Advertisement

ಎಂಡೋಸಲ್ಫಾನ್‌ ದುರಂತದಿಂದ ಪಾಠ ಕಲಿತಿಲ್ಲ!

05:55 PM Nov 06, 2017 | Harsha Rao |

ಎಂಡೋಸಲ್ಫಾನ್‌ ದುರಂತದಿಂದ ನಾವು ಪಾಠ ಕಲಿತಿಲ್ಲ. ಯಾಕೆಂದರೆ, ಎಲ್ಲ ಸುರಕ್ಷಿತಾ ನಿಯಮಗಳನ್ನು ಗಾಳಿಗೆ ತೂರಿ, ಕೇರಳದ ಕಾಸರಗೋಡಿನ ಪಡ್ರೆಯಲ್ಲಿ ಗೇರುತೋಟಗಳ ಮೇಲೆ ಮರಣಾಂತಿಕ ಕೀಟನಾಶಕ ಎಂಡೋಸಲ್ಫಾನನ್ನು ಹೆಲಿಕಾಪ್ಟರಿನ ಮೂಲಕ ಸಿಂಪಡಿಸಲಾಗಿತ್ತು.  ಒಂದೆರಡಲ್ಲ, ಇಪ್ಪತ್ತು ವರುಷ! ಅದರಿಂದಾಗಿ ಭೀಕರ ಕಾಯಿಲೆಗಳಿಗೆ ಬಲಿಯಾದವರು ನೂರಾರು ಜನರು! 

Advertisement

      
ಜುಲೈ 2017ರಿಂದೀಚೆಗೆ ಮಹಾರಾಷ್ಟ್ರದ ಯವತ್ಮಾಲ… ಜಿÇÉೆಯಲ್ಲಿ 23 ರೈತರು ಸತ್ತಿದ್ದಾರೆ.  ಅವರೆಲ್ಲರೂ ಬಲಿಯಾದದ್ದು ಹತ್ತಿ ಬೆಳೆಗೆ ಸಿಂಪಡಿಸಿದ ರಾಸಾಯನಿಕ ಕೀಟನಾಶಕದ ಘೋರ ವಿಷಕ್ಕೆ. ಅದಲ್ಲದೆ 1,000ದಷ್ಟು ರೈತರು ಅವೇ ರಾಸಾಯನಿಕ ಕೀಟನಾಶಕಗಳಿಂದಾಗಿ ತೀವ್ರವಾಗಿ ಅಸ್ವಸ್ಥರಾಗಿ¨ªಾರೆ.

ಯವತ್ಮಾಲ… ಜಿÇÉೆಯ ಬಹುಪಾಲು ರೈತರು ಬೆಳೆಯುವ ಬೆಳೆ ಕುಲಾಂತರಿ ಬಿಟಿ ಹತ್ತಿ. ಇದು ಕೀಟನಿರೋಧಿ ತಳಿ ಎಂದು ಪ್ರಚಾರ ಮಾಡಲಾಗಿತ್ತು. ಅನಂತರ ಈ ತಳಿಯೂ ಕೀಟಬಾಧೆಗೆ ಒಳಗಾಗಿ ಹಿಂದೆ ಮಾಡಿದ್ದ ಪ್ರಚಾರವೆಲ್ಲ ಸುಳ್ಳೆಂದು ಗೊತ್ತಾಗಿತ್ತು. ಈ ವರ್ಷ ಹತ್ತಿ ಬೆಳೆಗೆ ಅದೇನಾಯಿತೋ? ಹತ್ತಿ ಗಿಡಗಳು ವಿಪರೀತ ಎತ್ತರ, ಅಂದರೆ ಆರು ಅಡಿಗಳೆತ್ತರ, ಬೆಳೆದು ಕೀಟಗಳನ್ನು ಆಕರ್ಷಿಸಿದವು ಎಂದು ತಿಳಿಸುತ್ತಾರೆ ಮನೊಳಿ ಗ್ರಾಮದ ರಾಮದಾಸ್‌ ವದಾಯಿ. ಆ ಕೀಟಗಳನ್ನು ನಿಯಂತ್ರಿಸಲಿಕ್ಕಾಗಿ ವಿಷಭರಿತ ಕೀಟನಾಶಕಗಳನ್ನು ತಮ್ಮ ತಲೆಗಿಂತ ಎತ್ತರಕ್ಕೆ ರೈತರು ಹಾಗೂ ಕೃಷಿಕೆಲಸಗಾರರು ಸಿಂಪಡಿಸುವಾಗ ಅವರ ಉಸಿರಿನೊಂದಿಗೆ ಸೇರಿಕೊಂಡ ನಿಸ್ಸಂಶಯವಾಗಿ ಕೀಟನಾಶಕದ ಸೂಕ್ಷ್ಮಕಣಗಳು ಅವರ ಶ್ವಾಸಕೋಶಗಳಿಗೆ ನುಗ್ಗಿದವು.

ಈ ಮಾರಕ ಕೀಟನಾಶಕಗಳ ವಿಷಪರಿಣಾಮ ಹೇಗಿತ್ತು ಅಂತೀರಾ? ಕೆಲವರ ಮೈಸೆಳೆತ ಎಷ್ಟು ತೀವ್ರವಾಗಿತ್ತೆಂದರೆ ಅವರನ್ನು ಆಸ್ಪತ್ರೆಯ ಮಂಚಗಳಿಗೆ ಕಟ್ಟಿ ಹಾಕಬೇಕಾಯಿತು! ಬೆÇÉೋರಾ ಗ್ರಾಮದ ಮಾರುತಿ ಬರ್ಭಾಟೆ (35) ಅವರನ್ನು ವಸಂತರಾವ್‌ ನಾಯಕ್‌ ಸರಕಾರಿ ವೈದ್ಯಕೀಯ ಆಸ್ಪತ್ರೆಯ ವಾರ್ಡ್‌ ನಂಬರ್‌ 12ರಲ್ಲಿ ಮಂಚಕ್ಕೆ ಹಗ್ಗಗಳಿಂದ ಬಿಗಿಯಲಾಗಿತ್ತು! (ಅವರೀಗ ಚೇತರಿಸಿಕೊಂಡಿ¨ªಾರೆ.) ಹೀಗೆ ಅಸ್ವಸ್ಥರಾದ ಮತ್ತು ಮೃತರಾದ ಎಲ್ಲರೂ ಹತ್ತಿ ಬೆಳೆಗಾರರು ಅಥವಾ ಹತ್ತಿ ಹೊಲಗಳಲ್ಲಿ ಕೀಟನಾಶಕ ಸಿಂಪಡಿಸಲು ಹೋಗಿದ್ದ ಕೃಷಿ ಕಾರ್ಮಿಕರು.

ಅಲ್ಲಿ ಪ್ರಾಣ ತೆತ್ತ ರೈತರ ಪೋಸ್ಟ್‌ಮಾರ್ಟಂ ವರದಿಗಳು ಏನು ಹೇಳುತ್ತವೆ? ಅವರೆಲ್ಲರೂ ಕೀಟನಾಶಕದಲ್ಲಿದ್ದ ಆರ್ಗನೋಫಾಸ್ಪರಸ್‌ ಅನ್ನು ಉಸಿರಾಡಿದರೆಂದೂ, ಅದರಿಂದಾಗಿ ಅವರ ಶ್ವಾಸೋಛಾÌಸ ನಿಂತುಹೋಯಿತೆಂದೂ ಆ ವರದಿಗಳು ದಾಖಲಿಸಿವೆ. ರಾಮದಾಸ ವದಾಯಿ ಸಹಿತ 25ಕ್ಕಿಂತ ಅಧಿಕ ರೈತರಿಗೆ ಕೆಲವು ದಿನ ಕಣ್ಣಿನ ದೃಷ್ಟಿಯೇ ಇರಲಿಲ್ಲ! (ಅದೃಷ್ಠವಶಾತ್‌ ಈಗ ಅವರಿಗೆ ದೃಷ್ಟಿ ಬಂದಿದೆ; ಇಲ್ಲವಾದರೆ ಇನ್ನುಳಿದ ಜೀವಮಾನವಿಡೀ ಅವರು ಕುರುಡರಾಗಿ ಬದುಕಬೇಕಾಗಿತ್ತು.)

Advertisement

ಯಾಕೆ ಹೀಗಾಯಿತು? ರೈತರ ಅಜಾಗರೂಕತೆಯಿಂದಾಗಿ ಎಂಬುದು ಕೆಲವು ಸರಕಾರಿ ಅಧಿಕಾರಿಗಳ ಸಿದ್ಧ ಉತ್ತರ. ಬಾಯಿ ಮತ್ತು ಮೂಗು ಮುಚ್ಚುವ ಸುರಕ್ಷತಾ ಕವಚ ಧರಿಸದೆ, ವಿಷಪೂರಿತ ಕೀಟನಾಶಕಗಳನ್ನು ಸಿಂಪಡಿಸುವುದು ರೈತರು ಹಾಗೂ ಕೃಷಿಕೆಲಸಗಾರರ ಅಭ್ಯಾಸ. ತಾವು ದಶಕಗಳಿಂದ ವಿಷ ರಾಸಾಯನಿಕಗಳನ್ನು ಹೀಗೆಯೇ ಸಿಂಪಡಿಸುತ್ತಿದ್ದೇವೆ; ಈವರೆಗೆ ನಮಗೇನೂ ತೊಂದರೆ ಆಗಿಲ್ಲ. ಈ ವರ್ಷ ಮಾತ್ರ ಅದರಿಂದಾಗಿ ಸೋಂಕು ತಗಲಿದೆ; ಹಲವರು ಸತ್ತೇ ಹೋದರು ಎಂಬುದು ಬಹುಪಾಲು ರೈತರ ಹೇಳಿಕೆ.

ಈ ವರ್ಷ ಸಿಂಪಡಿಸಿದ ಪೀಡೆನಾಶಕಗಳಲ್ಲಿ ಏನಾದರೂ ಬದಲಾವಣೆ ಆಗಿತ್ತೇ? ಎಂಬ ಪ್ರಶ್ನೆಗೆ ಘಟನೆ ಪಟ್ಟಣದ ಕೃಷಿ ಒಳಸುರಿಗಳ ವಿತರಕರಾದ ಜಲರಾಮ… ಕೃಷಿಕೇಂದ್ರದ ಮಾಲೀಕ ಭಾವೇಶ್‌ ಗಂಡೇಚ ಅವರ ಉತ್ತರ, ಇಲ್ಲ.
ನಾವು ಹಿಂದಿನ ವರ್ಷಗಳಲ್ಲಿ ಮಾರಿದ ಪೀಡೆನಾಶಕಗಳನ್ನೇ ಈ ವರುಷವೂ ಮಾರಾಟ ಮಾಡುತ್ತಿದ್ದೇವೆ.

ಪೀಡೆನಾಶಕಗಳನ್ನು ಸಿಂಪಡಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳನ್ನು ರೈತರಿಗೆ ತಿಳಿಸಲಿಕ್ಕಾಗಿ ನಮ್ಮ ಅಂಗಡಿಗಳ ಎದುರು ದೊಡ್ಡ ಭಿತ್ತಿಫ‌ಲಕಗಳನ್ನು ಹಾಕಿದ್ದೇವೆ. ಕೃಷಿಕೇಂದ್ರಗಳ ಮಾಲೀಕರ ಜೀವನೋಪಾಯ ರೈತರನ್ನೇ ಅವಲಂಬಿಸಿರುವಾಗ, ರೈತರು ಸಾಯುವುದನ್ನು ಅವರು ಯಾಕೆ ಬಯಸುತ್ತಾರೆ? ಎಂದು ಅವರು ಪ್ರಶ್ನಿಸುತ್ತಾರೆ.

ಜುಲೈ 2017ರ ಆರಂಭದಿಂದಲೇ ಹಲವಾರು ರೈತರು ಯವತ್ಮಾಲ… ಜಿÇÉೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದರು. ಆದರೆ ಅದು ಸುದ್ದಿಯಾಗಿರಲಿಲ್ಲ. ಆದರೆ, ಸೆಪ್ಟಂಬರ್‌ 2017ರ ಕೊನೆಯ ವಾರದಲ್ಲಿ, ಮಹಾರಾಷ್ಟ್ರ ಸರಕಾರ ನೇಮಿಸಿರುವ ಕಾರ್ಯತಂಡವಾದ ವಸಂತರಾವ್‌ ನಾಯ್ಕ… ಶೇತ್ಕಾರಿ ಸ್ವಾವಲಂಬನ ಮಿಷನ್‌ ಪತ್ರಿಕಾ ಹೇಳಿಕೆಗಳ ಮೂಲಕ, ರೈತರ ಸರಣಿಸಾವುಗಳ ಬಗ್ಗೆ ಮಾಹಿತಿ ನೀಡಿದಾಗ, ಈ ದುರಂತ ದೇಶದÇÉೆಲ್ಲ ಸುದ್ದಿಯಾಯಿತು ಹಾಗೂ ಮಾಧ್ಯಮಗಳ ಗಮನ ಸೆಳೆಯಿತು. 

ಮಾಧ್ಯಮಗಳು ರೈತರ ಸರಣಿಸಾವುಗಳ ಬಗ್ಗೆ ವರದಿ ಮಾಡಲು ಶುರುವಿಟ್ಟಾಗ ಮತ್ತು ವಿರೋಧಪಕ್ಷಗಳು ಈ ವಿಷಯ ಪ್ರಸ್ತಾಪಿಸಲು ತಯಾರಾದಾಗ, ಮಹಾರಾಷ್ಟ್ರ ಸರಕಾರ ಮೈಚಳಿ ಬಿಟ್ಟು ಎದ್ದಿತು. ಅನಂತರ ಏಳು ಸದಸ್ಯರಿರುವ ವಿಶೇಷ ತನಿಖಾ ತಂಡ ನೇಮಿಸಿತು. ಜೊತೆಗೆ ಈ ದುರಂತದಲ್ಲಿ ಮೃತರಾದವರ ಕುಟುಂಬಗಳಿಗೆ ತಲಾ ರೂ.2 ಲಕ್ಷ ಪರಿಹಾರ ಘೋಷಿಸಿತು. ಅಲ್ಲಿನ ಕೃಷಿ ಇಲಾಖೆ ಮಾಡಿದ್ದೇನು? ಅನಧಿಕೃತ ಪೀಡೆನಾಶಕಗಳನ್ನು ಮಾರಾಟ ಮಾಡಿದ್ದಕ್ಕಾಗಿ ಐದು ಕೃಷಿಕೇಂದ್ರಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದೆ. ಅದಲ್ಲದೆ, ಸಿಂಪಡಣೆ ಮಾಡುವಾಗಿನ ಮುನ್ನೆಚ್ಚರಿಕೆಗಳ ಬಗ್ಗೆ ಜಾಗೃತಿ ಮೂಡಿಸಲಿಕ್ಕಾಗಿ ಕೃಷಿ ಅಧಿಕಾರಿಗಳನ್ನು ಕಳುಹಿಸಿದೆ. ರೈತರು ವಿಷರಾಸಾಯನಿಕಗಳಿಗೆ ಬಲಿಯಾದ ನಂತರ ಇವನ್ನು ಮಾಡಿದರೆ ಏನು ಪ್ರಯೋಜನ? 

ಯವತ್ಮಾಲ್‌ ಜಿÇÉೆಗೆ ಭಾರತದ ರೈತರ ಆತ್ಮಹತ್ಯೆಗಳ ರಾಜಧಾನಿ ಎಂದೇ ಕುಖ್ಯಾತಿ. ಇದಕ್ಕೆ ಕಾರಣ 2001ರಿಂದೀಚೆಗೆ ಅಲ್ಲಿ 3,920 ರೈತರ ಆತ್ಮಹತ್ಯೆ. ಇಷ್ಟೆಲ್ಲ ರೈತರ ಪ್ರಾಣಹಾನಿ ಆದ ನಂತರ ವಿಷಭರಿತ ರಾಸಾಯನಿಕಗಳ ಬಳಕೆಯನ್ನು ಸರಕಾರ ನಿಯಂತ್ರಿಸಬೇಕೆಂಬುದು ರೈತರ ಒತ್ತಾಯ. ಲಾಭಕ್ಕಾಗಿ ಯಾವುದೇ ಮಾರಕ ವಿಷರಾಸಾಯನಿಕಗಳನ್ನೂ ಮಾರಾಟ ಮಾಡುವ ಏಜೆಂಟರನ್ನೂ, ವಾಣಿಜ್ಯ ಮಳಿಗೆಗಳನ್ನೂ ಸರಕಾರ ನಿರ್ಬಂಧಿಸಬೇಕು ಮತ್ತು ಕೃಷಿ ವಿಸ್ತರಣಾ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡುವಂತೆ ನಿರ್ದೇಶಿಸ ಬೇಕೆಂಬುದು ರೈತರ ಆಗ್ರಹ. ಯವತ್ಮಾಲಿನಲ್ಲಿ ಹಲವು ರೈತರು ಘೋರ ವಿಷರಾಸಾಯನಿಕಗಳಿಗೆ ಬಲಿಯಾದ ನಂತರವಾದರೂ ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿತೇ?

ಒಂದು ಮಾತಂತೂ ಸತ್ಯ. ಎಂಡೋಸಲ್ಫಾನ್‌ ದುರಂತದಿಂದ ನಾವು ಪಾಠ ಕಲಿತಿಲ್ಲ. ಯಾಕೆಂದರೆ, ಎಲ್ಲ ಸುರಕ್ಷಿತಾ ನಿಯಮಗಳನ್ನು ಗಾಳಿಗೆ ತೂರಿ, ಕೇರಳದ ಕಾಸರಗೋಡಿನ ಪಡ್ರೆಯಲ್ಲಿ ಗೇರುತೋಟಗಳ ಮೇಲೆ ಮರಣಾಂತಿಕ ಕೀಟನಾಶಕ ಎಂಡೋಸಲ್ಫಾನನ್ನು ಹೆಲಿಕಾಪ್ಟರಿನ ಮೂಲಕ ಸಿಂಪಡಿಸಲಾಗಿತ್ತು.  ಒಂದೆರಡಲ್ಲ, ಇಪ್ಪತ್ತು ವರುಷ! ಅದರಿಂದಾಗಿ ಭೀಕರ ಕಾಯಿಲೆಗಳಿಗೆ ಬಲಿಯಾದವರು ನೂರಾರು ಜನರು! ಈಗಲೂ ಅದರಿಂದಾಗಿ ಭಯಂಕರ ಕಾಯಿಲೆಗಳಿಂದ ನರಳುತ್ತಿರುವವರು ಸಾವಿರಾರು ಜನರು. ಅಂತಿಮವಾಗಿ, ದೀರ್ಘ‌ ಕಾನೂನು ಸಮರದ ಪರಿಣಾಮವಾಗಿ ಸುಪ್ರೀಂ ಕೋರ್ಟ್‌ 2011ರಲ್ಲಿ ಎಂಡೋಸಲ್ಫಾನ್‌ ಬಳಕೆಯನ್ನು ನಿಷೇಧಿಸಿತು. ಈಗ, ಯವತ್ಮಾಲ… ದುರಂತದ ನಂತರವಾದರೂ ಪಾಠ ಕಲಿಯೋಣ.

– ಅಡ್ಕೂರು ಕೃಷ್ಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next