ಲಂಡನ್: ಇಂಗ್ಲೆಂಡಿನ ಲೆಗ್‌ಸ್ಪಿನ್ನರ್ ಆದಿಲ್ ರಶೀದ್ ಹಜ್ ಯಾತ್ರೆಗಾಗಿ ಮೆಕ್ಕಾಕ್ಕೆ ತೆರಳುವುದರಿಂದ ಪ್ರವಾಸಿ ಭಾರತದೆದುರಿನ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಗೆ ಲಭ್ಯರಿರುವುದಿಲ್ಲ ಎಂದು ಇಸಿಬಿ ತಿಳಿಸಿದೆ.
Advertisement
ಆದಿಲ್ ರಶೀದ್ ಶನಿವಾರ ಸೌದಿ ಅರೇಬಿಯಾಕ್ಕೆ ಪ್ರಯಾಣ ಕೈಗೊಳ್ಳಲಿದ್ದು, ಕೊನೆಯ ಹಂತದ “ಯಾರ್ಕಶೈರ್ ಟಿ20 ಬ್ಲಾಸ್ಟ್’ ಪಂದ್ಯಾವಳಿಗೂ ಲಭ್ಯರಿರುವುದಿಲ್ಲ.
ಇದನ್ನೂ ಓದಿ:ಪೊಲೀಸ್ ಕಾನ್‌ಸ್ಟೇಬಲ್ : ಕನಿಷ್ಠ ಸೇವೆ 6ರಿಂದ 5 ವರ್ಷಕ್ಕೆ ಇಳಿಕೆ: ಡಿಸಿಪಿ ನಿಶಾ ಜೇಮ್ಸ್
“ಹಜ್ ಯಾತ್ರೆ ನನ್ನ ಬಹು ವರ್ಷಗಳ ನಿರೀಕ್ಷೆ. ಇಸಿಬಿ ಹಾಗೂ ಯಾರ್ಕಶೈರ್ ಒಪ್ಪಿಗೆ ಪಡೆದಿದ್ದೇನೆ’ ಎಂಬುದಾಗಿ ರಶೀದ್ ಹೇಳಿದ್ದಾರೆ.