Advertisement

ಇಂದಿನಿಂದ ಲಾರ್ಡ್ಸ್‌ ಟೆಸ್ಟ್‌: ಬಿಲ್ಲಿಂಗ್ಸ್‌ ಬದಲು ಬೆನ್‌ ಫೋಕ್ಸ್‌

11:05 PM Aug 16, 2022 | Team Udayavani |

ಲಂಡನ್‌: ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್‌ ಪಂದ್ಯ ಬುಧವಾರ ಐತಿಹಾಸಿಕ ಲಾರ್ಡ್ಸ್‌ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಇದಕ್ಕಾಗಿ ಆತಿಥೇಯ ಇಂಗ್ಲೆಂಡ್‌ ತನ್ನ ಆಡುವ ಬಳಗವನ್ನು ಪ್ರಕಟಿಸಿದೆ.

Advertisement

ಭಾರತ ವಿರುದ್ಧ ಆಡಲಾದ, ಮುಂದೂಡಲ್ಪಟ್ಟ ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ ಪಂದ್ಯದ ಹನ್ನೊಂದರ ಬಳಗದಲ್ಲಿ ಇಂಗ್ಲೆಂಡ್‌ ಒಂದು ಬದಲಾವಣೆ ಮಾಡಿಕೊಂಡು ತಂಡವನ್ನು ಹೆಸರಿಸಿದೆ. ವಿಕೆಟ್‌ ಕೀಪರ್‌ ಸ್ಯಾಮ್‌ ಬಿಲ್ಲಿಂಗ್ಸ್‌ ಸ್ಥಾನಕ್ಕೆ ಬೆನ್‌ ಫೋಕ್ಸ್‌ ಅವರನ್ನು ಸೇರಿಸಿಕೊಂಡಿದೆ.

ಜೂನ್‌ ತಿಂಗಳಲ್ಲಿ ಕೋವಿಡ್‌ ಕಾರಣದಿಂದ ಬೆನ್‌ ಫೋಕ್ಸ್‌ ಇಂಗ್ಲೆಂಡ್‌ ತಂಡದಿಂದ ಬೇರ್ಪಟ್ಟಿದ್ದರು. ಇವರ ಬದಲು ಸ್ಯಾಮ್‌ ಬಿಲ್ಲಿಂಗ್ಸ್‌ ಅವರನ್ನು ಸೇರಿಸಿಕೊಳ್ಳಲಾಗಿತ್ತು.

3 ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಡೀನ್‌ ಎಲ್ಗರ್‌ ಮುನ್ನಡೆಸಲಿದ್ದಾರೆ. ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ಈವರೆಗೆ ಲಾರ್ಡ್ಸ್‌ನಲ್ಲಿ 16 ಟೆಸ್ಟ್‌ ಆಡಿದ್ದು, 7 ಪಂದ್ಯಗಳಲ್ಲಿ ಇಂಗ್ಲೆಂಡ್‌ ಜಯ ಸಾಧಿಸಿದೆ. ಹಾಗೆಯೇ ನಾಯಕ ಬೆನ್‌ ಸ್ಟೋಕ್ಸ್‌ ಮತ್ತು ಕೋಚ್‌ ಬ್ರೆಂಡನ್‌ ಮೆಕಲಮ್‌ ಕಾಂಬಿನೇಶನ್‌ನಲ್ಲಿ ಆಡಲಾದ ಕಳೆದ ನಾಲ್ಕೂ ಟೆಸ್ಟ್‌ ಪಂದ್ಯಗಳನ್ನು ಇಂಗ್ಲೆಂಡ್‌ ಜಯಿಸಿದೆ. ಹೀಗಾಗಿ ಲಾರ್ಡ್ಸ್‌ನಲ್ಲೂ ಇಂಗ್ಲೆಂಡೇ ನೆಚ್ಚಿನ ತಂಡವಾಗಿ ಗೋಚರಿಸುತ್ತಿದೆ.

ಇಂಗ್ಲೆಂಡ್‌ ಆಡುವ ಬಳಗ: ಜಾಕ್‌ ಕ್ರಾಲಿ, ಅಲೆಕ್ಸ್‌ ಲೀಸ್‌, ಓಲೀ ಪೋಪ್‌, ಜೋ ರೂಟ್‌, ಜಾನಿ ಬೇರ್‌ಸ್ಟೊ, ಬೆನ್‌ ಸ್ಟೋಕ್ಸ್‌ (ನಾಯಕ), ಬೆನ್‌ ಫೋಕ್ಸ್‌, ಸ್ಟುವರ್ಟ್‌ ಬ್ರಾಡ್‌, ಜಾಕ್‌ ಲೀಚ್‌, ಮ್ಯಾಥ್ಯೂ ಪಾಟ್ಸ್‌, ಜೇಮ್ಸ್‌ ಆ್ಯಂಡರ್ಸನ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next