Advertisement

ತುರ್ತುಪರಿಸ್ಥಿತಿ ಹೋರಾಟಗಾರರಿಗೆ ಪಿಂಚಣಿ ಒದಗಿಸಿ: ಮಾಜಿ ಶಾಸಕ ರುಕ್ಮಯ ಪೂಜಾರಿ

01:37 AM Jun 26, 2022 | Team Udayavani |

ಮಂಗಳೂರು: ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಎಷ್ಟೇ ಹಿಂಸೆ ಅನು
ಭವಿಸಿದರೂ ಹೋರಾಟದಿಂದ ಹಿಂಜರಿಯುವ ಮನಸ್ಸು ಬರುತ್ತಿರಲಿಲ್ಲ. ಕೂಲಿ ಕಾರ್ಮಿಕರು ಕೂಡ ವಿವಿಧ ರೀತಿಯಲ್ಲಿ ಹೋರಾಟ ಮಾಡಿದ್ದಾರೆ ಎಂದು ತುರ್ತುಪರಿಸ್ಥಿತಿ ವೇಳೆ ಕಾರಾಗೃಹ ಶಿಕ್ಷೆ ಅನುಭವಿಸಿದ್ದ ಮಾಜಿ ಶಾಸಕ ರುಕ್ಮಯ ಪೂಜಾರಿ ಹೇಳಿದರು.

Advertisement

ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ನಗರದ ವೈಶ್ಯ ಎಜುಕೇಶನ್‌ಸೊಸೈಟಿ ಸಭಾಂಗಣದಲ್ಲಿ ಆಯೋಜಿ ಸಿದ್ದ “ತುರ್ತು ಪರಿಸ್ಥಿತಿಯ ಕರಾಳದಿನ’ 45ನೇ ವರ್ಷದ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಹೋರಾಟದಲ್ಲಿ ಪಾಲ್ಗೊಂಡಿದ್ದವರ ಪೈಕಿ ಅನೇಕರು ಸಂಕಷ್ಟದಲ್ಲಿದ್ದಾರೆ. ಅವರನ್ನು ಗುರು ತಿಸಿ ಪಿಂಚಣಿ ದೊರಕಿಸುವ ಕೆಲಸವಾಗಬೇಕು ಎಂದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಪ್ರಭಾ ಮಾಲಿನಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ಪ್ರೇಮಾನಂದ ಶೆಟ್ಟಿ, ನಿವೃತ್ತ ಪ್ರಾಂಶು ಪಾಲೆ ಹುಂಡಿ ಪ್ರಭಾ ಕಾಮತ್‌ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ ಸ್ವಾಗತಿಸಿ, ಸತೀಶ್‌ ಕುಂಪಲ ವಂದಿಸಿದರು.

ಉಡುಪಿಯಲ್ಲಿ ಕಾರ್ಯಕ್ರಮ
ಉಡುಪಿ: ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ “ತುರ್ತು ಪರಿಸ್ಥಿತಿ ಕರಾಳ ದಿನಕ್ಕೆ 45 ವರ್ಷಗಳು’ ಕಾರ್ಯಕ್ರಮ ನಡೆಯಿತು. ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್‌ ಶೆಟ್ಟಿ ಮಾತನಾಡಿದರು. ತುರ್ತು ಪರಿಸ್ಥಿತಿಯಲ್ಲಿ ಭಾಗಿಯಾಗಿದ್ದ ರಮಾಕಾಂತ ದೇವಾಡಿಗ ಅವರನ್ನು ಸಮ್ಮಾನಿಸಲಾಯಿತು.

ಹಿರಿಯ ತ್ಯಾಗ ಪ್ರೇರಣೆಯಾಗಲಿ: ಸಂಸದ ನಳಿನ್‌ ಕುಮಾರ್‌
ಹಿರಿಯರ ತ್ಯಾಗ, ಪರಿಶ್ರಮದ ಸ್ಮರಣೆ ಉತ್ತಮ ಆಡಳಿತ, ಒಳ್ಳೆಯ ಕೆಲಸ ಗಳನ್ನು ಮಾಡಲು ಪ್ರೇರಕ ಶಕ್ತಿಯಾಗ ಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ತುರ್ತುಪರಿಸ್ಥಿತಿ ವಿರುದ್ಧದ ಹೋರಾಟ ಎರಡನೇ ಸ್ವಾತಂತ್ರ್ಯ ಸಂಗ್ರಾಮ. ಅದು ಪ್ರಜಾಪ್ರಭುತ್ವ ಉಳಿಸಲು ನಡೆದ ಆಂದೋಲನ. ಪ್ರತೀ ಹಳ್ಳಿಯವರು ಕೂಡ ಪಾಲ್ಗೊಂಡಿದ್ದರು. ಹಿರಿಯರ ತ್ಯಾಗ, ಪರಿಶ್ರಮದಿಂದಾಗಿ ಇಂದು ಬಿಜೆಪಿ ಅಧಿಕಾರದಲ್ಲಿದೆ. ಇದನ್ನು ಕಾರ್ಯಕರ್ತರು ಮರೆಯಬಾರದು ಎಂದರು.

ಸರ್ವಾಧಿಕಾರಿ ಮನೋಧರ್ಮ
ತುರ್ತುಪರಿಸ್ಥಿತಿ ಹೇರುವ ಮೂಲಕ ಇಂದಿರಾಗಾಂಧಿಯವರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ ದೇಶವನ್ನು ಮತ್ತೂಮ್ಮೆ ಗುಲಾಮಗಿರಿಗೆ ತಳ್ಳಿದ್ದರು. ಬ್ರಿಟಿಷರಿಗಿಂತಲೂ 2 ಪಟ್ಟು ಹೆಚ್ಚು ದಬ್ಟಾಳಿಕೆ ನಡೆಸಿದರು. ತನ್ನನ್ನು ಯಾರೂ ಪ್ರಶ್ನಿಸಬಾರದು ಎಂಬ ಸರ್ವಾಧಿಕಾರಿ ಮಾನಸಿಕತೆ ಕಾಂಗ್ರೆಸ್‌ನದ್ದು. ಆಡಳಿತವಿದ್ದಾಗ ದರ್ಪ ತೋರಿಸಿದರು. ಇತಿಹಾಸ ತಿರುಚಿದರು.

ರಾಷ್ಟ್ರಪತಿ ಸ್ಥಾನ
ವನ್ನು ದುರುಪಯೋಗ ಪಡಿಸಿಕೊಂಡು ಹತ್ತಾರು ಸರಕಾರ ಗಳನ್ನು ಕಿತ್ತೂಗೆದರು. ಆದರೆ ನರೇಂದ್ರ ಮೋದಿಯವರು ಜನರ ಭಾವನೆಗಳನ್ನು ತಿಳಿದು ಅದರಂತೆ ಜನಪರ ಆಡಳಿತ ನಡೆಸುತ್ತಿದ್ದಾರೆ ಎಂದು ನಳಿನ್‌ ಹೇಳಿದರು.

ತಪ್ಪು ಮಾಡದಿದ್ದರೆ ಭಯವೇಕೆ?
ರಾಹುಲ್‌ ಗಾಂಧಿಯವರನ್ನು ಇಡಿ ವಿಚಾರಣೆ ನಡೆಸುತ್ತಿರುವುದರ ವಿರುದ್ಧ ಕಾಂಗ್ರೆಸ್‌ನವರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ತಪ್ಪಿತಸ್ಥರಲ್ಲದಿದ್ದರೆ ಭಯವೇಕೆ? ನರೇಂದ್ರ ಮೋದಿ, ಅಮಿತ್‌ ಶಾ ಅವರನ್ನು ವಿಚಾರಣೆ ನಡೆಸಿದಾಗ ಬಿಜೆಪಿ ಯವರು ಪ್ರತಿಭಟನೆ ಮಾಡಿರಲಿಲ್ಲ. ಕಾಂಗ್ರೆಸ್‌ನವರು ಸಂವಿಧಾನ, ಕಾನೂ ನಿಗೆ ಗೌರವ ನೀಡುತ್ತಿಲ್ಲ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next