Advertisement

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು: ಖಾದರ್‌

12:50 AM Jan 28, 2019 | Team Udayavani |

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆ ಜಂಟಿ ಸಹಭಾಗಿತ್ವದಲ್ಲಿ ಉರ್ವ ಮಾರುಕಟ್ಟೆ ನೂತನ ವಾಣಿಜ್ಯ ಸಂಕೀರ್ಣವನ್ನು ರವಿವಾರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಉದ್ಘಾಟಿಸಿದರು.

Advertisement

ಈ ಸಂದರ್ಭ ಮಾತನಾಡಿದ ಅವರು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ನೂತನ ಮಾರುಕಟ್ಟೆಯು ಜಿಲ್ಲೆಯ ಅಭಿವೃದ್ಧಿಯ ಕಿರೀಟಕ್ಕೆ ಗರಿ ಇಟ್ಟಂತಿದೆ ಎಂದರು.

ಬೆಂಗಳೂರಿನ ಬಳಿಕ ವೇಗವಾಗಿ ಬೆಳೆ ಯುತ್ತಿರುವ ನಗರಗಳಲ್ಲಿ ಮಂಗಳೂರು ಮುಂಚೂಣಿಯಲ್ಲಿದೆ. ನಗರ ಅಭಿವೃದ್ಧಿ ಯಾಗಲು ನೀರಿನ ಸೌಲಭ್ಯ, ರಸ್ತೆ ಜತೆಗೆ, ದಿನನಿತ್ಯದ ಬಳಕೆಯ ವಸ್ತುಗಳು ಜನಸಾಮಾನ್ಯ ರಿಗೆ ಸಿಗುವಂತಾಗಬೇಕು. ಎಂದು ತಿಳಿಸಿದರು.

ಬೇಡಿಕೆ ಈಡೇರಿಕೆ
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತನಾಡಿ, ನೂತನ ಉರ್ವ ಮಾರುಕಟ್ಟೆ ವಾಣಿಜ್ಯ ಸಂಕೀರ್ಣ ನಿರ್ಮಾಣದಿಂದ ನಗರದ ಜನರ ಬಹುಕಾಲದ ಬೇಡಿಕೆ ಈಡೇರಿದೆ. ಮಾರುಕಟ್ಟೆಯ ವಿನ್ಯಾಸದಲ್ಲಿ ಕೆಲವೊಂದು ಲೋಪ ದೋಷಗಳಿದ್ದವು ಎಂದರು. 

ಮೀನುಗಾರ ಮಹಿಳೆಯರಿಗೆ ಮೀನು ತುಂಡರಿಸಲು ಸ್ಥಳಾವಕಾಶದ ಕೊರತೆ ಇತ್ತು. ಸಮಸ್ಯೆಯನ್ನು ಪರಿಗಣಿಸಿ ಪ್ರತ್ಯೇಕ ಜಾಗ ಕಲ್ಪಿಸಲಾಗಿದೆ. ಅಲ್ಲೇ ಡ್ರೆಸ್ಸಿಂಗ್‌ ಕೋಣೆ ನಿರ್ಮಿಸಲಾಗಿದೆ. ಚಿಕನ್‌-ಮಟನ್‌ ಸ್ಟಾಲ್‌ಗ‌ಳಿಗೆ ಪಾಲಿಕೆ ಜಾಗ ಗುರುತಿಸಲಾಗಿದೆ ಎಂದು ಅವರು ಹೇಳಿದರು.

Advertisement

ಮಂಗಳೂರು ಮತ್ತಷ್ಟು ಸ್ಮಾರ್ಟ್‌ ಆಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು. ಮುಂದಿನ ದಿನಗಳಲ್ಲಿ ನಗರದ ಇನ್ನಿತರ ಪ್ರದೇಶಗಳಲ್ಲಿ ಮಾರುಕಟ್ಟೆ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ, ಪಾಲಿಕೆ ಮೇಯರ್‌ ಭಾಸ್ಕರ್‌ ಕೆ., ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌, ಮಂಗಳೂರು ನಗರಾಭಿವೃದ್ಧಿ ಆಯುಕ್ತ ಶ್ರೀಕಾಂತ್‌ ರಾವ್‌ ಕೆ., ಪಾಲಿಕೆ ಆಯುಕ್ತ ಮೊಹಮ್ಮದ್‌ ನಝೀರ್‌, ಪಾಲಿಕೆ ಮುಖ್ಯಸಚೇತಕ ಶಶಿಧರ ಹೆಗ್ಡೆ, ಪಾಲಿಕೆ ಸದಸ್ಯ ರಾಧಾಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

12.63 ಕೋಟಿ ಕಾಮಗಾರಿ
ಮಾರುಕಟ್ಟೆ ನಿರ್ಮಾಣಕ್ಕೆ ಒಟ್ಟು 12.62 ಕೋಟಿ ರೂ. ವೆಚ್ಚ ತಗಲಿದೆ. ಕಾಮಗಾರಿಯನ್ನು 2016ರ ಡಿ. 19ರಂದು ಪ್ರಾರಂಭಿಸಲಾಗಿ 2018ರ ಡಿ.18ರಂದು ಪೂರ್ಣಗೊಳಿಸಲಾಯಿತು. ಕಾಮಗಾರಿಗೆ 4.30 ಕೋಟಿ ರೂ. ಬ್ಯಾಂಕ್‌ ಸಾಲ ಮತ್ತು 8.33 ಕೋಟಿ ರೂ. ಮುಡಾ ನಿಧಿ ಭರಿಸಲಾಗಿದೆ. 84,891.45 ಚದರ ಅಡಿ ವಿಸ್ತೀರ್ಣದ ಕಟ್ಟಡದಲ್ಲಿ 31 ಮೀನು ಮಾರಾಟ ಸ್ಟಾಲ್‌, 8 ಕೋಳಿ ಮಾಂಸ ಮಾರಾಟ ಸ್ಟಾಲ್‌, 68 ಇತರ ಸ್ಟಾಲ್‌ಗ‌ಳು ಮತ್ತು 15 ಕಚೇರಿಗಳಿವೆ.

ಸ್ಮಾರ್ಟ್‌ಸಿಟಿಗೆ ವೇಗ
ಕಂಕನಾಡಿ ಮಾರುಕಟ್ಟೆಯು ಅನು ಮೋದನೆಯ ಹಂತದಲ್ಲಿದೆ. ಸುರತ್ಕಲ್‌ ಮಾರುಕಟ್ಟೆ ಪ್ರಗತಿಯಲ್ಲಿದೆ. ಸೆಂಟ್ರಲ್‌ ಮಾರುಕಟ್ಟೆ ಮತ್ತು ಕದ್ರಿ ಮಾರುಕಟ್ಟೆ ಟೆಂಡರ್‌ ಹಂತದಲ್ಲಿದೆ. ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳು ಈಗಾ ಗಲೇ ಪ್ರಾರಂಭವಾಗಿದ್ದು, ಪ್ರಕ್ರಿಯೆ ಗಳು ವೇಗ ಪಡೆದುಕೊಂಡಿವೆ. ಐದು ವರ್ಷ ಗಳಲ್ಲಿ ಒಂದು ಸಾವಿರ ಕೋಟಿ ರೂ. ಬಳಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next