Advertisement

ಲೀಡ್ಸ್‌ ಟೆಸ್ಟ್‌: ನ್ಯೂಜಿಲ್ಯಾಂಡ್‌ ವಿರುದ್ಧ ಜಾನಿ ಬೇರ್‌ಸ್ಟೊ ಶತಕ

11:28 PM Jun 25, 2022 | Team Udayavani |

ಲೀಡ್ಸ್‌: ಜಾನಿ ಬೇರ್‌ಸ್ಟೊ ಅವರ ಪ್ರಚಂಡ 162 ರನ್‌ ಸಾಹಸದಿಂದ ಅಮೋಘ ಚೇತರಿಕೆ ಕಂಡ ಇಂಗ್ಲೆಂಡ್‌, ಲೀಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ.

Advertisement

ನ್ಯೂಜಿಲ್ಯಾಂಡ್‌ನ‌ 329 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬು ನೀಡಲಾರಂಭಿಸಿದ ಇಂಗ್ಲೆಂಡ್‌ ಒಂದು ಹಂತದಲ್ಲಿ 55 ರನ್ನಿಗೆ 6 ವಿಕೆಟ್‌ ಉರುಳಿಸಿಕೊಂಡು ಚಡಪಡಿಸುತ್ತಿತ್ತು.

ಆಗ ಆಪದ್ಬಾಂಧವನಾಗಿ ಮೂಡಿಬಂದ ಬೇರ್‌ಸ್ಟೊ 162 ರನ್ನುಗಳ ಅಮೋಘ ಇನ್ನಿಂಗ್ಸ್‌ ಕಟ್ಟಿದರು (157 ಎಸೆತ, 24 ಬೌಂಡರಿ). ಇವರಿಗೆ ಜೇಮಿ ಓವರ್ಟನ್‌ (97) ಸಾಥ್‌ ಕೊಟ್ಟರು.

7ನೇ ವಿಕೆಟಿಗೆ 241 ರನ್‌ ಒಟ್ಟುಗೂಡಿತು. ಇಂಗ್ಲೆಂಡ್‌ ಮೊತ್ತ 360ರ ತನಕ ವಿಸ್ತರಿಸಲ್ಪಟ್ಟಿತು.

ಇದನ್ನೂ ಓದಿ:ಅಭ್ಯಾಸ ಪಂದ್ಯ: ಶ್ರೇಯಸ್‌ ಅಯ್ಯರ್‌, ವಿರಾಟ್‌ ಕೊಹ್ಲಿ ಅರ್ಧ ಶತಕ

Advertisement

ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ನ್ಯೂಜಿಲ್ಯಾಂಡ್‌ 3ನೇ ದಿನದಾಟದ ಚಹಾ ವಿರಾಮದ ವೇಳೆ ಒಂದು ವಿಕೆಟಿಗೆ 125 ರನ್‌ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next