Advertisement
ಸರ್ಕಾರಿ ಆದೇಶದಂತೆ ಜಿಲ್ಲಾಸ್ಪತ್ರೆ ಯಲ್ಲಿ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕಿದ್ದನ್ನು ವಿರೋಧಿಸಿ ಗುರುವಾರದಿಂದ ಪ್ರತಿಭಟನೆಗೆ ಮುಂದಾಗಿದ್ದ ನೌಕರರು, ಶನಿವಾರ ಆಸ್ಪತ್ರೆ ಮುಂಭಾಗ ಧರಣಿ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಹೊರಗುತ್ತಿಗೆ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷೆ ರಾಧಾ ಸುಂದರೇಶ್ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.
Related Articles
Advertisement
ರಾಜ್ಯಾಧ್ಯಕ್ಷೆ ರಾಧಾ ಸುಂದರೇಶ್ ಮಾತನಾಡಿ, ಕಳೆದ 20ವರ್ಷಗಳಿಂದ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವವರನ್ನು ತೆಗೆದುಹಾಕುವುದು ನ್ಯಾಯವಲ್ಲ. ಇದನ್ನೇ ನಂಬಿ ಆ ಕುಟುಂಬಗಳು ಜೀವನ ಸಾಗಿಸುತ್ತಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ತೆರಳಿ ನೌಕರರ ಅಳಲು ತೋಡಿಕೊಂಡಾಗ ಅವರು ಸ್ಪಂದಿಸಿದ್ದಾರೆ. ನಂತರ ಜಿಲ್ಲಾಸ್ಪತ್ರೆಗೆ ಬಂದಾಗ, ಸರ್ಕಾರದ ಆದೇಶ ಪಾಲನೆ ಮಾಡಿ ಎನ್ನುತ್ತಾರೆ. ಆದರೆ, ಹಳಬರನ್ನು ಮುಂದುವರಿಸಬೇಕೆಂದು ಕೇಳಿದಾಗ, ವೈದ್ಯಾಧಿಕಾರಿಗಳು ಕೂಡಲೇ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸೂಚಿಸಿದ್ದಾರೆ ಎಂದರು.
ಪತ್ರಕರ್ತ ಎನ್.ರಾಜು, ನೌಕರರಾದ ಬಾಬು, ರುಕ್ಮಿಣಿ, ಗುರುವಮ್ಮ ಇತರರು ಹಾಜರಿದ್ದರು.