Advertisement

ಬೆಂಗಳೂರಿನಲ್ಲೊಂದು ಟೈ ರೋಮಾಂಚನ

09:22 AM Jun 30, 2019 | Team Udayavani |

ಭಾರತ-ಇಂಗ್ಲೆಂಡ್‌ ಕೊನೆಯ ಸಲ ವಿಶ್ವಕಪ್‌ನಲ್ಲಿ ಎದುರಾದದ್ದು 2011ರಲ್ಲಿ. ಅಂದು ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆದ ಈ ಬೃಹತ್‌ ಮೊತ್ತದ ಪಂದ್ಯ ರೋಚಕವಾಗಿ ಸಾಗಿ ಕೊನೆಯಲ್ಲಿ ಟೈ ಆಗಿತ್ತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ಸಚಿನ್‌ ತೆಂಡುಲ್ಕರ್‌ ಅವರ 120 ರನ್‌ ಸಾಹಸದಿಂದ 49.5 ಓವರ್‌ಗಳಲ್ಲಿ 338 ರನ್‌ ಪೇರಿಸಿತು. ಗೌತಮ್‌ ಗಂಭೀರ್‌ 51, ಯುವರಾಜ್‌ ಸಿಂಗ್‌ 58 ರನ್‌ ಕಾಣಿಕೆ ಸಲ್ಲಿಸಿದ್ದರು.

ನಾಯಕ ಹಾಗೂ ಆರಂಭಕಾರ ಆ್ಯಂಡ್ರೂ ಸ್ಟ್ರಾಸ್‌ ಅವರ ಅಮೋಘ 158 ರನ್‌ ಪರಾಕ್ರಮದಿಂದ ಬೆನ್ನಟ್ಟಿಕೊಂಡು ಬಂದ ಇಂಗ್ಲೆಂಡ್‌ ಧೋನಿ ಪಡೆಯನ್ನು ಬೆದರಿಸುತ್ತಲೇ ಸಾಗಿತು. ಕೊನೆಗೆ 2 ವಿಕೆಟ್‌ಗಳನ್ನು ಕೈಲಿರಿಸಿಕೊಂಡು ತಾನೂ 338 ರನ್‌ ಮಾಡಿ ಪಂದ್ಯವನ್ನು ಟೈ ಮಾಡಿತು. ಭಾರತ ದೊಡ್ಡ ಆತಂಕದಿಂದ ಪಾರಾಗಿತ್ತು.

ಕೊನೆಯ ಓವರ್‌ನಲ್ಲಿ 14 ರನ್‌
ಮುನಾಫ್ ಪಟೇಲ್‌ ಪಾಲಾದ ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್‌ ಜಯಕ್ಕೆ 2 ವಿಕೆಟ್‌ಗಳಿಂದ 14 ರನ್‌ ಬೇಕಿತ್ತು. ಸವಾಲು ಕಠಿನವಾಗಿತ್ತಾದರೂ ಅಹ್ಮದ್‌ ಶಾಜಾದ್‌ 3ನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಲೆಕ್ಕಾಚಾರವನ್ನು ಸರಳಗೊಳಿಸಿದರು. ಆದರೆ ಅಂತಿಮ ಎಸೆತದಲ್ಲಿ ಗ್ರಹಾಂ ಸ್ವಾನ್‌ 2 ರನ್‌ ಗಳಿಸಲು ವಿಫ‌ಲರಾದರು. ಅವರಿಗೆ ಒಂದೇ ರನ್‌ ಸಿಕ್ಕಿತು; ಪಂದ್ಯಕ್ಕೆ ಟೈ ಮುದ್ರೆ ಬಿತ್ತು!

ಲಾರ್ಡ್ಸ್‌ನಲ್ಲಿ ಡಿ-ಎಲ್‌ ಟೈ
ಅದೇ ವರ್ಷದ ಇಂಗ್ಲೆಂಡ್‌ ಪ್ರವಾಸದ ವೇಳೆ ಲಾರ್ಡ್ಸ್‌ನಲ್ಲಿ ನಡೆದ ಏಕದಿನ ಪಂದ್ಯ ಡಕ್‌ವರ್ತ್‌ – ಲೂಯಿಸ್‌ ನಿಯಮದ ಪ್ರಕಾರ ಟೈ ಆಗಿತ್ತು! ಇಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 5 ವಿಕೆಟಿಗೆ 280 ರನ್‌ ಪೇರಿಸಿದರೆ, ಇಂಗ್ಲೆಂಡ್‌ 48.5 ಓವರ್‌ಗಳಲ್ಲಿ 8 ವಿಕೆಟಿಗೆ 270 ರನ್‌ ಮಾಡಿತು. ಆಗ ಮತ್ತೆ ಮಳೆ ಸುರಿದುದರಿಂದ ಫ‌ಲಿತಾಂಶಕ್ಕೆ ಡಿ-ಎಲ್‌ ನಿಯಮವನ್ನು ಅಳವಡಿಸಲಾಯಿತು. ಇಂಗ್ಲೆಂಡ್‌ ಗೆಲುವಿನಿಂದ  ಒಂದೇ ರನ್‌ ಹಿಂದಿತ್ತು!

Advertisement
Advertisement

Udayavani is now on Telegram. Click here to join our channel and stay updated with the latest news.

Next