Advertisement
ಕಾಸರಗೋಡು ಜನರಲ್ ಆಸ್ಪತ್ರೆ ಮತ್ತು ಕಾಂಞಂಗಾಡಿನ ಜಿಲ್ಲಾ ಸರಕಾರಿ ಆಸ್ಪತ್ರೆಗಳ ಡಯಾಲಿಸಿಸ್ ಘಟಕಗಳು ಸತತ ಸೇವೆ ನಡೆಸುತ್ತಾ ಬರುತ್ತಿವೆ. ಇವುಗಳಲ್ಲಿ ಜನರಲ್ ಆಸ್ಪತ್ರೆಯ ಘಟಕ ಮೂತ್ರ ಜನಕಾಂಗ ರೋಗ ಬಾ ಧಿತರಲ್ಲಿ ಹೀಮೋ ಡಯಾಲಿಸಿಸ್ ಅಗತ್ಯವಿರುವವರಿಗೆ ಉಚಿತ ಸೇವೆ ನೀಡುತ್ತಿದೆ.
ಡಯಾಲಿಸಿಸ್‌ಗಾಗಿ ಇತರ ರಾಜ್ಯಗಳ ಆಸ್ಪತ್ರೆಗೆ ಮೊರೆಹೋಗಬೇಕಿದ್ದ ಎಂಡೋ ಸಲ್ಫಾ ನ್ ಸಂತ್ರಸ್ತರಿಗಾಗಿ 2011ರಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿತ್ತು. ಎಂಡೋಸಲ್ಫಾನ್ ಯೋಜನೆಯಲ್ಲಿ ಅಳವಡಿಸಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಜಾರಿಗೊಂಡಿತ್ತು. ದಿನದಲ್ಲಿ ಎರಡು ಪಾಳಿಗಳ ಮೂಲಕ ಈ ಘಟಕ ಇಲ್ಲಿ ಚಟುವಟಿಕೆ ನಡೆಸುತ್ತಿದೆ. ಬೆಳಗ್ಗೆ 8 ರಿಂದ ಮಧ್ಯಾಹ್ನ ಒಂದು ಗಂಟೆ ವರೆಗೆ ಒಂದು ಶಿಫ್ಟ್, ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಇನ್ನೊಂದು ಪಾಳಿಯಲ್ಲಿ ಚಿಕಿತ್ಸೆ ಕಾಯಕ ನಡೆಯುತ್ತಿದೆ. ದಿನಕ್ಕೆ 15 ಮಂದಿಗೆ ಆಸರೆ
ದಿನಕ್ಕೆ 15 ಮಂದಿ ರೋಗಿಗಳು ಈ ಸೌಲಭ್ಯದ ಪ್ರಯೋಜನ ಪಡೆಯುತ್ತಾರೆ. ಒಬ್ಬ ರೋಗಿಗೆ ಡಯಾಲಿಸಿಸ್ ನಡೆಸಲು ಕನಿಷ್ಠ ಮೂರು ತಾಸುಗಳು ಬೇಕಾಗುತ್ತದೆ. ವೈದ್ಯರಲ್ಲದೆ, ನಾಲ್ಕು ಮಂದಿ ದಾದಿಯರು, ಮೂವರು ಡಯಲಿಸಿಸ್ ತಂತ್ರಜ್ಞರು, ಇಬ್ಬರು ಶುಚಿತ್ವ ನೌಕರರು ಇಲ್ಲಿದ್ದಾರೆ. ಘಟಕದ ಒಂದು ವರ್ಷದ ಚಟುವಟಿಕೆಗೆ 15 ಲಕ್ಷ ರೂ.ವೆಚ್ಚ ತಗಲುತ್ತದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸುತ್ತಾರೆ.
Related Articles
ಕಾಂಞಂಗಾಡ್‌ನ ಜಿಲ್ಲಾ ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ಘಟಕ 2017ರಲ್ಲಿ ಆರಂಭಿಸಲಾಗಿತ್ತು. ಜಿಲ್ಲಾ ಪಂಚಾಯತ್ ಮತ್ತು ರಾಷ್ಟ್ರೀಯ ಆರೋಗ್ಯ ಯೋಜನೆಯ 25 ಲಕ್ಷ ರೂ. ಬಳಸಿ ಈ ಘಟಕ ಸ್ಥಾಪಿಸಲಾಗಿದೆ. ಒಟ್ಟು 12 ಶೆಡ್ನೂಲ್ ಮೂಲಕ ಹನ್ನೊಂದು ಎಂಡೋ ಸಂತ್ರಸ್ತರಿಗೆ ಇಲ್ಲಿ ಡಯಾಲಿಸಿಸ್ ಸೌಲಭ್ಯ ಉಚಿತವಾಗಿ ನೀಡಲಾಗುತ್ತಿದೆ.
Advertisement
ಶೀಘ್ರ ಇನ್ನೊಂದು ಶಿಫ್ಟ್ ಈಗ ಒಂದು ಶಿಫ್ಟ್ ಮೂಲಕ ಡಯಾಲಿಸಿಸ್ ಕೇಂದ್ರ ಇಲ್ಲಿ ಚಟುವಟಿಕೆ ನಡೆಸುತ್ತಿದೆ. ಇನ್ನೊಂದು ಪಾಳಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಸಂಬಂಧಪಟ್ಟವರು ತಿಳಿಸಿದರು. ಒಬ್ಬ ವೈದ್ಯ, ಇಬ್ಬರು ದಾದಿಯರು, 4 ಮಂದಿ ತಂತ್ರಜ್ಞರು, ಒಬ್ಬ ಶುಚಿತ್ವ ನೌಕರ ಇಲ್ಲಿದ್ದಾರೆ. ಈ ಘಟಕದ ಒಂದು ವರ್ಷದ ಚಟುವಟಿಕೆಗೆ ಒಟ್ಟು 18 ಲಕ್ಷ ರೂ. ವೆಚ್ಚ ತಗಲುತ್ತದೆ ಎಂದು ಅ ಧಿಕಾರಿಗಳು ತಿಳಿಸಿದ್ದಾರೆ.