Advertisement

2,256 ಜನರಿಗೆ ಉದ್ಯೋಗ

09:29 AM Feb 25, 2019 | |

ವಿಜಯಪುರ: ನಗರದಲ್ಲಿ ಎರಡು ದಿನಗಳಿಂದ ನಡೆದಿದ್ದ ಅವಳಿ ಜಿಲ್ಲೆಗಳ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಮಿನಿ ಉದ್ಯೋಗ ಮೇಳ ರವಿವಾರ ಮುಕ್ತಾಯ ಕಂಡಿದ್ದು 2,256 ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ.

Advertisement

ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲಾಡಳಿತ, ಜಿಪಂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ದರ್ಬಾರ್‌ ಹೈಸ್ಕೂಲ್‌ ಆವರಣದಲ್ಲಿ ಜರುಗಿದ ಅವಳಿ ಜಿಲ್ಲೆಗಳ ಮಿನಿ ಉದ್ಯೋಗ ಮೇಳದಲ್ಲಿ 4,109 ಉದ್ಯೋಗಾಕಾಂಕ್ಷಿಗಳು ಆನ್‌ಲೈನ್‌ ಮೂಲಕ ಹಾಗೂ ನೇರವಾಗಿ ನೋಂದಣಿ ಮಾಡಿಸಿದ್ದರು. ಇದರಲ್ಲಿ ಅವರವರ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ 2,256 ವಿದ್ಯಾರ್ಥಿಗಳು ವಿವಿಧ ಕಂಪನಿಯಲ್ಲಿ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ಆಯಾ ಕಂಪನಿಗಳು ವೇತನ ನಿಗದಿಗೊಳಿಸಿ, ಸೇವಾ ಆದೇಶ ಪತ್ರ ನೀಡಿದವು. ಇನ್ನೂ 1,776 ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವ ನಿಟ್ಟಿನಲ್ಲಿ ಕಂಪನಿಗಳು ತರಬೇತಿಗೆ ಹಾಜರಾಗುವಂತೆ ಪತ್ರ ನೀಡಿವೆ.

ಅನೇಕ ದಿನಗಳಿಂದ ಕೆಲಸ ಹುಡಕುತ್ತಿದ್ದೆ, ಸೂಕ್ತವಾದ ಉದ್ಯೋಗ ದೊರಕುತ್ತಿರಲಿಲ್ಲ, ಈಗ ನನ್ನ ವಿದ್ಯಾರ್ಹತೆ ಅನ್ವಯ ಒಂದು ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ನನಗೆ ಅತ್ಯಂತ ಸಂತೋಷವಾಗಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತೇನೆ ಎಂದು ಅನೇಕ ವಿದ್ಯಾರ್ಥಿಗಳು ತಮ್ಮ
ಸಂತಸ ವ್ಯಕ್ತಪಡಿಸಿದರು.

ಎಲ್‌ ಆ್ಯಂಡ್‌ ಟಿ ಫೈನಾನ್ಸ್‌, ಮುತ್ತೂಟ್‌ ಫೈನಾನ್ಸ್‌ ಕಾರ್ಪೋರೇಶನ್‌ ಲಿ., ನವಭಾರತ ಫರ್ಟಿಲೈಸರ್, ಗೋದಾವರಿ ಬಯೋ ರಿಫೈನರೀಸ್‌ ಲಿ., ಪಿಎನ್‌ಬಿ ಮೆಟ್‌ ಲೈಫ್‌, ರೇಣುಕಾ ಟ್ರ್ಯಾಕ್ಟರ್ಸ್‌, ಬಿಎಸ್‌ಎಲ್‌ ಇಂಡಿಯಾ ಪ್ರೈ.ಲಿ, ಉಮೇರ್‌ ಇಂಡಿಯಾ, ಎಪಿಡಿ, ಐಎಸ್‌ಇ ಸ್ಟಾಫಿಂಗ್‌
ಸೆಲ್ಯೂಷನ್ಸ್‌, ಸಂತೋಷ ಆಟೋವಿಂಗ್ಸ್‌, ಅನಂತ ಟೆಕ್‌, ಡಿಗಿಲರ್ನ್ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳು ಸಹ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು.

ಸಮಾರೋಪ ಸಮಾರಂಭದಲ್ಲಿ ಉದ್ಯೋಗ ಮೇಳಕ್ಕೆ ಸಂಪನ್ನಗೊಂಡಿತು. ಉದ್ಯೋಗ ಗಿಟ್ಟಿಸಿಕೊಂಡ ಕೆಲವು ಅಭ್ಯರ್ಥಿಗಳಿಗೆ ಸಾಂಕೇತಿಕವಾಗಿ ಆದೇಶಪತ್ರ ವಿತರಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಿರಿಯ ಪ್ರಾಧ್ಯಾಪಕ ಆರ್‌.ವೈ. ಕೊಣ್ಣೂರ ಮಾತನಾಡಿ, ಯುವ ಜನತೆಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದು ಸಂತಸ ತಂದಿದೆ. ಉದ್ಯೋಗ ಪಡೆದಿರುವ ವಿದ್ಯಾರ್ಥಿಗಳ ಸಂತಸ ಅಷ್ಟಿಷ್ಟಲ್ಲ, ಅತ್ಯಂತ ಅಚ್ಚುಕಟ್ಟುತನದಿದ ಸಂಘಟಿಸಿರುವುದು ಶ್ಲಾಘನೀಯ ಎಂದರು.

Advertisement

ಉಪ ಮೇಯರ್‌ ಗೋಪಾಲ ಘಟಕಾಂಬಳೆ, ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಡಿ.ಎಸ್‌. ಗುಡ್ಡೋಡಗಿ, ಎಸ್‌.ವಿ. ಪಾಟೀಲ ಸಿಂದಗಿ, ವಿವಿಧ ಇಲಾಖೆ ಅಧಿಕಾರಿಗಳಾದ ಗೂಗವಾಡ, ತನುಜಾ ರಾಂಪುರೆ, ವಿ.ಎಸ್‌. ಹಿರೇಮಠ, ಬಳ್ಳಾರಿ, ಇಮಾಮಸಾಬ ನದಾಫ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next