Advertisement
ಸಾಮಾನ್ಯವಾಗಿ ಕೆಲವರು ತಮ್ಮನ್ನು ತಾವು ಭಾವನಾತ್ಮಕ ಜೀವಿ ಎಂದು ಗುರುತಿಸಿಕೊಳ್ಳುತ್ತಾರೆ. ಅದು ಇನ್ನೊಬ್ಬರು ತನ್ನ ಮೇಲೆ ಒಂದಿಷ್ಟು ಅನುಕಂಪ ಇಟ್ಟುಕೊಳ್ಳಲಿ ಎಂಬ ತಂತ್ರವೂ ಹೌದು ಎನ್ನುತ್ತದೆ ಮನಃಶಾಸ್ತ್ರ. ಆದರೇ, ಎಲ್ಲಾ ಸಂದರ್ಭದಲ್ಲಿಯೂ ಅಲ್ಲ.
Advertisement
ಅಭಿವ್ಯಕ್ತಿಗೊಳಿಸುವ ಅಂಶ : ಭಾವನೆಗೆ ಪ್ರತಿಕ್ರಿಯೆಯಾಗಿ ನೀವು ಹೇಗೆ ವರ್ತಿಸುತ್ತೀರಿ ಎನ್ನುವುದು ಕೂಡ ಇಲ್ಲಿ ಬಹಳ ಮುಖ್ಯವಾಗುತ್ತದೆ. ಉದಾಹರಣೆಗೆ, ಅಳುವನ್ನು ಅದುಮಿಟ್ಟುಕೊಂಡರೇ, ಅದು ನಿಮ್ಮನ್ನು ಮತ್ತಷ್ಟು ಹಿಂಸಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಅಳು ಬಂದಾಗ ಅಳುವುದು, ಸಿಟ್ಟು ಬಂದಾಗ ಅದನ್ನು ವ್ಯಕ್ತ ಪಡಿಸಿಕೊಳ್ಳುವುದು ಭಾವನೆಗಳ ವಿಚಾರದಲ್ಲಿ ಮುಖ್ಯವಾಗುತ್ತದೆ.
ಭಾವನೆಗಳು ಕ್ಷಣಿಕವಾಗಬಹುದು, ಉದಾಹರಣೆಗೆ ಸಹೋದ್ಯೋಗಿಯ ಮೇಲಿನ ಕೋಪ, ಅಥವಾ ಅವರ ಸಂಬಂಧವನ್ನು ಕಳೆದುಕೊಳ್ಳುವ ದುಃಖ ದೀರ್ಘಕಾಲೀನವಾಗಬಹುದು. ಆದರೆ ನೀವು ಮೊದಲಿಗೆ ಭಾವನೆಗಳನ್ನು ಏಕೆ ಅನುಭವಿಸುತ್ತೀರಿ ? ಭಾವನೆಗಳು ಯಾವ ಕಾರ್ಯವನ್ನು ಹೊಂದಿವೆ ? ಭಾವನೆ ನಮಗೆ ಸಹಾಯ ಮಾಡುವ ಕೆಲವು ವಿಧಾನಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ.
ಭಾವನೆಯು ಚಿತ್ತಸ್ಥಿತಿ, ಮನೋಧರ್ಮ, ವ್ಯಕ್ತಿತ್ವ ಮತ್ತು ಸ್ವಭಾವ ಹಾಗೂ ಪ್ರೇರಣೆಯೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ಇಂಗ್ಲಿಷ್ ಪದ ‘ಇಮೋಷನ್’ ನನ್ನು ಫ್ರೆಂಚ್ ಪದ ಇಮೌವಾಯರ್ ನಿಂದ ಪಡೆಯಲಾಗಿದೆ. ಇದು ಲ್ಯಾಟಿನ್ ಪದ ಇಮೋವೀರ್ ನನ್ನು ಆಧರಿಸಿದೆ, ಇದರಲ್ಲಿ ಇ ಅಂದರೆ ‘ಹೊರಗೆ’ ಮತ್ತು ಮೋವೂರ್ ಅಂದರೆ ‘ಚಲನೆ’ ಎಂದರ್ಥ. “ಮೋಟಿವೇಶನ್” ನನ್ನೂ ಸಹ ಮೋವೀರ್ ನಿಂದ ಪಡೆಯಲಾಗಿದೆ.
ಭಾವನೆ ಮತ್ತು ಭಾವನೆಯಿಂದಾಗುವ ಪರಿಣಾಮಗಳ, ಪ್ರಧಾನವಾಗಿ ವರ್ತನೆ ಮತ್ತು ಭಾವನಾತ್ಮಕ ಅಭಿವ್ಯಕ್ತಿಗಳ, ಮಧ್ಯೆ ಸಂಬಂಧಿತ ಭಿನ್ನತೆ ಇರುತ್ತದೆ.
ಸಾಮಾನ್ಯವಾಗಿ ಹೆಚ್ಚಿನವು ಅವರವರ ಭಾವನಾತ್ಮಕ ಸ್ಥಿತಿಯ ನೇರ ಪರಿಣಾಮವಾಗಿ ಕೆಲವು ರೀತಿಗಳಲ್ಲಿ ವರ್ತಿಸುತ್ತಾರೆ, ಅಳುವುದು, ಜಗಳವಾಡುವುದು ಅಥವಾ ತೊರೆದುಬಿಡುವುದು ಹೀಗೆ ಹಲವು…. ಅನುಗುಣವಾದ ವರ್ತನೆಯಿಲ್ಲದ ಭಾವನೆಯನ್ನು ಹೊಂದಿದ್ದರೆ, ಭಾವನೆಗೆ ವರ್ತನೆಯ ಅಗತ್ಯವಿಲ್ಲ ಎಂದು ನಾವು ಪರಿಗಣಿಸಬಹುದು.
ಯೋಚನೆಯೊಂದನ್ನು ಪಡೆದು ಅದು ಭಾವನಾತ್ಮಕ ಪ್ರತಿಕ್ರಿಯೆಯಾಗಿ ಹೊರಹೊಮ್ಮುವ ಮೊದಲು ಒಂದು “ಅದ್ಭುತವಾದ ಕೆಲ ಸೆಕೆಂಡು” ಇರುತ್ತದೆ ಎಂದು ನರ ವೈಜ್ಞಾನಿಕ ಸಂಶೋಧನೆಯು ಸೂಚಿಸುತ್ತದೆ. ಆ ಕೆಲ ಕ್ಷಣಗಳಲ್ಲೆ ಭಾವನೆಗಳು ನಮ್ಮನ್ನು ಸಂತೋಷ ಪಡಿಸಲೂ ಬಹದು ಮತ್ತು ದುಃಖ ಪಡಿಸಲೂ ಬಹುದು.
ಭಾವನೆಗಳನ್ನು ನಮಗೆ ನಿಯಂತ್ರಿಸಲು ಸಾಧ್ಯವಿಲ್ಲವೆನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೇ, ಮೇಲೆ ಹೇಳಿರುವ ಮೂರು ಅಂಶಗಳನ್ನು ಅಳವಡಿಸಿಕೊಂಡರೇ, ಭಾವನೆಗಳಿಗೆ ಪ್ರತಿ ಸ್ಪಂದಿಸುವುದಕ್ಕೆ ಆಗುತ್ತದೆ. ಮಾತ್ರವಲ್ಲದೇ, ಎಲ್ಲಾ ಭಾವನೆಗಳನ್ನು ಕೇವಲ ಭಾವನೆಗಳಂತೆಯೇ ಸ್ವೀಕರಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಭಾವನೆಗಳು ‘ಕೊರಗು’ ಗಳಾಗಿ ಪರಿವರ್ತೆನಯಾಗುತ್ತವೆ.
ನಿಮ್ಮ ಭಾವನೆಗಳು, ನೀವು ಕಂಡುಹಿಡಿದಂತೆ, ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತವೆ. ಭಾವನೆಗಳು ಸಂಕ್ಷಿಪ್ತ, ದೀರ್ಘಕಾಲೀನ, ತೀವ್ರವಾದ, ಮತ್ತು ಸಂಕೀರ್ಣ ಜೀವನವನ್ನು ಬದಲಾಯಿಸುವಂತಹುದು. ಕೆಲವು ರೀತಿಯಲ್ಲಿ ಕಾರ್ಯನಿರ್ವಹಿಸಲು ಅವರು ನಿಮ್ಮನ್ನು ಪ್ರೇರೇಪಿಸಬಹುದು ಮತ್ತು ನಿಮ್ಮ ಸಾಮಾಜಿಕ ಜೀವನದಲ್ಲಿ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಲು ಬೇಕಾದ ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡಿಕೊಡುತ್ತದೆ.
-ಶ್ರೀರಾಜ್ ವಕ್ವಾಡಿ