ಶಿರಸಿ: ಶಿಕ್ಷಣ ಜೊತೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಂಡಾಗ ಸಾಧನೆ ಸಾಧ್ಯ ಎಂದು ನಿಸರ್ಗ ಮನೆಯ ಪ್ರಸಿದ್ಧ ವೈದ್ಯ, ವೈದ್ಯ ಅಂಕಣಕಾರ ಡಾ. ವೆಂಕಟರಮಣ ಹೆಗಡೆ ಹೇಳಿದರು.
ರವಿವಾರ ಅವರು ನಗರದ ಮಾರಿಕಾಂಬಾ ದೇವಸ್ಥಾನದಲ್ಲಿ ಹಮ್ಮಿಕೊಂಡ ಕಲಾ ಭಾರತಿ ಗೊಂಬೆಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳಲ್ಲಿ ಇರುವ ಪ್ರತಿಭೆ ಬೆಳಗಿಸಲು ಪಠ್ಯೇತರ ಚಟುವಟಿಕೆ ಅವಕಾಶ ಮಾಡುತ್ತದೆ. ಎಷ್ಟೇ ಹಣ ಇದ್ದರೂ ಆರೋಗ್ಯ ಇರದೇ ಇದ್ದರೆ ಬದುಕು ಕಷ್ಟ. ಹಾಗಾಗಿ ಕೇವಲ
8 ಗಂಟೆ ಅವಧಿಯಲ್ಲಿ ಆಹಾರ ಸ್ವೀಕರಿಸಿ 16 ತಾಸು ಆಹಾರ ಸ್ವೀಕರಿಸದೇ ಇದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಮಧುಮೇಹ, ರಕ್ತದೊತ್ತಡ ಕಡಿಮೆ ಆಗುತ್ತದೆ ಎಂದರು.
ವ್ಯಕ್ತಿ ಕನಿಷ್ಠ 6 ತಾಸು ನಿದ್ದೆ, ದಿನಕ್ಕೆ4 ಲೀ. ನೀರು. 2 ಸಲ ಆಹಾರ, ಎರಡು ಸಲ ಪ್ರಾರ್ಥನೆ, ವ್ಯಾಯಾಮ, ವಾರಕ್ಕೊಮ್ಮೆ ಉಪವಾಸ ಮಾಡಬೇಕು ಎಂದೂ ಹೇಳಿದರು.
ಕಲಾ ಭಾರತಿ ತಂಡದಿಂದ ಡಾ. ವೆಂಕಟರಮಣ ಹೆಗಡೆ, ಸಿದ್ದಪ್ಪ ಬಿರಾದಾರ ಪರವಾಗಿ ರಾಜಪ್ಪ,ಶ್ರಿಧರ ಗುಡಿಗಾರ, ಡಿ.ಎಸ್.ನಾಯ್ಕ, ಪ್ರಭಾಕರ ಜೋಗಳೇಕರ ಅವರಿಗೆ ಬಿರಿದು ನೀಡಿ ಗೌರವಿಸಲಾಯಿತು.
ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಜಿ.ನಾಯ್ಕ ವಹಿಸಿದ್ದರು. ಉಪಾಧ್ಯಕ್ಷ ಸುಧೇಶ ಜೋಗಳೆಕರ, ಶಿವಾನಂದ ಶೆಟ್ಟಿ, ಕಲಾ ಭಾರತಿಯ ಮನೋಜ ಪಾಲೇಕರ್ ಇತರರು ಇದ್ದರು. ಬಳಿಕ ಗೊಂಬೆಯಾಟ, ಮಕ್ಕಳಿಂದ ನೃತ್ಯ ನಡೆಯಿತು.