Advertisement

ಜಪಾನ್‌ನಲ್ಲಿ ಮತ್ತೆ ತುರ್ತು ಪರಿಸ್ಥಿತಿ?

10:53 AM Jul 04, 2020 | mahesh |

ಟೋಕಿಯೊ: ಜಪಾನ್‌ನಲ್ಲಿ ಕೊರೊನಾ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆ ದೇಶದಲ್ಲಿ ಮತ್ತೂಮ್ಮೆ ಕೋವಿಡ್‌ ತುರ್ತು ಪರಿಸ್ಥಿತಿ ಹೇರಬೇಕು ಎಂದು ಟೋಕಿಯೊ ನಗರದ ಸ್ಥಳೀಯರು ಹಾಗೂ ಕೆಲ ತಜ್ಞರು ಸರಕಾರಕ್ಕೆ ಮನವಿ ಮಾಡಿದ್ದಾರೆ. ಜಪಾನಿನಲ್ಲಿ ಕಳೆದ ಎರಡು ವಾರಗಳಿಂದ ಸೋಂಕಿತ ಸಂಖ್ಯೆ ಗಣನೀಯ ಹೆಚ್ಚಳವಾಗುತಿದ್ದು ಸಾವಿನ ಸಂಖೆಯೂ ಅಧಿಕವಾಗಿದೆ ಈ ನಿಟ್ಟಿನಲ್ಲಿ ಎರಡನೇ ಹಂತದ ಲಾಕ್‌ಡೌನ್‌ ಅಥವಾ ಆರೋಗ್ಯ ತುರ್ತು ಪರಿಸ್ಥಿತಿ ಕೈಗೊಳ್ಳಬೇಕೆಂದು ತಜ್ಞರು ಸರಕಾರಕ್ಕೆ ಒತ್ತಾಯಿಸಿದ್ದಾರೆ.

Advertisement

ಜನರಿಗೆ ಆತಂಕವೇ ಹೆಚ್ಚು
ಸದ್ಯ ವಿಶ್ವದೆಲ್ಲೆಡೆ ಕೋವಿಡ್ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ನಿಯಂತ್ರಣ ಅಸಾಧ್ಯವಾಗುತ್ತಿದೆ. 47ರಾಜ್ಯಗಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದರೂ ಸರಿಯಾದ ನಿಯಮಗಳು  ಪಾಲನೆಯಾಗುತಿಲ್ಲ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಯಾವುದೇ ಸೂಕ್ತ ಕ್ರಮ ಕೈಗೊಳ್ಳುತಿಲ್ಲ ಹೀಗಾಗಿ ಜನರು ಎಲ್ಲಡೆ
ಓಡಾಡುತ್ತಿದ್ದಾರೆ ಹಾಗೆ ಕೆಲ ದೇಶದಿಂದ ನಗರಕ್ಕೆ ಬರುವವರು ಕೊರೊನಾವನ್ನೂ ಹೊತ್ತು ತರಬಹುದು ಎನ್ನುವ ಆತಂಕ ಸ್ಥಳೀಯರದ್ದು. ಇದರಿಂದಾಗಿ ಸರಕಾರ ಕಠಿನ ತುರ್ತು ಪರಿಸ್ಥಿತಿ ಜಾರಿ ಮಾಡಬೇಕೆಂದು ಜನರು ಆಗ್ರಹಿಸಿದ್ದಾರೆ. ಶುಕ್ರವಾರದವರೆಗೆ ಸೋಕಿತರ ಸಂಖ್ಯೆ 18874 ಆಗಿದ್ದು, 16772 ಮಂದಿ ಗುಣಮುಖರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next