Advertisement

ಕೌಂಟಿಗೂ ಬೇಡವಾದ ಬ್ಯಾನ್‌ಕ್ರಾಫ್ಟ್

06:55 AM Mar 30, 2018 | Team Udayavani |

ಸಿಡ್ನಿ: ಚೆಂಡು ವಿರೂಪಗೊಳಿಸಿ ಸಿಕ್ಕಿಹಾಕಿಕೊಂಡ ಆಸ್ಟ್ರೇಲಿಯದ ಕ್ರಿಕೆಟಿಗ ಕ್ಯಾಮರೂನ್‌ ಬ್ಯಾನ್‌ಕ್ರಾಫ್ಟ್ ಈಗ ಇಂಗ್ಲಿಷ್‌ ಕೌಂಟಿಗೂ ಬೇಡವಾಗಿದ್ದಾರೆ. ಅವರನ್ನು ಸಾಮರ್‌ಸೆಟ್‌ ಕೌಂಟಿ ಒಡಂಬಡಿಕೆಯಿಂದ ಗುರುವಾರ ಕೈಬಿಡಲಾಯಿತು.

Advertisement

2018ರ ಋತುವಿನಲ್ಲಿ ಸಾಮರ್‌ಸೆಟ್‌ ಪರ ಆಡಲು ವಿದೇಶಿ ಆಟಗಾರನ ಕೋಟಾದಲ್ಲಿ ಬ್ಯಾನ್‌ಕ್ರಾಫ್ಟ್ ಅವಕಾಶ ಪಡೆದಿದ್ದರು. ಆದರೀಗ ಅವರ ಒಡಂಬಡಿಕೆಯನ್ನು ಕೈಬಿಡಲಾಗಿದೆ ಎಂದು ಸಾಮರ್‌ಸೆಟ್‌ ಕ್ರಿಕೆಟ್‌ ಕ್ಲಬ್‌ನ ನಿರ್ದೇಶಕ ಆ್ಯಂಡಿ ಹರ್ರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next