ಒಂದು ಸ್ವಂತ ಸೂರನ್ನು ಹೊಂದಬೇಕೆಂಬುದು ಮಧ್ಯಮ ವರ್ಗದವರ ಮತ್ತು ವೇತನದಾರರ ಕನಸು. ಇದರ ಸಾಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ.
ಮನೆ ಖರೀದಿ ಸುಲಭಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1ರಂದು ಮಂಡಿಸಲಿರುವ ಬಜೆಟ್ ಮೇಲೆ ಎಲ್ಲರ ನಿರೀಕ್ಷೆ ಇದೆ.
ಗೃಹ ಸಾಲದ ಬಡ್ಡಿ ದರ ಮತ್ತು ಇಎಂಐ ಇಳಿಕೆಯನ್ನು ಮನೆ ಖರೀದಿಸ ಬಯಸುವವರು ನಿರೀಕ್ಷಿಸುತ್ತಿದ್ದಾರೆ. ಆರ್‌ಬಿಐ ರೆಪೋ ದರ ಹೆಚ್ಚಿಸಿರುವ ಪರಿಣಾಮ ಗೃಹ ಸಾಲದ ಬಡ್ಡಿ ದರ ಕೂಡ ಹೆಚ್ಚಳವಾಗಿದೆ. ಸಿದ್ಧ ಮನೆಗಳನ್ನು ಖರೀದಿಸುವವರಿಗೆ ಬಡ್ಡಿ ಪಾವತಿಯ ಕಡಿತದ ಮಿತಿಯನ್ನು ಈಗಿರುವ 2 ಲಕ್ಷ ರೂ.ಗಳಿಂದ 3 ಲಕ್ಷ ರೂ. ಗೆ ಮಿತಿ ಹೆಚ್ಚಿಸಬೇಕು ಎಂದು ಅನೇಕರು ಮನವಿ ಮಾಡಿದ್ದಾರೆ.