ಶಹಾಬಾದ: ಜನ್ಮದಿನವನ್ನು ಕೇಕ್ ಕತ್ತರಿಸಿ, ದೀಪ ಆರಿಸಿ, ಕುಣಿದು ಕುಪ್ಪಳಿಸುವ ಬದಲಿಗೆ ಪ್ರತಿಭಾವಂತ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಮುಗುಳನಾಗಾವಿಯ ಕಟ್ಟಿಮನಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ನುಡಿದರು.
ಭಂಕೂರ ಗ್ರಾಮದ ಗಾಯಕವಾಡ್ ಫಂಕ್ಷನ ಸಭಾಂಗಣದಲ್ಲಿ ಭೀಮಯ್ಯ ಗುತ್ತೆದಾರ ಅವರ 50ನೇ ಜನ್ಮದಿನದ ನಿಮಿತ್ತ ಗ್ರಾಮೀಣ ಭಾಗದ ಪ್ರತಿಭಾವಂತ ಎಂಬಿಬಿಎಸ್, ಎಸ್‌ಎಸ್ ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಾಧನೆ ಮಾಡಿದವರನ್ನು ಎಲ್ಲೆಲ್ಲೋ ಹುಡುಕಬೇಕಾಗಿಲ್ಲ. ನಮ್ಮ ಸುತ್ತಮುತ್ತಲಿನಲ್ಲೇ ಹಲವಾರು ಜನರಿದ್ದಾರೆ. ಅವರು ಸತತ ಓದು, ಪರಿಶ್ರಮ, ಶಿಕ್ಷಕರ ಹಾಗೂ ಪಾಲಕರ ಪ್ರೋತ್ಸಾಹದಿಂದ ಮನೆತಕ್ಕೆ ಹಾಗೂ ತಾಲೂಕಿಗೆ ಕೀರ್ತಿ ತರುವಂತ ಕೆಲಸಮಾಡಿದ್ದಾರೆ. ಇಂತಹ ಕಾರ್ಯಕ್ರಮದಲ್ಲಿ ಸನ್ಮಾನಿಸುವುದರಿಂದ ಪ್ರತಿಭಾವಂತ ಮಕ್ಕಳಿಗೆ ಸ್ಫೂರ್ತಿ ನೀಡಿದಂತಾಗುತ್ತದೆ ಎಂದರು.
ಎಂಸಿಸಿ ಶಾಲೆ ಮುಖ್ಯಸ್ಥ ಸಿಸ್ಟರ್ ಲಿನೆಟ್ ಸಿಕ್ವೇರಿಯಾ ಮಾತನಾಡಿ, ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಜನ್ಮದಿನವನ್ನು ಪಟಾಕಿ ಹಚ್ಚಿ, ಕುಣಿದು, ಕುಪ್ಪಳಿಸಿ ಆಚರಿಸುತ್ತಾರೆ. ಆದರೆ ಜನ್ಮದಿನದ ನೆಪದಲ್ಲಿ ಗ್ರಾಮೀಣ ಮಟ್ಟದ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಿ, ಸನ್ಮಾನಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಕೋಲಿ ಸಮಾಜದ ಅಧ್ಯಕ್ಷ ಈರಣ್ಣ ಗುಡೂರ್, ಬಸವ ಸಮಿತಿ ಮಾಜಿ ಅಧ್ಯಕ್ಷ ಅಮೃತ ಮಾನಕರ್, ಗ್ರಾಪಂ ಸದಸ್ಯರಾದ ಶರಣಬಸಪ್ಪ ಧನ್ನಾ, ಲಕ್ಷಿ¾àಕಾಂತ ಕಂದಗೂಳ,ಮುಜಾಹಿದ್ ಹುಸೇನ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ಮಲ್ಲೇಶಿ ಸಜ್ಜನ್, ಪತ್ರಕರ್ತ ಸಂಘದ ತಾಲೂಕಾಧ್ಯಕ್ಷ ರಘುವೀರಸಿಂಗ್ ಠಾಕೂರ, ನಿವೃತ್ತ ಉಪನೋಂದಣಾಧಿಕಾರಿ ಯಶ್ವಂತ ಸಿಂಧೆ, ಕಾಶಿರಾಯ ಕಲಾಲ, ಮುನ್ನಾ ಪಟೇಲ್, ಶಂಕರ ಜಾನಾ ವೇದಿಕೆ ಮೇಲಿದ್ದರು. ದಸಂಸ ಜಿಲ್ಲಾ ಸಂಚಾಲಕ ಸುರೇಶ ಮೆಂಗನ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಿದ್ಧಾರ್ಥ ಚಿಮ್ಮಇದಲಾಯಿ ಸಂಗಡಿಗರು ಗೀತಗಾಯನ ನಡೆಸಿಕೊಟ್ಟರು.
ಭರತ್ ಧನ್ನಾ ನಿರೂಪಿಸಿದರು,ಮರಲಿಂಗ ಯಾದಗಿರಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಸಿರಗೊಂಡ ವಂದಿಸಿದರು. ಪ್ರಮುಖರಾದ ಭೀಮರಾಯ ಸಿರಗೊಂಡ, ಶಂಕರ ಜಾನಾ, ಅನೀಲ ಮೈನಾಳಕರ್, ಮಲ್ಲಿಕಾರ್ಜುನ ಘಾಲಿ, ಸಿದ್ರಾಮ ಉದಯಕರ್, ರಾಜೇಶ ಯನಗುಂಟಿಕರ್, ಭರತ್ ರಾಠೊಡ, ಗಣೇಶ ಜಾಯಿ, ಕಿರಣ ಜಡಗಿಕರ್, ನಾನಾಸಾಹೇಬ ಮಾನಕರ್, ರಾಜು, ವಿಜಯಕುಮಾರ ಗುತ್ತೇದಾರ, ಉಮೇಶ ಗುತ್ತೇದಾರ, ಅಶೋಕ ಗುತ್ತೇದಾರ, ಸಾಬಯ್ಯ ಗುತ್ತೇದಾರ, ನಾಗಯ್ಯ ಗುತ್ತೇದಾರ ಇತರರು ಇದ್ದರು.