Advertisement

ತಿರುಪತಿಯಲ್ಲಿ ತುರ್ತು ನಿರ್ಗಮನ ಮೆಟ್ಟಿಲು ನಿರ್ಮಾಣ

08:55 AM Aug 05, 2017 | Team Udayavani |

ತಿರುಪತಿ: ಜಗದ್ವಿಖ್ಯಾತ ಪುಣ್ಯ ಕ್ಷೇತ್ರ ತಿರುಪತಿಯ ಶ್ರೀ ವೆಂಕಟೇಶ್ವರನ ಸನ್ನಿಧಿಗೆ ಭೇಟಿ ನೀಡುವ ಭಕ್ತರ ಸುರಕ್ಷತೆಗಾಗಿ ಬೆಟ್ಟದ ಮೇಲಿರುವ ಪುರಾತನವಾದ ಎರಡನೇ ಗೋಪುರದ ಬಲ ಭಾಗದ ಗೋಡೆಗೆ ಹೊಂದಿಕೊಂಡಂತೆ ತುರ್ತು ನಿರ್ಗಮನ ಮೆಟ್ಟಿಲುಗಳನ್ನು ನಿರ್ಮಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ. ‘ಕಾಲ್ತುಳಿತ ಹಾಗೂ ಸುರಕ್ಷತೆ ಲೋಪದಿಂದ ಅವಘಡಗಳು ಸಂಭವಿಸಿದ ಸಂದರ್ಭಗಳಲ್ಲಿ ಭಕ್ತರು ಸುರಕ್ಷಿತವಾಗಿ ಬೆಟ್ಟದಿಂದ ಇಳಿಯಲು ಅನುಕೂಲವಾಗುವಂತೆ 22 ಅಡಿ ಎತ್ತರ ಹಾಗೂ 5 ಅಡಿ ಅಗಲದ ಕಬ್ಬಿಣದ ಮೆಟ್ಟಿಲುಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ,’ ಎಂದು ತಿರುಮಲ ತಿರುಪತಿ ದೇವಸ್ಥಾನದ ಕಾರ್ಯಕಾರಿ ಅಧಿಕಾರಿ ಅನಿಲ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next