Advertisement

ಟೆಸ್ಟ್‌ ಪಂದ್ಯ: ಇಂಗ್ಲೆಂಡ್‌ ವಿರುದ್ಧ ದ.ಆಫ್ರಿಕಾದ ಆಲ್‌ರೌಂಡರ್‌ ಮರಿಝಾನೆ ಕ್ಯಾಪ್‌ ಶತಕ

12:09 AM Jun 29, 2022 | Team Udayavani |

ಟಾಂಟನ್‌: ಇಂಗ್ಲೆಂಡ್‌ ವನಿತೆಯರ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಮರಿಝಾನೆ ಕ್ಯಾಪ್‌ ಅಮೋಘ ಶತಕ ದಾಖಲಿಸಿದರಲ್ಲದೇ ಹಲವು ದಾಖಲೆಗಳನ್ನು ಸ್ಥಾಪಿಸಿ ಗಮನ ಸೆಳೆದಿದ್ದಾರೆ. ಇದು ಅವರ ಚೊಚ್ಚಲ ಶತಕವಾಗಿದೆ.

Advertisement

ಇಂಗ್ಲೆಂಡ್‌ ಬೌಲರ್‌ಗಳನ್ನು ದಂಡಿಸಿದ ಕ್ಯಾಪ್‌ ಅವರು ಕೇವಲ 213 ಎಸೆತಗಳಿಂದ 150 ರನ್‌ ಸಿಡಿಸಿ ಸಂಭ್ರಮಿಸಿದರು. ಇದರಿಂದಾಗಿ ಪ್ರವಾಸಿ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 284 ರನ್‌ ಗಳಿಸಿತ್ತು. ಇದರಲ್ಲಿ 26 ಬೌಂಡರಿ ಒಳಗೊಂಡಿತ್ತು. ವನಿತೆಯರ ಕ್ರಿಕೆಟ್‌ನಲ್ಲಿ ಅತೀವೇಗದ 150 ರನ್‌ ಗಳಿಸಿದ ಆಟಗಾರ್ತಿ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ.

ಇದನ್ನೂ ಓದಿ:ವೈಟ್‌ ಬಾಲ್‌ ಸರಣಿ: ನವೆಂಬರ್‌ನಲ್ಲಿ ಟೀಂ ಇಂಡಿಯಾ ನ್ಯೂಜಿಲ್ಯಾಂಡ್​ ಪ್ರವಾಸ

ಇದಕ್ಕುತ್ತರವಾಗಿ ಇಂಗ್ಲೆಂಡ್‌ ವನಿತೆಯರು ಕೂಡ ಉತ್ತಮವಾಗಿ ಆಡುತ್ತಿ ದ್ದಾರೆ. ಎರಡನೇ ದಿನದ ಆಟದ ವೇಳೆ ತಂಡ 5 ವಿಕೆಟ್‌ ಕಳೆದುಕೊಂಡಿದ್ದು 250 ರನ್‌ ಗಳಿಸಿದೆ. ನಾಟ್‌ ಸಿವೆರ್‌ 93 ರನ್‌ ಗಳಿಸಿ ಆಡುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next