Advertisement

ಆ್ಯಂಬಿಡೆಂಟ್‌: 10 ಕೋ.ರೂ. ಆಸ್ತಿ ಜಪ್ತಿ

10:25 AM Dec 15, 2019 | Team Udayavani |

ಹೊಸದಿಲ್ಲಿ: ಬೆಂಗಳೂರಿನಲ್ಲಿ ಕಳೆದ ವರ್ಷ ಬೆಳಕಿಗೆ ಬಂದ ಆ್ಯಂಬಿಡೆಂಟ್‌ ಮಾರ್ಕೆಟಿಂಗ್‌ ಪ್ರೈ.ಲಿ.ನ ವಂಚನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ 10 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿಕೊಂಡಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿರುವ ಜಮೀನು, ಅಪಾರ್ಟ್‌ಮೆಂಟ್‌ಗಳು ಜಪ್ತಿ ಮಾಡಿಕೊಂಡ ಆಸ್ತಿಯಲ್ಲಿ ಸೇರಿವೆ. ವಶಪಡಿಸಿಕೊಂಡಿರುವ ಸ್ಥಿರಾಸ್ತಿಯ ಮೌಲ್ಯ 8.8 ಕೋಟಿ ರೂ. ಆಗಿದ್ದರೆ, ಚರ ಆಸ್ತಿಯ ಮೌಲ್ಯ 1.4 ಕೋಟಿ ರೂ. ಆಗಿದೆ ಎಂದು ಕೇಂದ್ರ ಸಂಸ್ಥೆ ಹೇಳಿದೆ.

Advertisement

ಕಂಪೆನಿಯ ಪ್ರವರ್ತಕರು ಇಸ್ಲಾಮಿಕ್‌ ಬ್ಯಾಂಕಿಂಗ್‌ ಅಥವಾ ಹಲಾಲ್‌ ಹೂಡಿಕೆ ಹೆಸರಲ್ಲಿ ಸಾವಿರಾರು ಮಂದಿಯಿಂದ ಹಣ ಸಂಗ್ರಹಿಸಿ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಪ್ರತಿ ತಿಂಗಳಿಗೆ ಶೇ.15ರ ವರೆಗೆ ಲಾಭಾಂಶ ನೀಡುವ ಆಮಿಷ ಒಡ್ಡಿದ್ದರೆಂದು ಇ.ಡಿ. ತಿಳಿಸಿದೆ. ಆರ್‌ಬಿಐ, ಸೆಬಿಯಿಂದ ಯಾವುದೇ ರೀತಿಯಲ್ಲಿ ಮಾನ್ಯತೆ, ಅನುಮತಿ ಇಲ್ಲದೆ ಅವರು ಕಾರ್ಯವೆಸಗುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next