Advertisement

Puri ಜಗನ್ನಾಥ ದೇಗುಲದಲ್ಲಿ ವಸ್ತ್ರಸಂಹಿತೆ ನಿಯಮ ಜಾರಿ

12:12 AM Jan 02, 2024 | Vishnudas Patil |

ಪುರಿ: ಒಡಿಶಾದ ವಿಶ್ವ ಪ್ರಸಿದ್ಧ ಶ್ರೀ ಪುರಿ ಜಗನ್ನಾಥ ದೇಗುಲಕ್ಕೆ ಬರುವ ಭಕ್ತರಿಗೆ ಸೋಮವಾರದಿಂದ ವಸ್ತ್ರ ಸಂಹಿತೆಯನ್ನು ಶ್ರೀ ಜಗನ್ನಾಥ ದೇಗುಲ ಆಡಳಿತ ಕಡ್ಡಾಯಗೊಳಿಸಿದೆ. ಇದೇ ವೇಳೆ ಮಂದಿರದ ಆವರಣದಲ್ಲಿ ಗುಟ್ಕಾ ಮತ್ತು ಪಾನ್‌ ಮಸಾಲ ಸೇವನೆ ಮತ್ತು ಉಗುಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Advertisement

“ಭಕ್ತಾದಿಗಳು ಸಭ್ಯ ಬಟ್ಟೆಗಳನ್ನು ಧರಿಸಿಕೊಂಡು ದೇಗುಲಕ್ಕೆ ಭೇಟಿ ನೀಡಬೇಕು. ಹಾಫ್ ಪ್ಯಾಂಟ್‌,ಶಾರ್ಟ್ಸ್, ಹರಿದ ಜೀನ್ಸ್‌, ಸ್ಕರ್ಟ್‌ ಮತ್ತು ಸ್ಲೀವ್ ಲೆಸ್‌ ಬಟ್ಟೆಗಳನ್ನು ಧರಿಸಿ ಬರುವವರಿಗೆ ದೇಗುಲ ಭೇಟಿಗೆ ಅವಕಾಶ ನೀಡುವುದಿಲ್ಲ. ಅಲ್ಲದೇ ಮಂದಿರದ ಪಾವಿತ್ರ್ಯತೆಯನ್ನು ಕಾಪಾಡಲು ದೇಗುಲದ ಆವರಣದಲ್ಲಿ ಪಾನ್‌ ಮತ್ತು ಗುಟ್ಕಾ ಸೇವನೆ ನಿಷೇಧಿಸಲಾಗಿದೆ. ಜತೆಗೆ, ಪ್ಲಾಸ್ಟಿಕ್‌ ಮತ್ತು ಪಾಲಿಥೀನ್‌ ಚೀಲಗಳ ಬಳಕೆಗೂ ನಿರ್ಬಂಧವಿರಲಿದೆ. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತದೆ’ ಎಂದು ಜಗನ್ನಾಥ ದೇಗುಲದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next