Advertisement
ಪುತ್ತೂರು ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾ ಟಿಸಿದರು. ಬಳಿಕ ಮಾತನಾಡಿದ ಅವರು, ಆಂಗ್ಲ ಭಾಷೆಯು ಇಂದು ವ್ಯಾವ ಹಾರಿಕವಾಗಿ ಅಗತ್ಯವಾಗಿದೆ. ಆದರೆ ಮಾತೃ ಭಾಷೆಯ ಬಗ್ಗೆ ಒಲವಿರಬೇಕು. ವ್ಯಾವಹಾರಿಕ ಭಾಷೆಗೂ ಒತ್ತುಕೊಡಬೇಕು. ಆರಂಭದಲ್ಲಿ ವ್ಯಾವಹಾರಿಕ ಭಾಷೆಯಲ್ಲೇ ಕಲಿಯಬೇಕೆನ್ನುವ ಒತ್ತನ್ನು ಸರಕಾರಿ ಶಾಲೆಯಲ್ಲಿ ನೀಡುತ್ತಿರುವುದು ಶ್ಲಾಘ ನೀಯ ಎಂದರು.
ಆಂಗ್ಲ ಮಾಧ್ಯಮ ವಿಭಾಗ ಕೊಠಡಿಯ ಉದ್ಘಾಟನೆ ನೆರವೇರಿಸಿದ ಶಾಸಕ ಡಾ| ಭರತ್ ಶೆಟ್ಟಿ ವೈ. ಮಾತನಾಡಿ, ಸರಕಾರಿ ಶಾಲೆಯ ಗುಣಮಟ್ಟ ಕೇವಲ ಭಾಷಾ ಮಾಧ್ಯಮದ ಮೂಲಕ ಅಳೆ ಯಲು ಸಾಧ್ಯವಿಲ್ಲ. ಇಂಗ್ಲಿಷ್ ಕೇವಲ ವ್ಯಾವಹಾರಿಕ ಭಾಷೆ. ನಮ್ಮ ಮಾತೃ ಭಾಷೆಯ ಬಗ್ಗೆ ಹೆಚ್ಚಿನ ಒಲವು ಮೂಡಬೇಕು ಎಂದರು. ಮಾಜಿ ಮನಪಾ ಸದಸ್ಯ ತಿಲಕ್ ರಾಜ್ ಕೃಷ್ಣಾಪುರ ಅಧ್ಯಕ್ಷತೆ ವಹಿಸಿದ್ದರು. ದ.ಕ.- ಉಡುಪಿ ಜಿಲ್ಲೆ, ಕೊಡಗು ಜಿಲ್ಲೆ ಕಿರು ನೀರಾವರಿ ಇಲಾಖೆ ಕಾರ್ಯಕಾರಿ ಅಭಿಯಂತರ ಗೋಕುಲ್ದಾಸ್, ಸಾಮಾಜಿಕ ಮುಂದಾಳು ಪುತ್ತೂರು ದಿನೇಶ್ ಕುಮಾರ್ ಜೈನ್, ಉದ್ಯಮಿ ಪ್ರಶಾಂತ್ ಕುಮಾರ್ ಮುಡಾಯಿಕೋಡಿ, ಗುತ್ತಿಗೆದಾರ ಮಾಧವ ದೇವಾಡಿಗ ಕೃಷ್ಣಾಪುರ, ನ್ಯಾಯವಾದಿ ಸದಾಶಿವ ಐತಾಳ್, ರಘುವೀರ್ ಬೈಕಂಪಾಡಿ, ಪ್ರೌಢಶಾಲಾ ವಿಭಾಗ ಎಸ್.ಡಿ.ಎಂ.ಸಿ. ಅಧ್ಯಕ್ಷ ಸುಬ್ರಾಯ ದೇವಾಡಿಗ, ಪ್ರಾಥಮಿಕ ಶಾಲಾ ವಿಭಾಗ ಅಧ್ಯಕ್ಷ ಕರುಣಾಕರ ಶೆಟ್ಟಿ, ಸಿ.ಆರ್.ಪಿ. ಶಾಂತಾ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಝಹೀರಾ ಮುತಾಹರ್ ಉಪಸ್ಥಿತರಿದ್ದರು.
Related Articles
Advertisement