ಚಾಲನೆ ನೀಡಲಾಗಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಡಾ| ಸಬಿಹಾಗೌಡ ಹೇಳಿದರು.
Advertisement
ಶನಿವಾರ ವಿಶ್ವವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಬೋಧಕರ 60 ಮಂಜೂರಾತಿ ಹುದ್ದೆಗಳಲ್ಲಿ, 47 ಹುದ್ದೆ ಭರ್ತಿಗೆ ಮಾತ್ರ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸಲು ಸೇವಾ ನಿಯಮ ರೂಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
Related Articles
Advertisement
ಪರಿಣಾಮ 27 ಟ್ರಿಪ್ ಇದ್ದ ಬಸ್ ಸೇವೆ ಈಗ 42ಕ್ಕೆ ಏರಿದೆ. ಅಲ್ಲದೇ ಸುರಕ್ಷತೆ ಇಲ್ಲದ ಕಾರಣ ವಿದ್ಯಾರ್ಥಿನಿಯರು ಆಟೋ, ಟಂಟಂ ಸೇರಿದಂತೆ ಖಾಸಗಿ ವಾಹನದಲ್ಲಿ ಪ್ರಯಾಣಕ್ಕೆ ನಿಬಂಧ ಹೇರಲಾಗಿದೆ. ಅಲ್ಲದೇ ಈ ಕುರಿತು ಜಾಗೃತಿಗಾಗಿ ಕಾರ್ಯಾಗಾರವನ್ನೂ ನಡೆಸಲಾಗಿದೆ. ಆಟೋ-ಟಂಟಂಗಳು ವಿಶ್ವವಿದ್ಯಾಲಯ ಪ್ರವೇಶ ನಿಷೇಧಿಸಲಾಗಿದೆ ಎಂದು ವಿವರಿಸಿದರು. ಹಾಸ್ಟೆಲ್ ಸೇರಿದಂತೆ ವಿಶ್ವವಿದ್ಯಾಲಯದಲ್ಲಿ ಸೌರ ವಿದ್ಯುತ್ ಅಳವಡಿಸಿದ್ದು, ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ.
ಅಲ್ಲದೇ ಮೇಲ್ಮನೆ ಸದಸ್ಯ ಅರುಣ ಶಹಪುರ ಅವರ ಸಹಕಾರದಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಸಣ್ಣ ಪ್ರಮಾಣದ ಕೆರೆಯನ್ನೂ ನಿರ್ಮಿಸಲು ಯೋಜಿಸಲಾಗಿದೆ. 58 ಲಕ್ಷ ರೂ. ಯೋಜನೆಯಲ್ಲಿ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಸೇರಿದಂತೆ 37 ಲಕ್ಷ ರೂ. ಹೊಂದಿಸಿಕೊಳ್ಳಲಾಗಿದ್ದು ಬಾಕಿ ಹಣವನ್ನು ವಿಶ್ವವಿದ್ಯಾಲಯ ಇತರೆ ಮೂಲಗಳಿಂದಹೊಂದಿಸಿಕೊಳ್ಳಲಿದೆ ಎಂದರು ಅಮೆರಿಕ ವಿವಿ ಜೊತೆ ಆನ್‌ಲೈನ್ ಶಿಕ್ಷಣ ವಿಜಯಪುರ: ತಮ್ಮ ವಿಶ್ವವಿದ್ಯಾಲಯ ಅಮೆರಿಕದ ನ್ಯೂಯಾರ್ಕ್ ಸ್ಟೇಟ್
ವಿವಿಯೊಂದಿಗೆ ಜಂಟಿಯಾಗಿ ಆನ್‌ಲೈನ್ ಕೋರ್ಸ್ ಆರಂಭಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ.ಸಬಿಹಾಗೌಡ ಹೇಳಿದರು. ಶನಿವಾರ ವಿಶ್ವವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರಾಜ್ಯಪಾಲರ ಸಮ್ಮುಖದಲ್ಲಿ ಈಗಾಗಲೇ ಅಮೆರಿಕ ವಿಶ್ವವಿದ್ಯಾಲಯದೊಂದಿಗೆ ಜಂಟಿ ಕೋರ್ಸ್ ಆರಂಭಿಸಲು ಪರಸ್ಪರ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಗಿದೆ. ಉನ್ನತ ಶಿಕ್ಷಣ ಪಡೆಯುವ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರುವಂತೆ ಮಾಡಲು ಕೌಶಲ್ಯ ಹಾಗೂ ಸಂಹನದ ಕೊರತೆ ನೀಗಲು ಈ ಕೋರ್ಸ್ ಆರಂಭಿಸಲು ನಿರ್ಧರಿಸಲಾಗಿದೆ ಎಂದರು. ಬರುವ ಶೈಕ್ಷಣಿಕ ವರ್ಷದಿಂದ 4 ಕೋರ್ಸ್ ಆರಂಭಿಸಲು ಯೋಜನೆ ರೂಪಿಸಿದ್ದು, ನಮ್ಮ ವಿಶ್ವವಿದ್ಯಾಲಯದೊಂದಿಗೆ ಸಂಲಗ್ನ ಹೊಂದಿರುವ ಅಧಿಕ ಸಂಖ್ಯೆಯಲ್ಲಿ ಕಂಪ್ಯೂಟರ್ ಹಾಗೂ ಇಂಟರ್‌ನೆಟ್ ಸಹಿತ ಸುಸಜ್ಜಿತ ಸೌಲಭ್ಯ ಇರುವ 10
ಖಾಸಗಿ ಕಾಲೇಜುಗಳಲ್ಲಿ ಈ ಕೋರ್ಸ್ ಆರಂಭಿಸಲು ನಿರ್ಧರಿಸಲಾಗಿದೆ. ಉಭಯ ವಿಶ್ವವಿದ್ಯಾಲಯಗಳು ಜಂಟಿ ಪ್ರಮಾಣ ಪತ್ರ ನೀಡಲಿದ್ದು, ಕೋರ್ಸ್ ಶುಲ್ಕ ಇನ್ನೂ ನಿಗದಿ ಆಗಿಲ್ಲ. ಸ್ನಾತಕ- ಸ್ನಾತಕೋತ್ತರ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಆದ್ಯತೆ ನೀಡಲಿದ್ದು ಹೆಚ್ಚಿನ ಉದ್ಯೋಗ ಅವಕಾಶಗಳು ಪಡೆಯಲು ಅವಕಾಶ ದೊರೆಯಲಿದೆ ಎಂದರು.