Advertisement

ಬೃಹತ್‌ ಗೆಲುವಿನೊಂದಿಗೆ ಇಂಗ್ಲೆಂಡ್‌ ಶುಭಾರಂಭ

12:04 PM Jun 01, 2019 | Team Udayavani |

ಲಂಡನ್‌: ಈ ಬಾರಿಯ ವಿಶ್ವಕಪ್‌ ಕ್ರಿಕೆಟ್ ಅಮೋಘ ಆರಂಭ ಪಡೆದಿದೆ. ಭಾರೀ ನಿರೀಕ್ಷೆ ಮೂಡಿಸಿದ್ದ ಉದ್ಘಾಟನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಆಟದ ಪ್ರತಿಯೊಂದು ವಿಷಯದಲ್ಲೂ ಭಾರೀ ವೈಫ‌ಲ್ಯ ಕಂಡಿದೆ. ಇದರಿಂದಾಗಿ ಆತಿಥೇಯ ಇಂಗ್ಲೆಂಡ್‌ ತಂಡವು 104 ರನ್‌ ಅಂತರದ ಬೃಹತ್‌ ಗೆಲುವು ಸಾಧಿಸಿ ಶುಭಾರಂಭಗೈದಿದೆ.

Advertisement

ಬಲಿಷ್ಠ ತಂಡಗಳೆನಿಸಿದ ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ನಡುವಣ ಈ ಪಂದ್ಯ ಜಿದ್ದಾಜಿದ್ದಿದಿಂದ ಸಾಗಬ ಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ದಕ್ಷಿಣ ಆಫ್ರಿಕಾ ಅತ್ಯಂತ ನೀರಸವಾಗಿ ಆಡಿದ್ದರಿಂದ ಇಂಗ್ಲೆಂಡ್‌ ಸುಲಭವಾಗಿ ಜಯಭೇರಿ ಬಾರಿಸುವಂತಾಯಿತು.

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡ್‌ ತಂಡವು ಜಾಸನ್‌ ರಾಯ್‌, ರೂಟ್, ಮಾರ್ಗನ್‌ ಮತ್ತು ಬೆನ್‌ ಸ್ಟೋಕ್ಸ್‌ ಅವರ ಆಕರ್ಷಕ ಅರ್ಧಶತಕದಿಂದಾಗಿ 8 ವಿಕೆಟಗೆ 311 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಬೌಲಿಂಗ್‌ನಲ್ಲೂ ಮಾರಕ ದಾಳಿ ಸಂಘಟಿಸಿದ ಇಂಗ್ಲೆಂಡ್‌ ದಕ್ಷಿಣ ಆಫ್ರಿಕಾದ ರನ್‌ ವೇಗಕ್ಕೆ ಕಡಿವಾಣ ಹಾಕಿತಲ್ಲದೇ ಆಗಾಗ್ಗೆ ವಿಕೆಟ್ ಉರುಳಿಸಿದ್ದರಿಂದ ಮೇಲುಗೈ ಸಾಧಿಸಿತು. ಅಂತಿಮವಾಗಿ 39.5 ಓವರ್‌ಗಳಲ್ಲಿ 207 ರನ್ನಿಗೆ ಆಲೌಟಾದ ದಕ್ಷಿಣ ಆಫ್ರಿಕಾ ಭಾರೀ ಅಂತರದಿಂದ ಶರಣಾಯಿತು.

ಕಾಕ್‌ ಅರ್ಧಶತಕ
ಗೆಲ್ಲಲು 312 ರನ್‌ ಗಳಿಸುವ ಕಠಿನ ಗುರಿ ಪಡೆದ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆದರೂ ತ್ವರಿತವಾಗಿ ರನ್‌ ಗಳಿಸಲು ಒದ್ದಾಡಿತು. ಐಪಿಎಲ್ನ ಹೀರೊ ಜೋಫ‌್ರ ಆರ್ಚರ್‌ ಸಹಿತ ಕ್ರಿಸ್‌ ವೋಕ್ಸ್‌ ಮತ್ತು ಲಿಯಮ್‌ ಪ್ಲಂಕೆಟ್ ಅವರ ಬಿಗು ದಾಳಿಯಿಂದ ರನ್‌ ಗಳಿಸಲು ಒದ್ದಾಡಿದ ಆಟಗಾರರು ಆಗಾಗ್ಗೆ ವಿಕೆಟ್ ಒಪ್ಪಿಸುತ್ತ ಹೋದರು. ಆರಂಭಿಕ ಕ್ವಿಂಟನ್‌ ಡಿ ಕಾಕ್‌ ಮತ್ತು ರಸ್ಸಿ ವಾನ್‌ ಡೆರ್‌ ಡುಸೆನ್‌ ಮಾತ್ರ ಅರ್ಧಶತಕ ಹೊಡೆದರು. ಕಾಕ್‌ 74 ಎಸೆತಗಳಿಂದ 68 ರನ್‌ ಹೊಡೆದರೆ ಡುಸೆನ್‌ 50 ರನ್‌ ಗಳಿಸಿದರು.

ಅನುಭವಿ ಹಾಶಿಮ್‌ ಆಮ್ಲ ಒಟ್ಟಾರೆ 13 ರನ್‌ ಗಳಿಸಲಷ್ಟೇ ಶಕ್ತರಾದರು. ಆಟದ ನಡುವೆ ಗಾಯಗೊಂಡ ಅವರು ನಿವೃತ್ತಿಯಾಗಿದ್ದರು. ಮತ್ತೆ ಆಡಲು ಬಂದು 13 ರನ್‌ ತಲುಪಿದಾಗ ಔಟಾದರು. ನಾಯಕ ಫಾ ಡು ಪ್ಲೆಸಿಸ್‌ 5 ರನ್ನಿಗೆ ಔಟಾದರು. ಜೀನ್‌ ಪಾಲ್ ಡ್ಯುಮಿನಿ ಕೂಡ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಕಂಡರು.

Advertisement

ಬೇರ್‌ಸ್ಟೋ ಶೂನ್ಯಕ್ಕೆ ಔಟ್
ಉತ್ತಮ ಫಾರ್ಮ್ನಲ್ಲಿದ್ದ ಜಾನಿ ಬೇರ್‌ಸ್ಟೋ ಮೊದಲ ಓವರಿನ ಎರಡನೇ ಎಸತೆದಲ್ಲಿ ತಾಹಿರ್‌ಗೆ ವಿಕೆಟ್ ಒಪ್ಪಿಸಿದಾಗ ಆತಿಥೇಯರು ಬೆಚ್ಚಿಬಿದ್ದರು.ಬೇರ್‌ಸ್ಟೋ ತಾನೆದುರಿಸಿದ ಮೊದಲ ಎಸೆತಕ್ಕೆ ಬಲಿಯಾಗಿದ್ದರು. ಆದರೆ ಜಾಸನ್‌ ರಾಯ್‌ ಮತ್ತು ಜೋ ರೂಟ್ ತಾಳ್ಮೆಯ ಆಟವಾಡಿ ತಂಡವನ್ನು ಆಧರಿಸಿದರು.

ಹರಿಣಗಳ ದಾಳಿಯನ್ನು ಎಚ್ಚರಿಕೆಯಿಂದ ಆಡಿದ ಅವರಿಬ್ಬರು ಎಸೆತಕ್ಕೊಂದರಂತೆ ರನ್‌ ಗಳಿಸಲು ಮುಂದಾದರು. ಬೀಸು ಹೊಡೆತಗಳಿಗೆ ಮುಂದಾಗಲೇ ಇಲ್ಲ. 18 ಓವರ್‌ ನಿಭಾಯಿಸಿದ ಅವರಿಬ್ಬರು ದ್ವಿತೀಯ ವಿಕೆಟಿಗೆ 106 ರನ್ನುಗಳ ಜತೆಯಾಟ ನೀಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇಬ್ಬರಿಂದಲೂ ಅರ್ಧಶತಕ ದಾಖಲಾದವು. ಈ ಜೋಡಿಯನ್ನು ಮುರಿಯಲು ದಕ್ಷಿಣ ಆಫ್ರಿಕಾ ಮಾಡಿದ ಯಾವುದೇ ಪ್ರಯತ್ನ ಫ‌ಲ ನೀಡಲಿಲ್ಲ.

ಓವರೊಂದಕ್ಕೆ ಐದರಂತೆ ರನ್‌ ಗಳಿಸಿದ ಜಾಸನ್‌ ಮತ್ತು ರೂಟ್ ತಂಡದ ಬೃಹತ್‌ ಮೊತ್ತಕ್ಕೆ ಒಳ್ಳೆಯ ಅಡಿಪಾಯ ಹಾಕಿಕೊಟ್ಟರು. ಆದರೆ ಅವರಿಬ್ಬರು 5 ರನ್‌ ಅಂತರದಲ್ಲಿ ಪೆವಿಲಿಯನ್‌ ಸೇರಿಕೊಂಡಾಗ ಇಂಗ್ಲೆಂಡ್‌ ಮತ್ತೆ ಆಘಾತಕ್ಕೆ ಒಳಗಾಯಿತು. 53 ಎಸೆತ ಎದುರಿಸಿ 54 ರನ್‌ ಹೊಡೆದ ಜಾಸನ್‌ ಮೊದಲಿಗೆ ಔಟಾದರೆ ರೂಟ್ ಮುಂದಿನ ಓವರಿನಲ್ಲಿ ರಬಾಡಗೆ ವಿಕೆಟ್ ಒಪ್ಪಿಸಿದರು. ಅವರು 59 ಎಸೆತಗಳಿಂದ 51 ರನ್‌ ಹೊಡೆದಿದ್ದರು.

ನಾಲ್ವರ ಅರ್ಧಶತಕ
ಜಾಸನ್‌, ರೂಟ್ ಅರ್ಧಶತಕ ಸಿಡಿಸಿದ ಬಳಿಕ ಜತೆಗೂಡಿದ ನಾಯಕ ಇಯಾನ್‌ ಮಾರ್ಗನ್‌ ಮತ್ತು ಬೆನ್‌ ಸ್ಟೋಕ್ಸ್‌ ರನ್‌ವೇಗಕ್ಕೆ ಚುರುಕು ಮುಟ್ಟಿಸಿದರು. ಅವರಿಬ್ಬರು ಮತ್ತೆ 4ನೇ ವಿಕೆಟಿಗೆ 106 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಇಬ್ಬರೂ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಇದರಿಂದ ತಂಡ 37 ಓವರ್‌ ಮುಗಿಯುತ್ತಲೇ 217ರ ಗಡಿ ದಾಟಿತಲ್ಲದೇ ಮೊತ್ತ 300 ಪ್ಲಸ್‌ ಗಳಿಸುವ ಸೂಚನೆ ನೀಡಿತು. ಬಿರುಸಿನ ಆಟವಾಡಿದ ಮಾರ್ಗನ್‌ 60 ಎಸೆತಗಳಿಂದ 4 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 57 ರನ್‌ ಗಳಿಸಿದರೆ ಸ್ಟೋಕ್ಸ್‌ 79 ಎಸೆತಗಳಿಂದ 89 ರನ್‌ ಗಳಿಸಿದರು. 9 ಬೌಂಡರಿ ಬಾರಿಸಿ ರಂಜಿಸಿದರು.

ಸ್ಕೋರ್‌ಪಟ್ಟಿ
ಇಂಗ್ಲೆಂಡ್‌
ಜಾಸನ್‌ ರಾಯ್‌ ಸಿ ಡು ಪ್ಲೆಸಿಸ್‌ ಬಿ ಫೆಲುಕ್ವಾಯೊ 54
ಜಾನಿ ಬೇರ್‌ ಸ್ಟೊ ಸಿ ಡಿ ಕಾಕ್‌ ಬಿ ತಾಹಿರ್‌ 0
ಜೋ ರೂಟ್‌ ಸಿ ಡ್ಯುಮಿನಿ ಬಿ ರಬಾಡ 51
ಇಯಾನ್‌ ಮಾರ್ಗನ್‌ ಸಿ ಮಾರ್ಕರಮ್‌ ಬಿ ತಾಹಿರ್‌ 57
ಬೆನ್‌ ಸ್ಟೋಕ್ಸ್‌ ಸಿ ಆಮ್ಲ ಬಿ ಎನ್‌ಗಿಡಿ 89
ಜಾಸ್‌ ಬಟ್ಲರ್‌ ಬಿ ಎನ್‌ಗಿಡಿ 18
ಮೊಯಿನ್‌ ಅಲಿ ಸಿ ಡು ಪ್ಲೆಸಿಸ್‌ ಬಿ ಎನ್‌ಗಿಡಿ 3
ಕ್ರಿಸ್‌ ವೋಕ್ಸ್‌ ಸಿ ಡು ಪ್ಲೆಸಿಸ್‌ ಬಿ ರಬಾಡ 13
ಲಿಯಮ್‌ ಪ್ಲಂಕೆಟ್‌ ಔಟಾಗದೆ 9
ಜೋಫ‌Å ಆರ್ಚರ್‌ ಔಟಾಗದೆ 7
ಇತರ 10
ಒಟ್ಟು (8ವಿಕೆಟಿಗೆ) 311
ವಿಕೆಟ್‌ ಪತನ: 1-1, 2-107, 3-111, 4-217, 5-247, 6-260, 7-285, 8-300.
ಬೌಲಿಂಗ್‌
ಇಮ್ರಾನ್‌ ತಾಹಿರ್‌ 10-0-61-2
ಲುಂಗಿ ಎನ್‌ಗಿಡಿ 10-0-66-3
ಕಾಗಿಸೊ ರಬಾಡ 10-0-66-2
ಡ್ವೇನ್‌ ಪ್ರಿಟೋರಿಯಸ್‌ 7-0-42-0
ಆ್ಯಂಡಿಲ್‌ ಫೆಲುಕ್ವಾಯೊ 8-0-44-1
ಜೆ.ಪಿ. ಡುಮಿನಿ 2-0-14-0
ಐಡನ್‌ ಮಾರ್ಕ್‌ರಮ್‌ 3-0-16-0
ದಕ್ಷಿಣ ಆಫ್ರಿಕಾ
ಕ್ವಿಂಡನ್‌ ಡಿ ಕಾಕ್‌ ಸಿ ರೂಟ್‌ ಬಿ ಪ್ಲಂಕೆಟ್‌ 68
ಹಾಶಿಮ್‌ ಆಮ್ಲ ಸಿ ಬಟ್ಲರ್‌ ಬಿ ಪ್ಲಂಕೆಟ್‌ 13
ಐಡನ್‌ ಮಾರ್ಕ್‌ರಮ್‌ ಸಿ ರೂಟ್‌ ಬಿ ಆರ್ಚರ್‌ 11
ಫಾ ಡು ಪ್ಲೆಸಿಸ್‌ ಸಿ ಮೊಯಿನ್‌ ಬಿ ಆರ್ಚರ್‌ 5
ಡರ್‌ ಡ್ಯುಸೆನ್‌ ಸಿ ಮೊಯಿನ್‌ ಬಿ ಆರ್ಚರ್‌ 50
ಜೆ.ಪಿ. ಡ್ಯುಮಿನಿ ಸಿ ಸ್ಟೋಕ್ಸ್‌ ಬಿ ಮೊಯಿನ್‌ 8
ಡ್ವೇನ್‌ ಪ್ರಿಟೋರಿಯಸ್‌ ರನೌಟ್‌ 1
ಆ್ಯಂಡಿಲ್‌ ಫೆಲುಕ್ವಾಯೊ ಸಿ ಸ್ಟೋಕ್ಸ್‌ ಬಿ ರಶೀದ್‌ 24
ಕಾಗಿಸೊ ರಬಾಡ ಸಿ ಪ್ಲಂಕೆಟ್‌ ಬಿ ಸ್ಟೋಕ್ಸ್‌ 11
ಲುಂಗಿ ಎನ್‌ಗಿಡಿ ಔಟಾಗದೆ 6
ಇಮ್ರಾನ್‌ ತಾಹಿರ್‌ ಸಿ ರೂಟ್‌ ಬಿ ಸ್ಟೋಕ್ಸ್‌ 0
ಇತರ 10
ಒಟ್ಟು(39.5 ಓವರ್‌ಗಳಲ್ಲಿ ಆಲೌಟ್‌) 207
ವಿಕೆಟ್‌ ಪತನ; 1-36, 2-44, 3-129, 4-142, 5-144, 6-167, 7-180, 8-193, 9-207
ಬೌಲಿಂಗ್‌
ಕ್ರೀಸ್‌ ವೋಕ್ಸ್‌ 5-0-24-0
ಜೋಫ‌Å ಆರ್ಚರ್‌ 7-1-27-3
ಆದಿಲ್‌ ರಶೀದ್‌ 8-0-35-1
ಮೊಯಿನ್‌ ಅಲಿ 10-0-63-1
ಲಿಯಮ್‌ ಪ್ಲಂಕೆಟ್‌ 7-0-32-2
ಬೆನ್‌ ಸ್ಟೋಕ್ಸ್‌ 2.5-0-12-2

Advertisement

Udayavani is now on Telegram. Click here to join our channel and stay updated with the latest news.

Next