Advertisement

ಎಂಜಿನಿಯರಿಂಗ್‌ ಸೀಟು ಹಂಚಿಕೆ: ಮುಂದೂಡಲು ಸಚಿವರ ಸೂಚನೆ

06:00 AM Aug 08, 2018 | Team Udayavani |

ಬೆಂಗಳೂರು: ವೈದ್ಯಕೀಯ ಸೀಟು ಹಂಚಿಕೆಯ ಎರಡನೇ ಸುತ್ತಿನ ಫ‌ಲಿತಾಂಶ ಪ್ರಕಟವಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಂಜಿನಿಯರಿಂಗ್‌ ಎರಡನೇ ಮುಂದುವರಿದ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಮುಂದೂಡುವಂತೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶಿಸಿದ್ದಾರೆ. ಮಂಗಳವಾರ ಮಲ್ಲೇಶ್ವರದಲ್ಲಿರುವ ಪ್ರಾಧಿಕಾರದ ಕಚೇರಿಗೆ ಭೇಟಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ವೈದ್ಯಕೀಯ ಮತ್ತು ದಂತವೈದ್ಯಕೀಯ, ಎಂಜಿನಿಯರಿಂಗ್‌, ಕೃಷಿ ವಿಜ್ಞಾನ ಕೋರ್ಸ್‌ಗಳ ಸೀಟು ಹಂಚಿಕೆಯ ಮಾಹಿತಿ ಪಡೆದರು.

Advertisement

ಇದೇ ವೇಳೆ ಮಾಜಿ ಶಾಸಕ ವೈ.ಎಸ್‌.ವಿ.ದತ್ತ ಕೂಡ ಪ್ರಾಧಿಕಾರಕ್ಕೆ ಆಗಮಿಸಿ ಎಂಜಿನಿಯರಿಂಗ್‌ 2ನೇ ಮುಂದುವರಿದ ಸುತ್ತಿನ ಸೀಟು ಹಂಚಿಕೆ ಮುಂದೂಡುವಂತೆ ಸಚಿವರಿಗೆ ಮನವಿ ಮಾಡಿದರು. ಪ್ರಾಧಿಕಾರ ಆ.8ರಂದು ಸೀಟು ಹಂಚಿಕೆ ಮಾಡಲು ನಿರ್ಧರಿಸಿತ್ತು. ಸಚಿವರ ಸೂಚನೆಯಂತೆ ಆ.11ರಿಂದ 14ರೊಳಗೆ ಮುಂದುವರಿದ ಸೀಟು ಹಂಚಿಕೆ ಪ್ರಕ್ರಿಯೆ ಮುಗಿಸಲು ನಿರ್ಧರಿಸಿದೆ. 

ಅನುದಾನ ಬಿಡುಗಡೆ 
ಬೆಂಗಳೂರು: ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಕೊಠಡಿ ದುರಸ್ತಿಗೆ ರಾಜ್ಯ ಸರ್ಕಾರ 25.51 ಕೋಟಿ ರೂ.
ಅನುದಾನ ಬಿಡುಗಡೆ ಮಾಡಿದೆ. 1253 ಸರ್ಕಾರಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1881 ಕೊಠಡಿ ದುರಸ್ತಿಗೆ 16.03 ಕೋಟಿ ರೂ. ಹಾಗೂ 939
ಪ್ರೌಢಶಾಲೆಗಳ 1807 ಕೊಠಡಿಗಳ ದುರಸ್ತಿಗೆ 19.89 ಕೋಟಿ ರೂ., 92 ಪ್ರಾಥಮಿಕ ಶಾಲೆಗಳಲ್ಲಿ 94 ಕೊಠಡಿ ಮರು ನಿರ್ಮಾಣಕ್ಕೆ 9.96 ಕೋಟಿ ರೂ. ಮತ್ತು 330 ಪ್ರೌಢಶಾಲೆಗಳಲ್ಲಿ 408 ಕೊಠಡಿ ಮರು ನಿರ್ಮಾಣಕ್ಕೆ 64.26 ಕೋಟಿ ರೂ.ಗಳ ಕ್ರಿಯಾಯೋಜನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಸಿದಟಛಿಪಡಿಸಿ ಅನುಮೊದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕೊಠಡಿ ದುರಸ್ತಿಗೆ ಮೊದಲ ತ್ತೈಮಾಸಿಕದಲ್ಲಿ 12.75 ಕೋಟಿ ರೂ., ಎರಡನೇ ತ್ತೈಮಾಸಿಕದಲ್ಲಿ 12.75 ರೂ. ಸೇರಿ ಈವರೆಗೆ 25.51 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next