Advertisement

ಯೂಟ್ಯೂಬ್‌ನಲ್ಲಿ ವಿಜ್ಞಾನ ಓದಿದ್ರೂ ಎಂಜಿನಿಯರಿಂಗ್‌ ಕಲಿಯಬಹುದು

12:41 AM Mar 31, 2021 | Team Udayavani |

ಗಣಿತ, ಭೌತಶಾಸ್ತ್ರ, ರಸಾಯನ ಶಾಸ್ತ್ರ ಅಥವಾ ಜೀವಶಾಸ್ತ್ರವನ್ನು ತೆಗೆದುಕೊಳ್ಳದ ವಿದ್ಯಾರ್ಥಿಗಳಿಗೂ ಎಂಜಿನಿಯರಿಂಗ್‌ಪದವಿಗೆ ಪ್ರವೇಶ ಕಲ್ಪಿಸುವ ಎಐಸಿಟಿಇ (ಆಲ್‌ ಇಂಡಿಯಾ ಕೌನ್ಸಿಲ್‌ ಫಾರ್‌ ಟೆಕ್ನಿಕಲ್‌ ಎಜುಕೇಷನ್‌) ನಿರ್ಧಾರದ ಹಿಂದೆ ಎಂಜಿನಿಯರಿಂಗ್‌ ಪದವಿಯನ್ನು ದುರ್ಬಲಗೊಳಿಸಬೇಕು ಎಂಬ ಉದ್ದೇಶವಿಲ್ಲ. ಬದಲಾಗಿ ಇದು ಎಲ್ಲರನ್ನೂ ಒಳಗೊಳ್ಳಲಿ ಎಂಬ ಉದ್ದೇಶ ಹೊಂದಿದೆ. ಆದರೆ ಈ ನಿರ್ಣಯದ ಬಗ್ಗೆ ಈಗಲೂ ಸ್ವಲ್ಪ ಗೊಂದಲಮಯ ವರದಿಗಳೇ ಮಾಧ್ಯಮಗಳಲ್ಲಿ ಬರುತ್ತಿವೆ. ಎಂಜಿನಿಯರಿಂಗ್‌ ಮಾಡಲು ಈ ಮೇಲ್ಕಂಡ ವಿಷ ಯಗಳು ಅಗತ್ಯವೇ ಇಲ್ಲ ಎಂದು ನಾವು ಹೇಳುತ್ತಿಲ್ಲ, ಬದಲಾಗಿ, ವಿದ್ಯಾರ್ಥಿಯೊಬ್ಬನಿಗೆ ಇವುಗಳಲ್ಲಿ ಯಾವುದಾದರೂ ವಿಷಯವನ್ನು ಓದಲು ಸಾಧ್ಯವಾಗದೇ ಹೋದರೆ ಅಂಥವರಿಗೆ ಅವಕಾಶ ಕಲ್ಪಿಸುವ ಪರಿಕಲ್ಪನೆ ಇದು. ಅಂದರೆ ಒಂದು ಪ್ರದೇ ಶದಲ್ಲಿ 11- 12ನೇ ತರಗತಿ ಓದಲು ಕೇವಲ ಕಲಾ ಶಿಕ್ಷಣ ಮಾತ್ರ ಇರಬಹುದು. ಅಥವಾ ವಿಜ್ಞಾನ ಶಿಕ್ಷಕರಿದ್ದು, ಕೆಮಿಸ್ಟ್ರಿ ಶಿಕ್ಷಕರು ಇರದೇ ಹೋಗಬಹುದು. ಅಂಥ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್‌ ಓದುವ ಆಸೆಯಿದ್ದರೆ, ಅವರಿಗೆ ಏಕೆ ಅವಕಾಶ ಕಲ್ಪಿಸಬಾರದು ಎನ್ನುವುದು ನಮ್ಮ ಯೋಚನೆ. ಕೋವಿಡ್‌ನ‌ ಈ ಸಮಯದಲ್ಲಿ ಓಪನ್‌ ಸ್ಕೂಲಿಂಗ್‌, ಸ್ವಯಂನಂಥ ವೇದಿಕೆ ಮೂಲಕ ಆನ್‌ಲೈನ್‌ ತರಗತಿಗಳು ಕೂಡ ಮುಖ್ಯವಾಗುತ್ತಿವೆ. ಅಲ್ಲದೇ ಯೂಟ್ಯೂಬ್‌ನಂಥ ವೇದಿಕೆಗಳ ಮೂಲಕವೂ ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನದಂಥ ವಿಷಯಗಳಲ್ಲಿ ಅಪಾರ ಜ್ಞಾನಧಾರೆಯನ್ನು ಹರಿಸುತ್ತಿವೆ. ಇಂಥ ವಿದ್ಯಾರ್ಥಿಗಳು ಸಾಂಪ್ರದಾಯಿಕವಾಗಿ ಕಲಿಯುವವರಿಗಿಂತ ತುಸು ಹೆಚ್ಚೇ ಕಲಿಯಬಹುದು. ಹೀಗಾಗಿ ಇವುಗಳನ್ನು ಆಸಕ್ತಿಯಿಂದ ಆಲಿಸಿ, ಪಾಠ ಕಲಿಯುವ ವಿದ್ಯಾರ್ಥಿಗಳಿಗೂ ಎಂಜಿನಿಯರಿಂಗ್‌ಗೆ ಅವಕಾಶ ಕೊಟ್ಟರೆ ತಪ್ಪೇನು ಎನ್ನುವುದು ನಮ್ಮ ಪ್ರಶ್ನೆ. ಹಾಗೆಂದಾಕ್ಷಣ, ಇವರೆಲ್ಲರೂ ಪ್ರವೇಶ ಪರೀಕ್ಷೆಗಳನ್ನು ಬರೆದು ಪಾಸಾಗುವುದು ಕಡ್ಡಾಯ ಎನ್ನುವುದು ನೆನಪಲ್ಲಿಡ ಬೇಕು. ಹಾಗೆಯೇ ಬ್ರಿಡ್ಜ್ ಕೋರ್ಸ್‌ಗಳನ್ನು ತೆಗೆದುಕೊಂಡು ಇವುಗಳನ್ನು ಪಾಸ್‌ ಮಾಡಬೇಕು. ಆಗ ಇಂಥ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಗಣಿತ ಮತ್ತು ಭೌತಶಾಸ್ತ್ರ ಅರ್ಥವಾಗುತ್ತದೆ. ಇದಷ್ಟೇ ಅಲ್ಲ, ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಶಿಕ್ಷಣವನ್ನು ಮಾತೃಭಾಷೆಯಲ್ಲೇ ನೀಡುವ ಬಗ್ಗೆಯೂ ಗಂಭೀರವಾಗಿ ಯೋಚಿಸುತ್ತಿದ್ದೇವೆ. ಗ್ರಾಮೀಣ ಪ್ರದೇಶದ 10,11,12ನೇ ತರಗತಿ ವಿದ್ಯಾರ್ಥಿಗಳು ಮಾತೃಭಾಷೆಯಲ್ಲೇ ಕಲಿತು ಬಂದು ಇಲ್ಲಿ ಇಂಗ್ಲಿಷಿನಲ್ಲಿ ಕಲಿಯುವುದು ಕಷ್ಟವಾಗುತ್ತದೆ. ಇದಕ್ಕಾಗಿ ನಾವು ಭಾರತೀಯ ಭಾಷೆಗಳಿಗೆ ಪಠ್ಯಪುಸ್ತಕಗಳನ್ನು ಭಾಷಾಂತರಿಸುವ ಕೆಲಸ ಶುರು ಮಾಡಿದ್ದೇವೆ. ಇದಕ್ಕೆ ಸುಮಾರು 900ಕ್ಕೂ ಹೆಚ್ಚು ಮಂದಿ ಸಿಕ್ಕಿದ್ದಾರೆ.

Advertisement

– ಡಾ| ಅನಿಲ್‌ ಸಹಸ್ರಬುದ್ಧೆ, ಎಐಸಿಟಿಐ ಚೇರ್ಮನ್

Advertisement

Udayavani is now on Telegram. Click here to join our channel and stay updated with the latest news.

Next