Advertisement
ದಕ್ಷಿಣ ಕನ್ನಡದ 43 ಮತ್ತು ಉಡುಪಿ ಜಿಲ್ಲೆಯ 22 ಶಾಲೆಗಳು ಈ ಪಟ್ಟಿಯಲ್ಲಿದ್ದು, ಮುಂದಿನ ಹಂತಗಳಲ್ಲಿ 10ನೇ ತರಗತಿವರೆಗೆ ಆಂಗ್ಲ ಮಾಧ್ಯಮ ವಿಸ್ತರಿಸುವ ಉದ್ದೇಶ ಇದೆ. ಈ ಶಾಲೆಗಳ ಒಂದರಿಂದ ಐದನೇ ತರಗತಿ ತನಕದ ಶಿಕ್ಷಕರಿಗೆ ತರಬೇತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡಿದೆ.
Related Articles
Advertisement
ಮಂಗಳೂರು ದಕ್ಷಿಣ- ಹಿ.ಪ್ರಾ. ಶಾಲೆ ನಾಲ್ಯಪದವು, ಹಿ.ಪ್ರಾ.ಶಾಲೆ ಬೆಂಗ್ರೆ ಕಸಬ, ಹಿ.ಪ್ರಾ.ಮತ್ತು ಪ್ರೌಢ ಶಾಲೆ ಬಲ್ಮಠ, ಹಿ.ಪ್ರಾ.ಶಾಲೆ ಅತ್ತಾವರ, ಹಿ.ಪ್ರಾ. ಶಾಲೆ ಬಿಕರ್ನಕಟ್ಟೆ. ಪ್ರೌಢಶಾಲೆ ಮಳಲಿ.
ಮಂಗಳೂರು ಉತ್ತರ- ಹಿ.ಪ್ರಾ.ಶಾಲೆ ಮೊಂಟೆಪದವು, ಹಿ.ಪ್ರಾ. ಹಾಗೂ ಪ್ರೌಢಶಾಲೆ ಮುಲ್ಲಕಾಡು, ಹಿ.ಪ್ರಾ.ಶಾಲೆ ಮುಚ್ಚಾರು, ಪ್ರೌಢಶಾಲೆ ಕಾಟಿಪಳ್ಳ 5ನೇ ಬ್ಲಾಕ್, ಹಿ.ಪ್ರಾ, ಪ್ರೌಢ ಮಾದರಿ ಶಾಲೆ ಕೆ.ಎಸ್.ರಾವ್ ನಗರ.
ಮೂಡುಬಿದಿರೆ- ಹಿ.ಪ್ರಾ.ಶಾಲೆ ಮೂಡುಶೆಡ್ಡೆ ಗುರುಪುರ, ಹಿ.ಪ್ರಾ.ಶಾಲೆ ಮಿಜಾರು, ಹಿ.ಪ್ರಾ. ಶಾಲೆ ಮದ್ಯ.
ಪುತ್ತೂರು- ಹಿ.ಪ್ರಾ.ಶಾಲೆ ವಿಟ್ಲ, ಹಿ.ಪ್ರಾ.ಶಾಲೆ ಹಿರೇಬಂಡಾಡಿ, ಪ.ಪೂ.ಕಾಲೇಜು ಕೆಯ್ಯೂರು, ಹಿ.ಪ್ರಾ.ಶಾಲೆ ಕುಂಬ್ರ, ಹಿ.ಪ್ರಾ.ಶಾಲೆ ಕಾವು, ಹಿ.ಪ್ರಾ.ಶಾಲೆ ಉಪ್ಪಿನಂಗಡಿ, ಹಿ.ಪ್ರಾ.ಶಾಲೆ ಹಾರಾಡಿ.
ಸುಳ್ಯ- ಹಿ.ಪ್ರಾ.ಶಾಲೆ ಗುತ್ತಿಗಾರು, ಹಿ.ಪ್ರಾ.ಶಾಲೆ ನೆಲ್ಯಾಡಿ, ಹಿ.ಪ್ರಾ.ಶಾಲೆ ಕಾಣಿಯೂರು, ಜಿಯುಪಿಎಸ್ ಕಾಲೇಜು ಗಾಂಧಿನಗರ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ.
ಉಡುಪಿ ಜಿಲ್ಲೆ
ಬೈಂದೂರು- ಹಿ.ಪ್ರಾ.ಶಾಲೆ ಬೈಂದೂರು, ಹಿ.ಪ್ರಾ.ಶಾಲೆ ದೊಂಬೆ, ಹಿ.ಪ್ರಾ. ಶಾಲೆ ಉಪ್ಪುಂದ, ಹಿ.ಪ್ರಾ.ಶಾಲೆ ಬಿದ್ಕಲ್ಕಟ್ಟೆ, ಹಿ.ಪ್ರಾ.ಶಾಲೆ ವಂಡ್ಸೆ, ಹಿ.ಪ್ರಾ, ಪ್ರೌಢಶಾಲೆ ನೆಂಪು.
ಬ್ರಹ್ಮಾವರ- ಹಿ.ಪ್ರಾ.ಶಾಲೆ ಕುಕ್ಕೆಹಳ್ಳಿ, ಹಿ.ಪ್ರಾ.ಶಾಲೆ ಕೊಕ್ಕರ್ಣೆ, ಜಿಎಂಎಚ್ಪಿಎಸ್ ಬ್ರಹ್ಮಾವರ.
ಉಡುಪಿ- ಹಿ.ಪ್ರಾ.ಶಾಲೆ ಪಡುಬಿದ್ರಿ ನಡ್ಸಾಲ್, ಹಿ.ಪ್ರಾ. ಶಾಲೆ ರಾಜೀವನಗರ, ಜಿಎಂಎಚ್ಪಿಎಸ್ ಹಿರಿಯಡ್ಕ ಬೊಮ್ಮರಬೆಟ್ಟು, ಜಿಎಂಎಚ್ಪಿಎಸ್ ವಳಕಾಡು.
ಕುಂದಾಪುರ- ಹಿ.ಪ್ರಾ. ಶಾಲೆ ಬೀಜಾಡಿಪಡು, ಹಿ.ಪ್ರಾ. ಶಾಲೆ ಅಮಾಸೆಬೈಲು, ಹಿ.ಪ್ರಾ. ಶಾಲೆ ಕೋಟೇಶ್ವರ, ಹಿ.ಪ್ರಾ. ಶಾಲೆ ತೆಕ್ಕಟ್ಟೆ., ಕಾರ್ಕಳ- ಹಿ.ಪ್ರಾ. ಶಾಲೆ ಹೆಬ್ರಿ, ಹಿ.ಪ್ರಾ. ಶಾಲೆ ಹೊಸ್ಮಾರು ಈದು, ಹಿ.ಪ್ರಾ. ಶಾಲೆ ಮುನಿಯಾಲು- ವರಂಗ, ಜಿಎಂಎಚ್ಪಿಎಸ್ ಪೆರ್ವಾಜೆ. ಪೆರ್ಡೂರು- ಹಿ.ಪ್ರಾ. ಶಾಲೆ ಸಂತೆಕಟ್ಟೆ.
ಈ ಬಾರಿ 1ನೇ ತರಗತಿಯಿಂದ
ನೂತನ ಶಿಕ್ಷಣ ಕ್ರಮದ ಪ್ರಕಾರ ಎಲ್ಲ ಸರಕಾರಿ ಶಾಲೆಗಳಲ್ಲಿಯೂ ಕನ್ನಡ ಮಾಧ್ಯಮದಲ್ಲಿಯೇ ತರಗತಿ ನಡೆಯಲಿದೆ. ಆದರೆ 65 ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜತೆಗೆ ಒಂದನೇ ತರಗತಿಯನ್ನು ಆಂಗ್ಲ ಮಾಧ್ಯಮದಲ್ಲಿಯೂ ಕಲಿಸಲಾಗುತ್ತದೆ. ಶಾಲೆಗೆ ಸೇರುವ ವಿದ್ಯಾರ್ಥಿಗಳು ತಮಗೆ ಬೇಕಾದ ಮಾಧ್ಯಮವನ್ನು ಆಯ್ಕೆ ಮಾಡಲು ಅವಕಾಶವಿರುತ್ತದೆ. ಈ ಬಾರಿ ‘ಒಂದನೇ ತರಗತಿ ಮಾತ್ರ ಆಂಗ್ಲಮಾಧ್ಯಮ’ ಎಂದು ಪರಿಗಣಿಸಿದ್ದು, ಮುಂದಿನ ವರ್ಷದಿಂದ 2ನೇ ತರಗತಿ ಸೇರಿದಂತೆ ಇತರ ತರಗತಿಗಳು ಸೇರಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ದ.ಕ. ಜಿಲ್ಲೆಯ 43 ಶಾಲೆಗಳಲ್ಲಿ
ಸರಕಾರ ನಿಗದಿಪಡಿಸಿದ ಸರಕಾರಿ ಶಾಲೆಗಳಲ್ಲಿ ಈ ಬಾರಿಯಿಂದಲೇ ಆಂಗ್ಲ ಮಾಧ್ಯಮ ಕಲಿಕೆ ಆರಂಭಿಸಲು ಸಿದ್ಧತೆ ನಡೆಸಲಾಗಿದ್ದು, ಪ್ರವೇಶ ಆರಂಭವಾಗಿದೆ. ಜಿಲ್ಲೆಯ 43 ಶಾಲೆಗಳಲ್ಲಿ ಈ ಬಾರಿಯಿಂದ ಆಂಗ್ಲಮಾಧ್ಯಮ ತರಗತಿ ಆರಂಭವಾಗಲಿದೆ.
– ವೈ. ಶಿವರಾಮಯ್ಯ, ಡಿಡಿಪಿಐ, ದ.ಕ.