Advertisement

ವೇತನಕ್ಕಾಗಿ ದಿನಗೂಲಿ ನೌಕರರ ಧರಣಿ

06:45 PM Oct 13, 2020 | Suhan S |

ಭದ್ರಾವತಿ: ವೇತನ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ನಿರಾವರಿ ನಿಗಮದ ಬಿಆರ್‌ಎಲ್‌ಬಿಸಿ ನಾಲ್ಕು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ಮತ್ತು ಗುತ್ತಿಗೆ ನೌಕರರು ಮಿಲ್ಟ್ರಿ ಕ್ಯಾಂಪ್‌ನಲ್ಲಿರುವ ನೀರಾವರಿ ಇಲಾಖೆ ಕಚೇರಿ ಮುಂದೆ ಸೋಮವಾರ ಧರಣಿ ನಡೆಸಿದರು.

Advertisement

ನಾಲ್ಕು ವಿಭಾಗಗಳಲ್ಲಿ 500 ಮಂದಿ ದಿನಗೂಲಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಈ ಹಿಂದಿನ ಗುತ್ತಿಗೆದಾರ ಎರಡು ತಿಂಗಳ ವೇತನ ನೀಡದ ಕಾರಣ ನಡೆಸಿದ ಹೋರಾಟದ ಪರಿಣಾಮವಾಗಿ ಹೊಸ ಗುತ್ತಿಗೆ ನೇಮಕ ಮಾಡಲಾಗಿದೆ. ಈ ಹೊಸ ಗುತ್ತಿಗೆದಾರ ಇಎಸ್‌ಐ, ಪಿಎಫ್‌ ಕಂತು ಹಾಗೂ ವೇತನ ವ್ಯತ್ಯಾಸದ ಹಣವನ್ನು ತುಂಬಿಲ್ಲ. ಇದರಿಂದ ವೇತನವಿಲ್ಲದೆ ದಿನಗೂಲಿ ನೌಕರರ ಬದುಕು ದುಸ್ತರವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಹಳೆ ಗುತ್ತಿಗೆದಾರ ಎರಡು ತಿಂಗಳ ವೇತನವನ್ನು ತಕ್ಷಣ ನೀಡಬೇಕು ಮತ್ತು ಹೊಸ ಗುತ್ತಿಗೆದಾರರು ಇಎಸ್‌ಐ, ಪಿಎಫ್‌ಕಂತಿನ  ಹಣ ತುಂಬಿಕೊಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿದ ಕಾರ್ಯಪಾಲಕ ಇಂಜಿನಿಯರ್‌ ರವಿಚಂದ್ರನ್‌, ಗುತ್ತಿಗೆದಾರರನ್ನು ಕರೆಸಿ ಮಾತನಾಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

ನೀರಾವರಿ ಇಲಾಖೆ ದಿನಗೂಲಿ ಹಾಗೂ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಹರೀಶ್‌, ಪ್ರಕಾಶ್‌ಕುಮಾರ್‌, ಕರಿಬಸಪ್ಪ, ಬೊಮ್ಮನಕಟ್ಟೆ ಪ್ರಕಾಶ್‌,ದೇವೇಂದ್ರಪ್ಪ ಅಸ್ಮಾಬಾನು, ಮೇರಿ, ಶೋಭಾ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next