Advertisement
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ವಿಭಾಗ ಏರ್ಪಡಿಸಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಕಾರಾತ್ಮಕ ಧೋರಣೆ ಬೆಳೆಸಿಕೊಳ್ಳಬೇಕು. ವಿಷಮ ಪರಿಸ್ಥಿತಿಯಲ್ಲೂ ಧೈರ್ಯದಿಂದ ಸವಾಲು ಎದುರಿಸಲು ಮುಂದಾಗಬೇಕು ಎಂದರು.
Related Articles
Advertisement
ಸಂದರ್ಶನ ಎದುರಿಸುವ ಕುರಿತು ಪ್ರೊ| ಅಶೋಕ ಡಿಸೋಜಾ ಮಾತನಾಡಿ, ಸಂದರ್ಶನ ಎಂದರೆ ಭಯಬೀಳುವ ಅವಶ್ಯಕತೆಯಿಲ್ಲ. ಅದರ ಬದಲಾಗಿ ಧೈರ್ಯದಿಂದ ಎದುರಿಸಬೇಕು. ಸಂದರ್ಶನ ನಿಮ್ಮ ಅನುಕೂಲಕ್ಕೆ ತಕ್ಕಂತೆ ಪರಿಸ್ಥಿತಿ ಸೃಷ್ಟಿಸಿಕೊಳ್ಳಬೇಕು ಎಂದರು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಪ್ಲೆಸ್‌ಮೆಂಟ್ ಆಫೀಸರ್ ಪ್ರೊ| ಆರ್. ಎನ್. ಮನಗೂಳಿ ಮಾತನಾಡಿ, ಈ ಬಗೆಯ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಶಿಕ್ಷಣದ ನಂತರಅವರಿಗೆ ಉದ್ಯೋಗ ದೊರೆಕಿಸಿಕೊಡುವಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿವೆ ಎಂದರು. ಡಾ| ನಾಗರತ್ನಾ ಪರಾಂಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಉದ್ಯೋಗಕ್ಕೆ ಅವಶ್ಯವಿರುವ ಕೌಶಲ ಪಡೆದರೆ ಶೀಘ್ರ ಮತ್ತು ಸುಲಭವಾಗಿ ಉದ್ಯೋಗ ಪಡೆಯಬಹುದು ಎಂದರು. ಡಾ| ಕವಿತಾ ಕುಸುಗಲ್ಲ ವಂದಿಸಿದರು.