Advertisement

“ಶಿಕ್ಷಣಕ್ಕೆ ಒತ್ತು ನೀಡುವುದರಿಂದ ಅಲ್ಲಾಹುವಿನ ಅನುಗ್ರಹ’

03:08 PM Mar 16, 2017 | |

ಉಪ್ಪಿನಂಗಡಿ : ಅನಾಥ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಶಿಕ್ಷಣ ನೀಡಬೇಕು. ಅವರ ಬೆಳವಣಿಗೆಗೆ ಶ್ರಮಿಸುವ ಸಂಸ್ಥೆಗಳನ್ನು ಪೋಷಿಸುವ, ಸಹಕಾರ ನೀಡುವಾತನಿಗೆ ಅಲ್ಲಾಹುವಿನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಉಸ್ತಾದ್‌ ಎ.ಎಂ. ನೌಶಾದ್‌ ಬಾಖವಿ ಹೇಳಿದರು.

Advertisement

ಅವರು ಮಾ. 14ರಂದು ನೆಲ್ಯಾಡಿ ಗಾಂಧಿ ಮೈದಾನ ದಲ್ಲಿ ಹಮ್ಮಿಕೊಳ್ಳಲಾದ ಅರಸಿನಮಕ್ಕಿ ಸಯ್ಯದ್‌ ಬೀರಾನ್‌ ಆ್ಯಂಡ್‌ ಸಯ್ಯದ್‌ ನಾಝಿಂ ವಲಿ ಯುಲ್ಲಾಹಿ ದರ್ಗಾ ಮತ್ತು ಅರಸಿನಮಕ್ಕಿ ಖಲಂದರ್‌ ಷಾ ಎಜುಕೇಶನಲ್‌ ಆ್ಯಂಡ್‌ ಚಾರಿಟೆಬಲ್‌ ಟ್ರಸ್ಟ್‌ ಇದರ ಆಶ್ರಯದಲ್ಲಿ ನಡೆಯುತ್ತಿರುವ ಬೋರ್ಡಿಂಗ್‌ ಮದ್ರಸದ ಅಭಿವೃದ್ಧಿ ಯೋಜನೆ ಮತ್ತು ಉದ್ದೇಶಿತ ದುವಾ ಕಾಲೇಜು ನಿರ್ಮಾಣ ಯೋಜನೆ ಸಲುವಾಗಿ ಅಭಿವೃದ್ಧಿ ನಿಧಿ ಸಂಗ್ರಹದ ಉದ್ದೇಶದಿಂದ ಹಮ್ಮಿಕೊಳ್ಳಲಾದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಡವರ ಆರೋಗ್ಯ ಸೇವೆಯಲ್ಲಿ ಮದರ್‌ ತೆರೇಸಾ ಮಾಡಿರುವ ಸಾಧನೆ ಮತ್ತು ಕ್ರೆçಸ್ತ ಸಂಸ್ಥೆಗಳು ಹಮ್ಮಿ ಕೊಳ್ಳುವ ಯೋಜನೆಗಳು ನಮಗೆ ಮಾದರಿ. ಈ ರೀತಿಯ ಉದ್ದೇಶಿತ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ನಿಟ್ಟಿನಲ್ಲಿ ಯುವ ಸಮೂಹ, ಸಂಘಟನೆಗಳು ಮುಂದೆ ಬರಬೇಕು. ಆ ಮೂಲಕ ಸಮುದಾಯವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯಲು ಸಾಧ್ಯ ಎಂದರು.

ಶಿಕ್ಷಣ ಮೂಲ ವ್ಯವಸ್ಥೆ
ಇಸ್ಲಾಂ ಧರ್ಮ ಶಿಕ್ಷಣಕ್ಕೆ ಅತೀ ಹೆಚ್ಚು ಮಹತ್ವ ನೀಡಿದೆ. ಅದರ ಹೊರತಾದ ಮತೀಯ ಕಲಹ, ಭಯೋತ್ಪಾದನೆಗೆ ಯಾವತ್ತೂ ಬೆಂಬಲ ನೀಡಿಲ್ಲ. ಕೆಲವರು ಇಸ್ಲಾಂ ಬಗ್ಗೆ ಮತ್ತು ಮುಸ್ಲಿಂ ಬಗ್ಗೆ ತುತ್ಛವಾಗಿ ಕಾಣುತ್ತಿದ್ದಾರೆ. ಇದಕ್ಕೆ ಶಿಕ್ಷಣ ಮತ್ತು ಅಭಿ ವೃದ್ಧಿಯ ಮೂಲಕ ಉತ್ತರ ನೀಡಬೇಕೇ ಹೊರತು ಯುವ ಸಮೂಹ ಅನ್ಯ ದಾರಿ ಹಿಡಿಯದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದರು.

ಮೌಲ್ಯಯುತವಾದ ದಾನ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಮಾತನಾಡಿ, ಬಡವ ರಿಗೆ ಶಿಕ್ಷಣ ಕೊಡಿಸುವುದು ಮೌಲ್ಯಯುತವಾದ ದಾನ ವಾಗಿದೆ. ಅರಸಿನಮಕ್ಕಿಯಲ್ಲಿ ಕಲಿಯುತ್ತಿರುವ, ಅಲ್ಲಿನ ಬೋರ್ಡಿಂಗ್‌ ಶಾಲೆಗೆ ನಮ್ಮಿಂದಾಗುವ ಸಹಾಯ ನೀಡುವ ಮೂಲಕ ನಾವುಗಳು ಅಲ್ಲಾಹನ ಸಂಪ್ರೀತಿ ಪಡೆಯಬಹುದಾಗಿದೆ ಎಂದರು.

Advertisement

ಮಜಿÉಸುನೂರ್‌ ಉದ್ಘಾಟನೆ
ಸಭಾ ಕಾರ್ಯಕ್ರಮಕ್ಕೆ ಮುನ್ನ ಪೊಟೋಟ್‌ ಸೆಯ್ಯದ್‌ ಝೈನುಲ್‌ ಆಬಿದೀನ್‌ ಜಿಫ್ರಿ ತಂšಳ್‌ ಮಜಿÉಸುನೂರ್‌ ಉದ್ಘಾಟಿಸಿ ದುವಾಃ ನೆರವೇರಿಸಿದರು. ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್‌ ಸದಸ್ಯ ಎಂ.ಎಸ್‌. ಮಹಮ್ಮದ್‌, ಹನೀಫ್ ಹುದವಿ, ಸ್ವಾಗತ ಸಮಿತಿ ಗೌರವಾಧ್ಯಕ್ಷ ನಝೀರ್‌ ಮಠ ಮಾತನಾಡಿದರು.

ಜಿ.ಪಂ. ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ. ವರ್ಗೀಸ್‌, ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಎಂ.ಕೆ. ಇಬ್ರಾಹಿಂ, ಕೆಪಿಸಿಸಿ ಸದಸ್ಯ ಡಾ| ರಘು, ವಕ್ಸ್‌ ಸಲಹಾ ಸಮಿತಿ ಸದಸ್ಯ ನೂರುದ್ದೀನ್‌ ಸಾಲ್ಮರ, ಉದ್ಯಮಿಗಳಾದ ಕರಾವಳಿ ತಂšಳ್‌, ಯು.ಪಿ. ವರ್ಗಿಸ್‌, ಲತೀಫ್ ಹಾಜಿ ಬಿ.ಸಿ. ರೋಡ್‌, ನೌಶಾದ್‌ ಹಾಜಿ ಸೂರಲ್ಪಾಡಿ, ಸಿ.ಎಚ್‌. ಅಝೀಜ್‌ ಕಾವು, ಮದ್ರಸ ಮೆನೇಜ್‌ಮೆಂಟ್‌ ಅಧ್ಯಕ್ಷ ಹಾಜಿ ಅಬ್ದುಲ್‌ ರಹಿಮಾನ್‌ ಕೊಳ್ಳೇಜಾಲ್‌, ಎಂ. ಫ್ರೆಂಡ್ಸ್‌ ಕಾರ್ಯದರ್ಶಿ ರಶೀದ್‌ ವಿಟ್ಲ, ಮಂಗಳೂರು ಟ್ಯಾಲೆಂಟ್‌ ಫೌಂಡೇಶನ್‌ನ ರಫೀಕ್‌ ಮಾಸ್ಟರ್‌, ಎಸ್ಕೆಎಸೆಸ್ಸೆಫ್ ವಲಯ ಅಧ್ಯಕ್ಷ ನಝೀರ್‌ ಬೆದ್ರೋಡಿ, ಕಡಬ ಬ್ಲಾಕ್‌ ಅಲ್ಪಸಂಖ್ಯಾಕ‌ ಘಟಕದ ಅಧ್ಯಕ್ಷ ಅಬ್ದುಲ್‌ ನಾಸಿರ್‌ ಹೊಸಮನೆ, ಜಾಫ‌ರ್‌ ಫೈಝಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಮೂಹಿಕ ಪ್ರಾರ್ಥನೆ
ಬೆಳಗ್ಗೆ ಅರಸಿನಮಕ್ಕಿ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸ್ವಾಗತ ಸಮಿತಿ ಸಂಚಾಲಕ ಅಬ್ದುಲ್‌ ಶುಕೂರ್‌ ಕೆ.ಜಿ.ಎನ್‌. ಧ್ವಜಾರೋಹಣ ನೆರವೇರಿಸಿದರು. ಖಲಂದರ್‌ ಷಾ ಟ್ರಸ್ಟ್‌ ಗೌರವಾಧ್ಯಕ್ಷ ದಾವೂದ್‌ ಇಬ್ರಾಹಿಂ, ಕೋಲ್ಪೆ ಮಸೀದಿ ಅಧ್ಯಕ್ಷ ಕೆ.ಕೆ. ಅಬೂಬಕ್ಕರ್‌, ಮುಹಮ್ಮದ್‌ ಮುಸ್ಲಿಯಾರ್‌ ಹೊಸ್ಮಠ, ಇಸ್ಮಾಯಿಲ್‌ ನೆಲ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.

ಮಾಡನ್ನೂರು ನೂರುಲ್‌ ಹುದಾ ಇಸ್ಲಾಮಿಕ್‌ ಸೆಂಟರ್‌ ವ್ಯವಸ್ಥಾಪಕ ಖಲೀಲು ರಹಿಮಾನ್‌ ಅರ್ಷದಿ ಕೋಲ್ಪೆ ಸ್ವಾಗತಿಸಿ, ಶಕೂರ್‌ ಕೆಜಿಎನ್‌ ವಂದಿಸಿದರು. ಉಪ್ಪಿನಂಗಡಿ ಹಿಫ್ಳ್‌ ಕಾಲೇಜು ಪ್ರಾಚಾರ್ಯ ಮಹಮ್ಮದ್‌ ತ್ವಯಿಬ್‌ ಅಲ್‌ಖಾಸಿಮಿ ಕಿರಾಅತ್‌ ಪಠಿಸಿದರು. ಖಲಂದರ್‌ ಷಾ ಎಜುಕೇಶನಲ್‌ ಎಂಡ್‌ ಚಾರಿಟೆಬಲ್‌ ಟ್ರಸ್ಟ್‌ ಕಾರ್ಯದರ್ಶಿ ಶರೀಫ್ ಕೆ.ಎಸ್‌., ಮಜೀದ್‌ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಸಚಿವ ಖಾದರ್‌ ಭೇಟಿ
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಭೇಟಿ ನೀಡಿ, ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next