ದೇಶಾದ್ಯಂತ ಹರಡಿರುವ ಕೊರೊನಾ ತಡೆಯುವ ಪ್ರಯತ್ನದಲ್ಲಿ ಜಪಾನ್ ಪ್ರಧಾನಿ ಶಿಂಜೊ ಅಬೆ ತುರ್ತು ಪರಿಸ್ಥಿತಿ ಯನ್ನು ಘೋಷಿಸಲಿದ್ದಾರೆ ಎಂದು ಸ್ಥಳೀಯ ಯೋಮಿಯುರಿ ಪತ್ರಿಕೆ ವರದಿ ಮಾಡಿದೆ. ಸೋಂಕಿನ ವೇಗ ಹೆಚ್ಚುತ್ತಿರುವುದರಿಂದ ಈ ಕ್ರಮದ ಮೊರೆ ಅನಿವಾರ್ಯ ಎನಿಸುವಂಥ ಸ್ಥಿತಿ ಇದೆ. ಯುನೈಟೆಡ್ ಸ್ಟೇಟ್ಸ…, ಯುರೋಪ್ ಮತ್ತು ಚೀನ ಮತ್ತು ಇತರ ದೇಶಗಳಿಗೆ ಹೋಲಿಸಿದರೆ ಜಪಾನ್‌ನಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇದೆ. ಈಗ ನಿಧಾನವಾಗಿದ್ದರೂ, ಆತಂಕ ಹೆಚ್ಚಿದೆ. ಕಳೆದ ವಾರವೇ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಸಾಧ್ಯತೆಯನ್ನು ಟೋಕಿಯೋ ಗವರ್ನರ್ ಯುರಿಕೊ ಕೊಯಿಕೆ ಅವರು ಉಲ್ಲೇಖೀಸಿದ್ದರು. ಕೋವಿಡ್-19 ವೈರಸ್ ಅನ್ನು ತಡೆಗಟ್ಟಲು ಮಾರ್ಚ್‌ನಲ್ಲಿ ಪರಿಷ್ಕರಿಸಿದ ಕಾನೂನಿ ನಂತೆ ಈ ರೋಗವು ಜೀವಗಳಿಗೆ “ಗಂಭೀರ ಅಪಾಯ’ವನ್ನುಂಟು ಮಾಡಿ ದರೆ ಮತ್ತು ಅದರ ಶೀಘ್ರ ಹರಡು ವಿಕೆಯು ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರ ಬಹುದಾದರೆ ಪ್ರಧಾನ ಮಂತ್ರಿ ತುರ್ತು ಪರಿಸ್ಥಿತಿ ಯನ್ನು ಘೋಷಿಸ ಬಹುದು ಎಂದು ಹೇಳಿತ್ತು.
Advertisement
ತುರ್ತು ಪರಿಸ್ಥಿತಿಯನ್ನು ಘೋಷಿಸಿದರೆ ಕೆಲವು ಪ್ರದೇಶಗಳಲ್ಲಿ ತೀವ್ರವಾಗಿ ಜನರಿಗೆ ತೊಂದರೆ ಯಾಗುವ ಸಾಧ್ಯತೆ ಇದೆ. ರಾಜ್ಯಪಾಲರಿಗೆ ವಿಶೇಷ ಅಧಿಕಾರ ದೊರೆಯಲಿದ್ದು ಎಲ್ಲರೂ ಮನೆಯೊಳಗೆ ಇರ ಬೇಕಾಗಿದ್ದು, ವ್ಯವಹಾರಗಳನ್ನು ಮುಚ್ಚಲು ಜನರಿಗೆ ಆದೇಶ ನೀಡಬಹು ದಾಗಿದೆ. ಆದರೆ ಇತರ ದೇಶಗಳಲ್ಲಿ ಕಂಡು ಬರುವ ರೀತಿಯ ಲಾಕ್‌ಡೌನ್ ಗಳನ್ನು ವಿಧಿಸಲಾಗುತ್ತಿಲ್ಲ. ಜನರು ಸರಕಾರದ ಸೂಚನೆಯನ್ನು ನಿರ್ಲಕ್ಷಿಸಿ ದರೆ ಯಾವುದೇ ದಂಡಗಳನ್ನು ಪಾವತಿಸ ಬೇಕಾಗಿ ಬರುವುದಿಲ್ಲ.