Advertisement

ರಿಟ್ಜ್ ಕಾರು ಮಾರಾಟ ಸ್ಥಗಿತ

09:54 AM Feb 27, 2017 | |

ನವದೆಹಲಿ: ದೇಶದ ಅತಿದೊಡ್ಡ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್‌ ರಿಟ್ಜ್ ಮಾರಾಟವನ್ನು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಿದೆ. 

Advertisement

ರಿಟ್ಜ್ ಕಾರು 2009ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಇದೀಗ 4 ಲಕ್ಷ ಕಾರುಗಳು ರಸ್ತೆಯಲ್ಲಿವೆ. ಹೊಸ ಮಾಡೆಲ್‌ಗ‌ಳನ್ನು ಪರಿಚಯಿಸುವ ಸಲುವಾಗಿ ರಿಟ್‌l  ಉತ್ಪಾದನೆ ಸ್ಥಗಿತಗೊಳಿ­ಸುತ್ತಿರುವುದಾಗಿ ಕಂಪನಿ ತಿಳಿಸಿದೆ. ಜತೆಗೆ, ಮುಂದಿನ 10 ವರ್ಷಗಳ ಕಾಲ ರಿಟ್‌l  ಬಿಡಿಭಾಗಳು ಹಾಗೂ ಸೇವೆ ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ ಎಂದೂ ಹೇಳಿದೆ. ಸದ್ಯಕ್ಕೆ ಇಗ್ನಿಸ್‌+, ಸ್ವಿಫ್ಟ್, ಸೆಲೆರಿಯೋ, ಡಿಜೈರ್‌ ಮತ್ತು ಬಲೆನೋ ಕಾರುಗಳನ್ನು ಕಂಪನಿ ಮಾರಾಟ ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next