ಲಂಡನ್: ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ಟೆಸ್ಟ್ ತಂಡವು ಮೂರು ಟೆಸ್ಟ್ ಗಳನ್ನು ಒಳಗೊಂಡ ಮುಂಬರುವ ಪಾಕಿಸ್ತಾನ ಪ್ರವಾಸಕ್ಕೆ ತಂಡದೊಂದಿಗೆ ಬಾಣಸಿಗರನ್ನು ಕರೆತರಲಿದೆ.
ಕ್ರಿಕ್ ಇನ್ಫೋ ವರದಿಯ ಪ್ರಕಾರ, ಟಿ20 ವಿಶ್ವಕಪ್ ಗೆ ಮೊದಲು ಏಳು ಟಿ20 ಪಂದ್ಯಗಳಿಗಾಗಿ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ತಂಡವು ಪಾಕಿಸ್ತಾನಕ್ಕೆ ಭೇಟಿ ನೀಡಿತ್ತು. ಸೀಮಿತ ಓವರ್ ಗಳಲ್ಲಿ ಆಡಿದ್ದ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಪಾಕಿಸ್ಥಾನದಲ್ಲಿ ತಮಗೆ ನೀಡಿದ್ದ ಆಹಾರವು ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಎಂದು ಫೀಡ್ ಬ್ಯಾಕ್ ನೀಡಿದ್ದರು.
ಅಲ್ಲದೆ ಪಾಕಿಸ್ಥಾನ ಸರಣಿಯ ವೇಳೆ ಕೆಲವು ಇಂಗ್ಲೆಂಡ್ ಆಟಗಾರರು ಹೊಟ್ಟೆ ನೋವಿನಿಂದ ಬಳಲಿದ್ದರು. ಹೀಗಾಗಿ ಈ ಬಾರಿ ಟೆಸ್ಟ್ ಸರಣಿಗೆ ಹೋಗುವಾಗ ತಾವೇ ಬಾಣಸಿಗರನ್ನು ಕರೆದುಕೊಂಡು ಹೋಗುವುದಾಗಿ ಇಂಗ್ಲೆಂಡ್ ತಂಡ ತಿಳಿಸಿದೆ.
ಇದನ್ನೂ ಓದಿ:ಮಂಗಳೂರು ಆಟೋ ಬ್ಲಾಸ್ಟ್ ಗೆ ಬಳ್ಳಾರಿಯ ನಂಟು? ಅಧಿಕಾರಿಗಳು ತನಿಖೆ ಮಾಡಿದ್ದು ಯಾರನ್ನು?
Related Articles
2018 ರ ಫಿಫಾ ವಿಶ್ವಕಪ್ ಮತ್ತು ಯುರೋ ಕಪ್ 2020 ರ ಸಮಯದಲ್ಲಿ ಇಂಗ್ಲೆಂಡ್ ಪುರುಷರ ಫುಟ್ಬಾಲ್ ತಂಡದೊಂದಿಗೆ ಕೆಲಸ ಮಾಡಿದ ಒಮರ್ ಮೆಜಿಯಾನೆ ಇಂಗ್ಲೆಂಡ್ ಟೆಸ್ಟ್ ತಂಡದ ಬಾಣಸಿಗರಾಗಿರುತ್ತಾರೆ ಎಂದು ವರದಿ ತಿಳಿಸಿದೆ.
ಇದೇ ಮೊದಲ ಬಾರಿಗೆ ದೇಶದ ಹೊರಗಿನ ಪ್ರವಾಸಕ್ಕೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ತಂಡದೊಂದಿಗೆ ವಿಶೇಷ ಬಾಣಸಿಗನನ್ನು ಕರೆದುಕೊಂಡು ಹೋಗುತ್ತಿದೆ.