ಥಳೀಯರು ಭಾಗವಹಿಸಿದರು. ಕುಟುಂಬಶ್ರೀ ಹಾಗೂ ವಿವಿಧ ಸಂಘಟನೆಗಳ ಸಂಪೂರ್ಣ ಸಹಕಾರದೊಂದಿಗೆ ಸಂಪನ್ನಗೊಂಡಿತು.
ನೇಜಿ ಕಟ್ಟು ನೀಡಿ ಸಮ್ಮಾನ
ಸಂಪ್ರದಾಯದಂತೆ ಮುಟ್ಟಾಳೆ ತಲೆ ಗಿಟ್ಟು, ಎಲೆ ಅಡಿಕೆಯನ್ನು ನೀಡಿ ಅತಿಥಿ ಅಭ್ಯಾಗತರನ್ನು ಸ್ವಾಗತಿಸಲಾ ಯಿತು. ಅದೇ ರೀತಿ ವಿಶೇಷ ವಾಗಿ ನೇಜಿಯ ಕಟ್ಟು ನೀಡಿ ಸಮ್ಮಾನಿಸಲಾಯಿತು.
ಹಲಸಿನ ಕೊಟ್ಟಿಗೆ, ಪಾಯಸದ ಸವಿ
ಕೆಸರಲ್ಲಿ ಆಡಿ, ಮಯಪೊಲಿಮ ದಲ್ಲಿ ಭಾಗವಹಿಸಿದ ಎಲ್ಲರಿಗೂ ಹಲಸಿನ ಹಣ್ಣಿನಿಂದ ತಯಾರಿಸಿದ ಕೊಟ್ಟಿಗೆಯನ್ನು ನೀಡಿ ಸತ್ಕರಿಸಲಾಯಿತು. ಮಾತ್ರವಲ್ಲದೆ ಹಲಸಿನ ಪಾಯಸವನ್ನೊಳಗೊಂಡ ಮಧ್ಯಾಹ್ನದ ಸವಿಯೂಟಕ್ಕೆ ಬಾಳೆ ಎಲೆಯನ್ನು ಉಪಯೋಗಿಸಿರುವುದು ಉತ್ತಮ ವಿಚಾರ. ಪೇಪರ್, ಪ್ಲಾಸ್ಟಿಕ್ ತಟ್ಟೆ ಗ್ಲಾಸು ಬಳಸಿ ಅಲ್ಲಲ್ಲಿ ಎಸೆದು ಮಾಲಿನ್ಯರಾಶಿಗೆ ಕಾರಣವಾಗದ ರೀತಿಯಲ್ಲಿ ವ್ಯವಸ್ಥೆಗೊಳಿಸಲಾಗಿತ್ತು.
ಯುವ ಸಮುದಾಯ ಕೃಷಿಯತ್ತ ಗಮನಹರಿಸಲಿ
ತುಳುನಾಡಿನ ಸಂಸ್ಕೃತಿ-ಜನಜೀವನವು ಕೃಷಿ ಜಗತ್ತಿನೊಂದಿಗೆ ಸಮ್ಮಿಲಿತವಾದ ಅಪೂರ್ವ ವ್ಯವಸ್ಥೆಯಾಗಿ ಸಹಕಾರ-ಸಹಬಾಳ್ವೆಯೊಂದಿಗೆ ಬೆಳೆದುಬಂದುದಾಗಿದೆ. ಓ. ಬೇಲೆ, ಸಂದಿ- ಪಾಡ್ದನಗಳ ಜನಪದೀಯ ಬೇರುಗಳನ್ನು ತನ್ನೊಡಲೊಳಗೆ ಬೆಳೆಸುತ್ತ ಸ್ವಾವಲಂಬಿಯಾದ ಸಾಮಾಜಿಕ ವ್ಯವಸ್ಥೆ ಪೂರ್ವಜರ ಪರಿಶ್ರಮದ ಫಲವಾಗಿ ರೂಪುಗೊಂಡಿತ್ತು. ಆದರೆ ಆಧುನಿ ಕತೆಯ ವೇಗದಲ್ಲಿ ಸಾಗಿಬಂದ ಹಾದಿ ಮರೆತಿ ರುವ ನಾವು ಸಕಲವನ್ನೂ ಕಳಕೊಂಡು ಬೆತ್ತಲಾಗಿ ರುವ ಬಗ್ಗೆ ಚಿಂತಿಸಬೇಕಾದ ಅನಿವಾರ್ಯವಿದೆ. ಯುವ ಸಮೂಹವನ್ನು ಭತ್ತ ಸಹಿತ ಪಾರಂಪರಿಕ ಕೃಷಿಯತ್ತ ಆಕರ್ಷಿಸುವ ಪರಿಕಲ್ಪನೆಯಲ್ಲಿ ಮಳೆ-ಬೆಳೆ ಮಹೋತ್ಸವ ಯಶಸ್ವಿಯಾಗಲಿ ಎಂದು ಕೃಷ್ಣ ಭಟ್ ತಿಳಿಸಿದರು.