Advertisement

ಎಂಜಿನಿಯರಿಂಗ್‌ ಸೀಟು ಮ್ಯಾಟ್ರಿಕ್ಸ್‌ ಪ್ರಕಟ : ಇಲ್ಲಿದೆ ಮಾಹಿತಿ

01:10 AM Oct 07, 2022 | Team Udayavani |

ಬೆಂಗಳೂರು : ಎಂಜಿನಿಯರಿಂಗ್‌, ವಾಸ್ತುಶಿಲ್ಪ (ಆರ್ಕಿಟೆಕ್ಚರ್‌) ಹಾಗೂ ಡಿಪ್ಲೊಮಾ ಕೋರ್ಸ್‌ಗಳ ಸೀಟು ವಿವರವನ್ನು (ಮ್ಯಾಟ್ರಿಕ್ಸ್‌ ) ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಪ್ರಕಟಿಸಿದೆ.

Advertisement

ರಾಜ್ಯದ ಎಂಜಿನಿಯರಿಂಗ್‌ ಕಾಲೇಜುಗಳು ಹಾಗೂ ಕೋರ್ಸ್‌ಗಳಲ್ಲಿ ಲಭ್ಯವಿರುವ ಸೀಟುಗಳ ಮಾಹಿತಿ ಯನ್ನು ಪ್ರಕಟಿಸಲಾಗಿದೆ. ವಿದ್ಯಾರ್ಥಿ ಗಳು ವೆಬ್‌ಸೈಟ್‌ಗೆ ಭೇಟಿ ನೀಡಿ ವಿವರ ಪಡೆಯಬಹುದು. ಕೆಲವು ಕಾಲೇಜುಗಳ ಮಾಹಿತಿ ಇನ್ನೂ ಅಂತಿಮ ಗೊಳ್ಳಬೇಕಿದ್ದು, ಶುಕ್ರವಾರ ಮಧ್ಯಾಹ್ನದ ವೇಳೆಗೆ ಸಮಗ್ರ ಮಾಹಿತಿ ಸಿಗಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ ಸ್ಪಷ್ಟಪಡಿಸಿದ್ದಾರೆ.

ಯುಜಿ ಸಿಇಟಿ-2022ರಲ್ಲಿ ಮೀಸಲು ಕೋರಿರುವ ಅರ್ಜಿಗಳಲ್ಲಿ ಅರ್ಹತೆ ಮತ್ತು ಅನರ್ಹತೆ ಹೊಂದಿರುವ ಪಟ್ಟಿಯನ್ನೂ ಪ್ರಕಟಿಸಲಾಗಿದೆ. ಅಂದಾಜು 3 ಸಾವಿರ ವಿದ್ಯಾರ್ಥಿಗಳು, ಗ್ರಾಮೀಣ, ಕನ್ನಡ ಮಾಧ್ಯಮ ಮೀಸಲು ಪಡೆಯುವಲ್ಲಿ ವಿಫಲರಾಗಿದ್ದಾರೆ. ಇವರಿಗೆ ಮತ್ತೂಮ್ಮೆ ಅವಕಾಶ ನೀಡಿದ್ದು, ಸೂಕ್ತ ದಾಖಲೆಗಳಿದ್ದಲ್ಲಿ ಕೆಇಎಗೆ ಭೇಟಿ ನೀಡಿ ಪರಿಶೀಲನೆಗೆ ಒಳ ಪಡಿ ಸಲು ಸೂಚಿಸಲಾಗಿದೆ. ಓಸಿಐ ವಿದ್ಯಾರ್ಥಿಗಳು ಸಹ ರಿಟ್‌ ಅರ್ಜಿ ಪ್ರತಿಯೊಂದಿಗೆ ದಾಖಲೆಗಳ ಪರಿ ಶೀಲನೆಗೆ ಹಾಜರಾಗಬಹುದು. ಮಾಹಿತಿಗೆ /kea.kar.nic.in ಕೆಇಎ ವೆಬ್‌ಸೈಟ್‌ ನೋಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next