ಮುಂಬೈ: ಪ್ರಖ್ಯಾತ ಬಹುಭಾಷಾ ನಟಿ ದಿ. ಶ್ರೀದೇವಿ ಅವರ ಐದನೇ ಪುಣ್ಯ ಸ್ಮರಣೆ ಅಂಗವಾಗಿ ಫೆ.24ರಂದು ಅವರು ನಟಿಸಿರುವ ಪ್ರಸಿದ್ಧ “ಇಂಗ್ಲಿಷ್ ವಿಂಗ್ಲಿಷ್’ ಸಿನಿಮಾವು ಚೀನದ 6,000 ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ಪ್ರದರ್ಶನಗೊಳ್ಳಲಿದೆ.
ಈ ಬಗ್ಗೆ ವಿತರಕ ಸಂಸ್ಥೆ ಎರೋಸ್ ಇಂಟರ್‌ನ್ಯಾಷನಲ್ ಮಾಹಿತಿ ನೀಡಿದೆ. 2012ರಲ್ಲಿ ಬಿಡುಗಡೆಯಾದ “ಇಂಗ್ಲಿಷ್ ವಿಂಗ್ಲಿಷ್’ ಸಿನಿಮಾವನ್ನು ಗೌರಿ ಶಿಂಧೆ ನಿರ್ದೇಶಿಸಿದ್ದರು.
ನಟಿ ಶ್ರೀದೇವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಇವರೊಂದಿಗೆ ಅದಿಲ್ ಹುಸೇನ್, ಸುಮೀತ್ ವ್ಯಾಸ್, ಪ್ರಿಯಾ ಆನಂದ್, ಸುಲಭ ದೇಶಪಾಂಡೆ, ಫ್ರೆಂಚ್ ನಟ ಮೆಹದಿ ನೆಬ್ಬೌ ನಟಿಸಿದ್ದರು.
ಚಿತ್ರದಲ್ಲಿ ಇಂಗ್ಲಿಷ್ ಬರದ ಶಶಿ ಗೋಡ್ಬೋಲೆ ಮನೆಯಲ್ಲಿ ಪತಿ ಮತ್ತು ಮಗಳ ಎದುರು ಒಂದು ರೀತಿ ಕೀಳರಿಮೆ ಅನುಭವಿಸಿ, ನಂತರ ಚೆನ್ನಾಗಿ ಇಂಗ್ಲಿಷ್ ಕಲಿಯುತ್ತಾರೆ.