Advertisement

ಭಾರತ-ಪಾಕ್‌ ಟೆಸ್ಟ್‌ ಸರಣಿ: ತಟಸ್ಥ ತಾಣ: ಇಂಗ್ಲೆಂಡ್‌ ಕೊಡುಗೆ

11:59 PM Sep 27, 2022 | Team Udayavani |

ಲಂಡನ್‌: ಒಂದು ವೇಳೆ ಭಾರತ ಮತ್ತು ಪಾಕಿಸ್ಥಾನ ತಟಸ್ಥ ನೆಲದಲ್ಲಿ ದ್ವಿಪಕ್ಷೀಯ ಟೆಸ್ಟ್‌ ಸರಣಿಯನ್ನು ಆಡುವ ಯೋಜನೆ ಮಾಡುವುದಿದ್ದರೆ ತಾವು ಆತಿಥ್ಯ ವಹಿಸುವ ಕೊಡುಗೆಯನ್ನು ಇಂಗ್ಲೆಂಡ್‌ ಆ್ಯನ್‌ ವೇಲ್ಸ್‌ ಕ್ರಿಕೆಟ್‌ ಮಂಡಳಿ ನೀಡಿದೆ. ಆದರೆ ಈ ಕೊಡುಗೆ ಬಗ್ಗೆ ಭಾರತೀಯ ಕ್ರಿಕೆಟ್‌ ಮಂಡಳಿ ಮೂಲಗಳು ಆಸಕ್ತಿ ವಹಿಸಿಲ್ಲ ಎಂದು ತಿಳಿಸಿವೆ.

Advertisement

ಪತ್ರಿಕೆಯೊಂದರ ವರದಿ ಪ್ರಕಾರ ಇಂಗ್ಲೆಂಡ್‌ ಆ್ಯನ್‌ ವೇಲ್ಸ್‌ ಕ್ರಿಕೆಟ್‌ ಮಂಡಳಿಯ ಉಪ ಚೇರ್ಮನ್‌ ಮಾರ್ಟಿನ್‌ ಡಾರ್ಲೋ ಅವರು ಸದ್ಯ ಸಾಗುತ್ತಿರುವ ಟಿ20 ಸರಣಿ ವೇಳೆ ಪಾಕಿಸ್ಥಾನ ಕ್ರಿಕೆಟ್‌ ಮಂಡಳಿಯ ಅಧಿಕಾರಿಗಳ ಜತೆ ಭವಿಷ್ಯದಲ್ಲಿ ಕ್ರಿಕೆಟ್‌ ಸರಣಿ ಆಯೋಜಿಸುವ ನಿಟ್ಟಿನಲ್ಲಿ ಚರ್ಚೆ ನಡೆಯುವ ವೇಳೆ ಇಂಗ್ಲೆಂಡಿನ ಮೈದಾನಗಳನ್ನು ಒದಗಿಸುವ ಕೊಡುಗೆ ನೀಡಿದ್ದರು. ಈ ಸಲಹೆಗೆ ಉತ್ತರಿಸಿದ ಬಿಸಿಸಿಐ ಮುಂದಿನ ಕೆಲವು ವರ್ಷ ದ್ವಿಪಕ್ಷೀಯ ಸರಣಿ ನಡೆಯುವ ಸಾಧ್ಯತೆ ಇಲ್ಲವೆಂದು ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next