ಕಾಸರಗೋಡು : ಎಂಡೋಸಲ್ಫಾನ್ ಪೀಡಿತರಿಗಾಗಿ ಸ್ನೇಹ ಸಾಂತ್ವನ ಯೋಜನೆಯ ಮೂಲಕ 2022-23ನೇ ಸಾಲಿನಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುವುದು. 17 ಕೋಟಿ ರೂ. ವೆಚ್ಚದ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಆಡಳಿತಾತ್ಮಕ ಅನುಮತಿ ನೀಡಲಾಗಿದೆ ಎಂದು ಸಾಮಾಜಿಕ ನ್ಯಾಯ ಇಲಾಖೆ ಸಚಿವೆ ಡಾ| ಆರ್. ಬಿಂದು ಮಾಹಿತಿ ನೀಡಿದರು.
ಮಾರ್ಚ್ 2023ರ ವರೆಗೆ ಎಂಡೋ ಸಲ್ಫಾನ್ ಸಂತ್ರಸ್ತರಿಗೆ ಮಾಸಿಕ ಆರ್ಥಿಕ ನೆರವು ನೀಡಲು 10,17,19,200 ರೂ. ಗಳನ್ನು ಮೀಸಲಿಡ ಲಾಗಿದೆ. ಎಂಡೋಸಲ್ಫಾನ್ ಪೀಡಿತ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ನೀಡಲು ಸ್ನೇಹ ಸಾಂತ್ವನ ಯೋಜನೆಯ ಮೂಲಕ 39 ಲಕ್ಷ ರೂ. ಮತ್ತು ಎಂಡೋಸಲ್ಫಾನ್ ಪೀಡಿತರನ್ನು ಪರಿಚರಿಸುವವರಿಗಾಗಿ ಆಶ್ವಾಸ ಕಿರಣಂ ಯೋಜನೆ ಮೂಲಕ 68,79,600 ರೂ. ಮೀಸಲಿಡಲಾಗಿದೆ.
ಹೊಸದಾಗಿ ಗುರುತಿಸಲಾದ ಫಲಾನುಭವಿಗಳಿಗೆ ಮಾಸಿಕ ನೆರವು ನೀಡಲು ಸ್ನೇಹ ಸಾಂತ್ವನ ಯೋಜನೆಯ ಮೂಲಕ 1,05,57,600 ಮಂಜೂರು ಮಾಡಲಾಗಿದೆ. ಹೊಸದಾಗಿ ಗುರು ತಿಸಲ್ಪಟ್ಟವರಿಗೆ ಮಾಸಿಕ ನೆರವು ನೀಡಲು ವಿಶೇಷ ಸಾಂತ್ವನ ಯೋಜನೆ ಮೂಲಕ 8,40,000 ರೂ. ಮೀಸಲಿಡಲಾಗಿದೆ ಎಂದವರು ವಿವರಿಸಿದರು.
ಎಂಡೋಸಲ್ಫಾನ್ ಬಿಕ್ಕಟ್ಟನ್ನು ಪರಿಗಣಿಸಿ 3 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಎಂಸಿಆರ್‌ಸಿಗಳನ್ನು (ಮಾದರಿ ಮಕ್ಕಳ ಪುನರ್ವಸತಿ ಕೇಂದ್ರಗಳು) ಪ್ರಾರಂಭಿಸಲಾಗುವುದು. 10 ಎಂಸಿಆರ್‌ಸಿ ಬಡ್ಸ್ ಶಾಲೆಗಳ ನೌಕರರಿಗೆ ವೇತನ ನೀಡಲು 3,18,80,400 ರೂ. ಮೀಸಲಿಡಲಾಗಿದೆ. ಎಂಸಿಆರ್‌ಸಿ ನೌಕರರು, ವಿದ್ಯಾರ್ಥಿಗಳು, ಪೋಷಕರು ಮತ್ತು ಪಂಚಾಯತ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ಇದಕ್ಕಾಗಿ 30 ಲಕ್ಷ ರೂ. ಮೀಸ ಲಿರಿಸ ಲಾಗಿದೆ ಎಂದವರು ತಿಳಿಸಿದರು.
ಇದನ್ನೂ ಓದಿ : ವಿಪಕ್ಷ ನಾಯಕರ ಭೇಟಿಯಿಂದ ಯಾವುದೇ ಲಾಭವಿಲ್ಲ: ನಿತೀಶ್ ಗೆ ಕುಟುಕಿದ ಪ್ರಶಾಂತ್ ಕಿಶೋರ್